Skip to product information
1 of 2

R. K. Asha Pramod

ಪ್ರಥಮ ಪಯಣ

ಪ್ರಥಮ ಪಯಣ

Publisher -

Regular price Rs. 95.00
Regular price Rs. 95.00 Sale price Rs. 95.00
Sale Sold out
Shipping calculated at checkout.

- Free Shipping Above ₹300

- Cash on Delivery (COD) Available

Pages - 120

Type - Paperback

'ಹೆಣ್ಣೊಳಗಿನ ಅಗೋಚರ ಶಕ್ತಿಗೆ ಸಮನಾರು ಇಲ್ಲ' ಎಂಬ ಸಾಲಿನಲ್ಲೇ, ಒಂದು ಹೆಣ್ಣನ್ನು ಪ್ರತಿನಿಧಿಸುತ್ತ, ಅವಳಿಗೆ ಪ್ರಚೋದನೆ ನೀಡುತ್ತ, ಹೆಣ್ಣಿನ ಗಟ್ಟಿತನವನ್ನು ಬಡಿದೆಬ್ಬಿಸುವ ಪದಗಳು ಹೆಚ್ಚು ಪ್ರಭಾವಿತವಾಗಿವೆ.

ಆರ್.ಕೆ. ಆಶಾ ಪ್ರಮೋದ್‌ರವರು ವಿವಾಹಾನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿ, ಪ್ರಸ್ತುತ ಸಹಾಯಕ ಖಜಾನಾಧಿಕಾರಿಯಾಗಿ ಖಜಾನೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಬೆಂಗಳೂರಿನ ಯಾಂತ್ರಿಕ ಜೀವನದಲ್ಲಿ ಕಳೆದುಹೋಗದೆ, ಕರ್ತವ್ಯಕ್ಕೂ ನ್ಯಾಯ ಒದಗಿಸಿ, ಮನೆಯ ಜವಾಬ್ದಾರಿಯನ್ನು ನೈಪುಣ್ಯತೆಯಿಂದ ಸಮತೋಲನವಾಗಿ ಕಾಪಾಡಿಕೊಂಡು ಬಿಡುವಿಲ್ಲದ ಬದುಕಿನಲ್ಲೂ ಸದಾ ಹಸನ್ಮುಖಿಯಾಗಿ ತನ್ನ ವೃತ್ತಿ ಮತ್ತು ಕುಟುಂಬದ ನಿರ್ವಹಣೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಬಹಳ ಶ್ಲಾಘನೀಯ.

ಹೆಣ್ಣು ಅಬಲೆಯಲ್ಲ, ಸಾಧನೆಯ ಹಾದಿಯಲ್ಲಿ ಕಾರಣಗಳ ಸೊಲ್ಲಡಗಿಸಿ, ಗುರಿಯ ಗೆಲ್ಲುವ ಬಗೆಗಿನ ಪ್ರಚೋದನೆ ಮಾತುಗಳು, ದೈವದ ಅದರಲ್ಲೂ ಶ್ರೀ ಕೃಷ್ಣನ ಬಗೆಗಿನ ಮುಗ್ಧ ಪ್ರೀತಿ, ಹೆಣ್ಣಿನ ಸೂಕ್ಷ್ಮವಾದ ಸಣ್ಣ-ಪುಟ್ಟ ಆಸೆಗಳ ಪ್ರತಿಬಿಂಬವಾದ 'ಮೌನಕವಿತೆ' ಕವನವು ಓದುಗರಲ್ಲಿ ಹೊಸ ಆಸೆಗಳನ್ನು ಹುಟ್ಟಿಸುತ್ತವೆ. ಇವರ ಕವಿತೆಗಳ ಗುಚ್ಚಗಳಲ್ಲಿ ಹೆಚ್ಚು ವಿರಹ, ವಿಶಾದ, ತೊಳಲಾಟ, ಕಾತರಗಳಿದ್ದರೂ ಸಹ ಅಲ್ಲಲ್ಲಿ ರೈತನ, ಕರುನಾಡಿನ ಬಗೆಗಿನ ಆಶಯಗಳಿವೆ. ಹಾಗೆ ಜೀವನವನ್ನು ವಿಚಾರವಂತಿಕೆಯಲ್ಲಿ ವಿಶ್ಲೇಷಿಸಿರುವ 'ಎನ್ನ ಆಡಿಸುವ ಸೂತ್ರಧಾರ' ಕವಿತೆಯು ಪ್ರಶ್ನಾರೂಪಕವಾಗಿ ಚಿತ್ರಿತವಾಗಿದೆ.

ಮೊದಲ ಪ್ರಯತ್ನದಲ್ಲಿಯೇ ಭರವಸೆಯ ಬೆಳಕಾಗಿ ಕುಸುರಿಗೊಂಡು ರೂಪ ತಳೆದ ಕವಿತೆಗಳು ಮುಂದಿನ ದಿನಗಳಲ್ಲಿ ಉನ್ನತ ಕಲಾಕೃತಿಯಾಗಿ ಜೀವ ತಳೆದು ಹೊಮ್ಮಿ ಬರಲೆಂದು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹೆಣ್ಣಿನ ಪ್ರತಿನಿಧಿಯಾಗಿ ಸ್ಥಿರವಾಗಿ ನಿಂತು, ಹೆಮ್ಮರವಾಗಿ ಬೆಳೆಯಲೆಂದು ಆಶಿಸುತ್ತೇನೆ.

ಪ್ರೀತಿಯಿಂದ
-ಶ್ರೀಮತಿ ಟಿ.ಎಸ್. ಮಂಜುಳ ರಾಜಣ್ಣ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)