Lakshmana Kodase
ಪತ್ರಕರ್ತನ ಪಯಣ
ಪತ್ರಕರ್ತನ ಪಯಣ
Publisher - ವೀರಲೋಕ ಬುಕ್ಸ್
- Free Shipping Above ₹350
- Cash on Delivery (COD) Available*
Pages - 284
Type - Paperback
Couldn't load pickup availability
ಹಿರಿಯರಾದ ಕೊಡಸೆ ಸರ್.
ನಾನು ಅದೆಷ್ಟೋ ಸಲ ನನ್ನಲ್ಲಿಯೇ ಅಂದುಕೊಂಡದ್ದಿದೆ. ಪ್ರತಿಭೆ ಮತ್ತು ಕಠಿಣ ಶ್ರಮ ಎರಡೂ ಒಟ್ಟಿಗೇ ಸೇರಿದರೆ ಏನಾಗಬಹುದು ಎಂಬುದಕ್ಕೆ ನೀವೊಂದು ತಾಜಾ ಉದಾಹರಣೆಯಾಗಿ ನಿಲ್ಲಬಲ್ಲಿರಿ!! ನೀವು ಪತ್ರಿಕಾ ಕ್ಷೇತ್ರದಲ್ಲಿ ನಿಮ್ಮ ಬರವಣಿಗೆಯಿಂದ, ಪ್ರಾಮಾಣಿಕ ಕೆಲಸದಿಂದ, ಕರ್ತೃತ್ವಶಕ್ತಿಯಿಂದ, ಜಾಣ್ಯ, ದಕ್ಷತೆಗಳಿಂದ, ಹುರುಪು, ಹುಮ್ಮಸ್ಸಿನಿಂದ, ನಿರಂತರ ಚಿಂತನಶೀಲತೆಯಿಂದ, ಕಳಕಳಿ-ಕಾಳಜಿಯಿಂದ, ಕರ್ತವ್ಯ ನಿಷ್ಠೆಯಿಂದ ಮಾಡಿರುವ ಸೇವೆ ಅನುಪಮವಾದುದು.
-ಪ್ರೊ. ಓಂಕಾರ ಕಾಕಡೆ
ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ
'ಸಾಪ್ತಾಹಿಕಗಳು ಸಮಾಜದ ಜ್ಞಾನ ಬಿಂದುಗಳು' ಎಂಬುದನ್ನು ತೋರಿಸಿಕೊಟ್ಟ ಖ್ಯಾತಿ ಇವರದ್ದಾಗಿದೆ. ಇವರ ಮುಂದಾಳತ್ವದಲ್ಲಿ ಹೊರಬರುತ್ತಿದ್ದ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ 'ಜ್ಞಾನದ ಕಣಜ' ಆಗಿತ್ತು. 'ಪ್ರಜಾವಾಣಿ' ದಿನಪತ್ರಿಕೆ ಜನರ ನಾಡಿಮಿಡಿತವಾಗಲು ಅಹರ್ನಿಶಿ ದುಡಿದವರಲ್ಲಿ ಇವರು ಪ್ರಮುಖರು. ಅಷ್ಟೇ ಅಲ್ಲ, ಮಾಧ್ಯಮದ ಬೆಳವಣಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಅಪ್ಪಟ ಪತ್ರಕರ್ತರಿವರು.
-ಡಾ. ಬಿ.ಕೆ.ರವಿ
ಕುಲಪತಿ, ಕೊಪ್ಪಳ ವಿಶ್ವವಿದ್ಯಾಲಯ, ಕೊಪ್ಪಳ
Share

Subscribe to our emails
Subscribe to our mailing list for insider news, product launches, and more.