Skip to product information
1 of 1

Fakira

ಪೂರ್ಣಚಂದ್ರನಿಗೆ ಮುಖವಾಡವಿಲ್ಲ

ಪೂರ್ಣಚಂದ್ರನಿಗೆ ಮುಖವಾಡವಿಲ್ಲ

Publisher - ಪಂಚಮಿ ಪಬ್ಲಿಕೇಷನ್ಸ್

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಕಾವ್ಯಕ್ಕೆ ಅನುಭವವೇ ಮೂಲದ್ರವ್ಯ ಎಂಬ ಮಾತು ಇದೆ. ಆದರೆ ತನ್ನ ಅನುಭವವನ್ನು ಹೇಳಿಬಿಡುವ ಆತುರದಲ್ಲಿ ಕಾವ್ಯಕ್ಕೆ ಸೂಕ್ಷ್ಮತೆ ಸಾಧಿಸಲಾಗದು, ಸಹೃದಯನು ದ್ರವಿಸಿದಾಗ ಮಾತ್ರ ಕವಿತೆ ತನ್ನ ಜನ್ಮ ಸಾರ್ಥಕತೆಯನ್ನು ಪಡೆಯುತ್ತದೆ. ಆಗ ಕವಿ ಕೂಡ ಸಾರ್ಥಕತೆಯನ್ನು ಪಡೆಯುತ್ತಾನೆ, ಫಕೀರ ಅವರ 'ಪೂರ್ಣಚಂದ್ರನಿಗೆ ಮುಖವಾಡವಿಲ್ಲ' ಸಂಕಲನದ ಕವಿತೆಗಳು ತಮ್ಮ ಜನಸಾರ್ಥಕತೆಯನ್ನು ಕಂಡುಕೊಂಡಿವೆ. ಕವಿಯೂ ಸಾರ್ಥಕತೆಯನ್ನು ಅನುಭವಿಸಿದ್ದಾನೆಂದು ನಾವು ನಿಖರವಾಗಿ ಹೇಳಬಹುದು.
ಪೂರ್ಣಚಂದಿರನಿಗೆ ಮುಖವಾಡವಿಲ್ಲದಿದ್ದರೂ ಪೂರ್ಣಚಂದ್ರನಾಗುವ ತನಕ ಮಾನವ ತನ್ನ ಬದುಕೆನ್ನುವ ಮುಖವಾಡದೊಳಗೇ ತನ್ನ ಇರವು ಹಾಗೂ ಅರಿವನ್ನು ತೋರುತ್ತಿರಬೇಕೆಂದು ನಿರ್ಧರಿಸಿ ಸಂಕಲನದ 41 ಕವನಗಳಿಂದ ಮುಖವಾಡದೊಳಗಿವೆ ಬದುಕು ಮತ್ತು ಮುಖವಾಡ ಕಳಚಿದಂತೆ ಸಿಗಬಹುದಾದ ಒಳಿತುಗಳನ್ನು ಅನಾವರಣ ಮಾಡಿದ್ದಾರೆ. ನಮ್ಮೆಲ್ಲರ ಬದುಕ ಭಾವಗೀತೆಯಂತೆ ಹೊರಬಂದಿರುವ ಫಕೀರ ಅವರ 'ಪೂರ್ಣಚಂದ್ರನಿಗೆ ಮುಖವಾಡವಿಲ್ಲ' ನಮ್ಮೆಲ್ಲರೆದೆಯ ಪಿಸುಗುಡುವಿಕೆಯೇ ಆಗಿದೆ. ನಾವದನ್ನು ಗಣನೆಗೆ ತರದಂತಿದ್ದರೆ, ಕವಿ ಶ್ರೀಧರ ಬನವಾಸಿ ಅವರು ಅಭಿವ್ಯಕ್ತಿ, ಕಾವ್ಯವಾಗಿ, ನಮ್ಮೆದೆಯ ಭಾರವನ್ನು ಹಗುರವಾಗಿಸಿದ್ದಾರೆಂಬ ನಂಬಿಕೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)