Skip to product information
1 of 1

S. R. Bhat

ಪ್ರಾಚೀನ ಭಾರತದಲ್ಲಿ ಜನಜೀವನ

ಪ್ರಾಚೀನ ಭಾರತದಲ್ಲಿ ಜನಜೀವನ

Publisher -

Regular price Rs. 30.00
Regular price Rs. 30.00 Sale price Rs. 30.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಇದು ಶ್ರೀ ಎಸ್. ಆರ್. ಭಟ್‌ರವರ ವಿದ್ವತ್ಪೂರ್ಣವಾದ ಬರಹದ ಮರುಮುದ್ರಣ. ನಮ್ಮ ಇಂದಿನ ಪರಿಸ್ಥಿತಿಯ ತಿಳಿವಳಿಕೆ ಹಾಗೂ ಮುಂದಿನ ಗುರಿಯ ಮುನ್ನೋಟ ಸ್ಪಷ್ಟವೂ ವಾಸ್ತವಿಕವೂ ಆಗಬೇಕಾದರೆ, ನಮ್ಮ ಪ್ರಾಚೀನ ಇತಿಹಾಸ, ಸಂಸ್ಕೃತಿ, ಜನಜೀವನ, ಪರಂಪರೆಗಳ ಆಳವಾದ ಅಧ್ಯಯನ ಬಹಳ ಅಗತ್ಯ. ವೇದೋಪನಿಷತ್ತುಗಳು, ಸ್ಮೃತಿ-ಶಾಸ್ತ್ರಗಳು, ಪುರಾಣ ಕಥೆಗಳು ಮತ್ತು ಭಗವದ್ಗೀತೆ ಮೊದಲಾದವುಗಳಲ್ಲಿ ಜೊಳ್ಳಿನ ರಾಶಿಯೊಂದಿಗೆ ಹುದುಗಿರುವ ಕಾಳುಗಳನ್ನು ಆರಿಸಿ ತೆಗೆದು, ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ, ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳಬೇಕಾಗಿದೆ. ಅದನ್ನು ಮಾರ್ಕ್ಸ್‌ವಾದೀ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಿರುವ ಕೆಲವೇ ಕೆಲವರಲ್ಲಿ ಎಸ್. ಆರ್. ಭಟ್ ಒಬ್ಬರು.

ಭಟ್ಟರು ಪದವೀಧರರು, ಕೆಲವು ವರ್ಷಗಳ ಕಾಲ ಅಧ್ಯಾಪಕರಾಗಿದ್ದವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ 1942ರಲ್ಲಿ ಸೆರೆಮನೆ ವಾಸ ಅನುಭವಿಸಿದವರು. ಒಂದು ವಾಣಿಜ್ಯ ಸಂಸ್ಥೆಯಲ್ಲಿ ತನಗಿದ್ದ ಉದ್ಯೋಗವನ್ನು ತ್ಯಜಿಸಿ, ಕಾರ್ಮಿಕರ ಹಾಗೂ ರೈತರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ ಸ್ಥಾಪನೆಯೊಂದಿಗೆ ಅದರ ಕಾರ್ಯದರ್ಶಿಯಾಗಿ ಅನೇಕ ವರ್ಷಗಳ ಕಾಲ ದುಡಿದವರು. *ಕೆಂಬಾವುಟ' ಪತ್ರಿಕೆಯ ಮೊದಲ ಸಂಪಾದಕರಾಗಿಯೂ 'ಅರುಣ' ಮಾಸಪತ್ರಿಕೆಯ ಜವಾಬ್ದಾರಿ ಹೊತ್ತೂ ಕೆಲಸ ಮಾಡಿದವರು. 'ವಿಶ್ವ ಕಥಾಕೋಶ'ದ ಸಂಪಾದಕರಲ್ಲಿ ಒಬ್ಬರಾಗಿದ್ದು, ಅವಿಶ್ರಾಂತವಾಗಿ ಶ್ರಮಿಸಿದವರು.

ದಿವಂಗತ ಭಟ್‌ ಅನೇಕ ಕೃತಿಗಳನ್ನು ಭಾಷಾಂತರಿಸಿದ್ದಾರೆ. ಎಸ್. ಜಿ. ಸರ್ದೇಸಾಯಿ ಮತ್ತು ದಿಲೀಪ್ ಬೋಸ್ ಅವರ 'ಮಾರ್ಕ್ಸ್‌ವಾದ ಮತ್ತು ಭಗವದ್ಗೀತೆ'ಯ ಸಮರ್ಥ ಅನುವಾದ ಅವುಗಳಲ್ಲೊಂದು. ಅವರ ಸ್ವಂತ ಕೃತಿಯಾದ 'ಹಿಂದೂ-ಮುಸ್ಲಿಮ್ ಘರ್ಷಣೆಗಳ ಸಮಸ್ಯೆ' ದೇಶದಲ್ಲಿ ಮತೀಯ ಸೌಹಾರ್ದತೆಯ ಸ್ಥಾಪನೆಗೆ ಅವರು ನೀಡಿರುವ ಒಂದು ಕೊಡುಗೆ. ಈ ಕೃತಿ ವಿಸ್ತೃತಗೊಂಡು 'ಕೋಮುವಾದದ ಕರಾಳ ಮುಖಗಳು' ಎಂಬ ಶೀರ್ಷಿಕೆಯೊಂದಿಗೆ ಹಲವು ಮುದ್ರಣಗಳನ್ನು ಕಂಡಿದೆ.

ಪ್ರಕಾಶಕರು - ನವಕರ್ನಾಟಕ ಪ್ರಕಾಶನ

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)