Dr. M. SS. Murthy, B. Tejkumar
ಪ್ಲಾಸ್ಟಿಕ್ಸ್ ಪುರಾಣ
ಪ್ಲಾಸ್ಟಿಕ್ಸ್ ಪುರಾಣ
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹300
- Cash on Delivery (COD) Available
Pages - 168
Type - Paperback
Couldn't load pickup availability
ವಿಜ್ಞಾನ ಮತ್ತು ತಂತ್ರಜ್ಞಾನ ಒಳಗೊಂಡ ನಾಗಾಲೋಟದಲ್ಲಿ ಜಗತ್ತು ಹಲವಾರು ಉತ್ಕೃಷ್ಟ ಬೆಳವಣಿಗೆಗಳನ್ನು ಕಂಡಿದ್ದರೂ, ಜೊತೆಜೊತೆಗೆ ಬಹು ಎತ್ತರದ ಸವಾಲುಗಳನ್ನು ಎದುರಿಸಬೇಕಾಗಿದೆ. ಪ್ಲಾಸ್ಟಿಕ್ಸ್ ಹಾಗೂ ಪಾಲಿಮರ್ ಕ್ಷೇತ್ರ ಕೂಡ ಇದರ ಹೊರತಾಗಿಲ್ಲ. ಪ್ಲಾಸ್ಟಿಕ್ಸ್ ಬಗೆಗಿನ ವಿಚಾರಗಳು ಸಮರ್ಪಕ ರೀತಿಯಲ್ಲಿ ಪ್ರಚಲಿತವಾಗದೇ, ಅದರ ಉಪಯೋಗಗಳಲ್ಲಿನ ನಕಾರಾತ್ಮಕ ವಿಷಯಗಳು ಮುನ್ನೆಲೆಗೆ ಬಂದಿಲ್ಲ. ಇದನ್ನು ಮನಗೊಂಡ ಲೇಖಕರು ಈ ಪುಸ್ತಕದಲ್ಲಿ ಸಂಕ್ಷಿಪ್ತ ರೀತಿಯಲ್ಲಿ ಪಾಲಿಮರ್ ಎಂಬ ವಿಸ್ಮಯಕಾರಿ ಪ್ರಪಂಚವನ್ನು ಓದುಗರಿಗೆ ಪರಿಚಯಿಸಿದ್ದಾರೆ. ಈ ಕೃತಿಯಲ್ಲಿ ಪಾಲಿಮರ್ ವಿಜ್ಞಾನ, ಪ್ಲಾಸ್ಟಿಕ್ಸ್ ಸಂಸ್ಕರಣಾ ವಿಧಾನಗಳು, ದೈನಂದಿನ ಬದುಕಿಗೆ ಪ್ಲಾಸ್ಟಿಕ್ಸ್ ಬಳಕೆ, ಪ್ಲಾಸ್ಟಿಕ್ಸ್ ಮರುಬಳಕೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಜೈವಿಕ ಪಾಲಿಮರ್ಸ್, ಶೈಕ್ಷಣಿಕ ಮಾರ್ಗಗಳು, ಉದ್ಯೋಗಾವಕಾಶಗಳಂತಹ ಹಲವು ಅಂಶಗಳು ಅಡಕವಾಗಿವೆ.
ಈ ಪುಸ್ತಕವನ್ನು ಓದಿದ ನಂತರ ಪ್ಲಾಸ್ಟಿಕ್ಸ್ ಬಗೆಗಿನ ಸೂಕ್ತ ವಿಚಾರಧಾರೆಗಳು ಮನವರಿಕೆಯಾಗುವುದಲ್ಲದೆ, ನಮ್ಮೆಲ್ಲರ ಭವಿಷ್ಯದಲ್ಲಿ ಪ್ಲಾಸ್ಟಿಕ್ಸ್ ಬಗೆಗಿನ ಮಹತ್ವ ಅರಿತು, ಸಾಮಾಜಿಕ ಹೊಣೆಗಾರಿಕೆ ಹಾಗೂ ಪರಿಸರ ಸ್ನೇಹಿ ಹೆಜ್ಜೆಗಳನ್ನು ಇಡಲು ಸಹಕಾರಿಯಾಗುತ್ತದೆ.
Share


Subscribe to our emails
Subscribe to our mailing list for insider news, product launches, and more.