Skip to product information
1 of 1

Dr. Gajanana Sharma

ಪುನರ್ವಸು - ಕಾದಂಬರಿ

ಪುನರ್ವಸು - ಕಾದಂಬರಿ

Publisher - ಅಂಕಿತ ಪುಸ್ತಕ

Regular price Rs. 495.00
Regular price Rs. 495.00 Sale price Rs. 495.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ವಿಶ್ವೇಶ್ವರಯ್ಯನವರ ಕಾಲಘಟ್ಟ, ಆ ಕಾಲದ ಕಾಡು, ನಿರ್ಮಾನುಷ ಜೋಗದ ಪರಿಸರ, ಸುತ್ತುಮುತ್ತಲ ಹಳ್ಳಿಗಳು, ಕೃಷ್ಣರಾವ್ ವಸುಧಾರ ದಾಂಪತ್ಯ, ಕಡಾಂಬಿ, ಫೋರ್ಟ್ಸ್ ಮುಂತಾದ ಅಧಿಕಾರಿಗಳ ಶ್ರದ್ಧೆ, ತುಂಗಕ್ಕಯ್ಯ, ದತ್ತಪ್ಪ ಹೆಗಡೆ, ಶರಾವತಿ, ಭವಾನಿಯಂಥ ಪಾತ್ರಗಳು, ಲೇಖಕರು ವಿವರಿಸುವ ಮರಗಿಡಗಳು, ಪರಿಸರ ಇವೆಲ್ಲವೂ ಅನನ್ಯ. ಇಲ್ಲಿ ಅನುಭವ ಮತ್ತು ನೆನಪು ಮಿಳಿತಗೊಂಡು ಕಾಲಾತೀತವಾದ ರಸಾನುಭೂತಿಯನ್ನು ಒದಗಿಸುತ್ತದೆ ಅನ್ನುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.

ಕಾದಂಬರಿಯಲ್ಲಿ ಲೇಖಕರು ಎರಡು ಮಹತ್ವದ ಮಜಲುಗಳನ್ನು ದಾಟಿದ್ದಾರೆ. ಒಂದು, ನಮಗೆ ಈವರೆಗೆ ಗೊತ್ತಿದ್ದ ಶರಾವತಿಗಿಂತ ಭಿನ್ನವಾದ ಶರಾವತಿಯನ್ನು ತೋರಿಸಿಕೊಟ್ಟಿದ್ದು, ಎರಡು, ಶರಾವತಿಯ ಪರಿಸರದ ಜೊತೆಗೇ ಬದುಕನ್ನು ಹೆಣೆದದ್ದು. ಇವೆರಡೂ ಅವರನ್ನು ವಿಶಿಷ್ಟವಾದ ಕಥನಕಾರರನ್ನಾಗಿ ಮಾಡಿದೆ. ಇಡೀ ಕತೆಯಲ್ಲಿ ಮನೋಲಹರಿಯಷ್ಟೇ ಗಾಢವಾಗಿ ವ್ಯಾವಹಾರಿಕ ವಿವರಗಳೂ ಬರುತ್ತದೆ. ಆ ವಿವರಗಳ ಒಳಗೆ ಈ ವಿವರಗಳು ಸೇರಿಕೊಳ್ಳುವ ಬಗೆ ಸೊಗಸಾಗಿದೆ. ಇಂಥ ಕತೆಗಳು ಕನ್ನಡದಲ್ಲಿ ಅಪರೂಪ, ಇಂಗ್ಲಿಷಿನಲ್ಲಿ ಅನೇಕರು ಹೀಗೆ ವಾಸ್ತವ ಮತ್ತು ಕಲ್ಪನೆಯನ್ನು ಬೆಳೆಯುವ ಕೆಲಸ ಮಾಡಿದ್ದಾರೆ. ಇದು ಒಂದು ರೀತಿಯಲ್ಲಿ ಕಥಾಸಾಕ್ಷ್ಯಚಿತ್ರದಂತಿದೆ.

-ಜೋಗಿ

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
C
Customer
ಹೃದಯ ಸ್ಪರ್ಶಿ ಕಾದಂಬರಿ

ಸೂಪರ್ ಕಾದಂಬರಿ.....ಅದರಲ್ಲೂ ದತ್ತಪ್ಪ ಹೆಗಡೆ,ತುಂಗಕ್ಕಯ್ಯ,ವಸುದಾ,ಇತ್ಯಾದಿ ಪಾತ್ರಗಳು ಹೃದಯಸ್ಪರ್ಶಿಯಾಗಿವೆ.ಕಾದಂಬರಿ ಓದುವಾಗ ಗೊತ್ತಿಲ್ಲದೆ ಕಣ್ಣು ಒದ್ದೆಯಾಗುವುದು.