Skip to product information
1 of 2

Cheemanahalli Rameshababu

ರಾಗಿ ಕಾಳು

ರಾಗಿ ಕಾಳು

Publisher -

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 100

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ರಮೇಶಬಾಬು ಅವರ ಕವಿತೆಗಳನ್ನು ಓದುತ್ತಾ ಇರುವಾಗ ಸಮಕಾಲೀನ ಕಾವ್ಯದ ಕುರಿತು ನನ್ನಲ್ಲಿ ಹಲವಾರು ಅಂಶಗಳು ಹಾದುಹೋದವು. ಸಮಕಾಲೀನವಾಗಿ ಕವಿತೆ ಬರೆಯುವುದು ವಿಪರೀತ ಸವಾಲಿನ ಕೆಲಸ. ಇದು ಕ್ಲೀಷೆಯ ಮಾತಲ್ಲ. ಕಾವ್ಯ ಕಟ್ಟುವವನಿಗೆ ಪ್ರತಿ ಯುಗದಲ್ಲೂ ಸವಾಲುಗಳಿರುತ್ತವೆ. ಆದರೆ ಮೂಡಿಯಲ್ಲಿ ಉತ್ತಮನೆನಿಸಿಕೊಳ್ಳುವ ಒಳ ಅಸೆಯಿಂದ ಕವಿ ಬರೆಯ ತೊಡಗುತ್ತಾ ನಾದ್ದರಿಂದ ಯುಗದ ಸಂವೇದನೆ ಯನ್ನು ತನ್ನ ಬರವಣಿಗೆಗೆ ಬಗ್ಗಿಸಿಕೊಳ್ಳಲು ಯತ್ನಿಸುತ್ತಿರುತ್ತಾನೆ. ಹೇಳುವ ಪದಕ್ಕೆ ಶೃತಿಯ ಹದ ಒದಗಿ ಕವಿತೆ ಕವಿತೆಯಾಗುವ ಕಷ್ಟ ದೇವರಿಗೇ ಪ್ರೀತಿ. ಈ ಹೊತ್ತಿನ ರಚನೆಗಳಲ್ಲಿ ಕಾವ್ಯದ ಆತ್ಮದ ಇರವು ಹಾಗು ಅದರ ಸಂರಚನೆಯ ಹಂದರಗಳು ಕಾವ್ಯದ ಸಾಂಪ್ರದಾಯಿಕ ಲಕ್ಷ್ಮಣರೇಖೆಗಳನ್ನು ದಾಟಿ ಸ್ವಾತಂತ್ರ್ಯ ವನ್ನು ನೆಚ್ಚಿಕೊಂಡಿವೆ. ಮೇಲ್ನೋಟಕ್ಕೆ ಸ್ವಾತಂತ್ರ್ಯದ ಸುಖ ಎಂದೆನಿಸಿದರೂ ಹೊಸರೂಢಿಯನ್ನು ರೂಢಿಸಿಕೊಳ್ಳುವ ಸವಾಲನ್ನು ಸೆರಗಿನಲ್ಲಿ ಕಟ್ಟಿಕೊಂಡಿ ರುವಂತದ್ದು. ರಮೇಶಬಾಬು ಅವರಿಗೆ ಈ ಕಷ್ಟಗಳು ತಿಳಿದಿಲ್ಲವೆಂದಲ್ಲ. ಅವರ 'ನಾಗ್ದಾಳೆ' ತರದ ರಚನೆಗಳನ್ನು ನೋಡಿಯೇ ಈ ಮಾತುಗಳು ಇಲ್ಲಿ ಹೊಳೆಯುತ್ತಿವೆ. ಕಾವ್ಯರಚನೆಯನ್ನು ಗ್ರಹಿಸಿ ಅದನ್ನು ಮರುರಚಿಸಬೇಕೆನ್ನುವ ಹಂಬಲವುಳ್ಳ ರಮೇಶಬಾಬು ಅವರಿಗೆ ಸಮಕಾಲೀನ ಕಾವ್ಯ ಎತ್ತುವ ಕಂಟೆಂಟ್ ಮತ್ತು ಸಂರಚನೆಯ ಕಷ್ಟಗಳು ತಿಳಿದಿವೆ. ಹಾಗೆಂದೇ ಅವರ ಈ ಹೊಸ ಸಂಕಲನದ ಕವಿತೆಗಳಲ್ಲಿ ಒಂದು ಬಗೆಯ ಎಚ್ಚರ ಕಾಣುತ್ತದೆ. ಹೊಸಕಾವ್ಯದಲ್ಲಿ ವಸ್ತು ಮುಖ್ಯವೊ ಸಂರಚನೆ ಮುಖ್ಯವೊ

View full details