Girimane Shyamarao
Publisher - ಗಿರಿಮನೆ ಪ್ರಕಾಶನ
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಪಶ್ಚಿಮ ಘಟ್ಟ ಸೂರೆ ಹೋಗುತ್ತಿದೆ. ತಿಳಿದೋ ತಿಳಿಯದೆಯೋ ಇಂಚಿಂಚಾಗಿ ಅದನ್ನು ನಾಶ ಮಾಡುತ್ತಿದ್ದೇವೆ. ಇಲ್ಲಿ ಮುಂದಾಲೋಚನೆ ಇಲ್ಲದೆ ಮಾನವ ಇಡುವ ಒಂದೊಂದು ಹೆಜ್ಜೆಯೂ ತಪ್ಪು ಹೆಜ್ಜೆಗಳಾಗುತ್ತವೆ. ಮಾಡುವ ಒಂದೊಂದು ತಿಳಿಗೇಡಿತನದ ಕೆಲಸದಿಂದಲೂ ತುಂಬಲಾರದ ನಷ್ಟ ಉಂಟಾಗುತ್ತದೆ. ಅದನ್ನು ನಾಶ ಮಾಡಿಯೇ ನಾವು ಬದುಕುವ ಅನಿವಾರ್ಯತೆ ಏನೂ ಇಲ್ಲ. ಇರುವುದನ್ನು ಪರಿಸರಕ್ಕೆ ಹಾನಿಯಾಗದಂತೆ ಬಳಸಿಕೊಳ್ಳುವ ಚಾಕಚಕ್ಯತೆ, ದೂರದೃಷ್ಟಿ, ಛಲ, ಪ್ರಾಮಾಣಿಕ ಪ್ರಯತ್ನ ನಮಗಿಲ್ಲ ಅಷ್ಟೆ. ಸಮೃದ್ಧಿಯಾಗಿ ಸಿಗುವ ಸೌರಶಕ್ತಿಯನ್ನು ಪರಿಸರಕ್ಕೆ ಹಾನಿಯಾಗದಂತೆ ಪಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಎಷ್ಟು ನಡೆದಿದೆ? ಪಶ್ಚಿಮಘಟ್ಟದ ಹೃದಯ ಭಾಗದಲ್ಲಿ ಕಟ್ಟುವ ಒಂದು ಡ್ಯಾಂನಿಂದ ಅದೆಷ್ಟು ಅನಾಹುತಗಳಾಗಬಹುದೆಂಬ ಕಲ್ಪನೆ ಪಶ್ಚಿಮಘಟ್ಟದ ಸೆರಗಿನಲ್ಲಿಯೇ ಹುಟ್ಟಿ ಬೆಳೆದು ಕಷ್ಟ ನಷ್ಟ ಅನುಭವಿಸಿದ ನನಗೆ ಓದಿ ತಿಳಿಯಬೇಕಿಲ್ಲ. ಅಲ್ಲಲ್ಲಿ ಅದೇ ಕೆಲಸ ಮುಂದುವರೆದರೆ ಪರಿಣಾಮ? ಅದೇಕೆ ಹಳ್ಳಿ ಬಿಟ್ಟು ನಗರಕ್ಕೆ ವಲಸೆ ಹೋಗುತ್ತಾರೆ ಜನ? ಅದೇಕೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ? ಕೆಟ್ಟ ವ್ಯವಸ್ಥೆಯೊಳಗೆ ಸಿಲುಕಿದ ಮಕ್ಕಳ ಬದುಕು ಹೇಗಾಗುತ್ತದೆ? ಎಲ್ಲದರ ಒಂದು ಚಿತ್ರಣ ಈ ಪುಸ್ತಕದಲ್ಲಿ ನಿಮಗೂ ಸಿಗಬಹುದು.
