Panje Mangesharayaru
Publisher - ಅಂಕಿತ ಪುಸ್ತಕ
Regular price
Rs. 195.00
Regular price
Rs. 195.00
Sale price
Rs. 195.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಪಂಜೆ ಮಂಗೇಶರಾಯರು ಕನ್ನಡ ನವೋದಯದ ಮಹಾಬೆಳಗು ಎನ್ನುವುದು ಒಂದು ರೂಪಕ. ಹತ್ತೊಂಬತ್ತನೆಯ ಶತಮಾನದ ಕೊನೆಯ ಹಾಗೂ ಇಪ್ಪತ್ತನೆಯ ಶತಮಾನದ ಮೊದಲ ಅರ್ಧದ ಕಾಲಾವಧಿಯಲ್ಲಿ ಈ ಮಹಾಬೆಳಗು ಕನ್ನಡ ಸಾಹಿತ್ಯರಂಗವನ್ನು ಬೆಳಗಿಸಿತು. ಈ ಮಹಾಪರ್ವದ ಮೊದಮೊದಲ ದಿನಗಳಲ್ಲಿ ಕನ್ನಡವನ್ನು ಸಿಂಗರಿಸಿದವರಲ್ಲಿ ಪಂಜೆಯವರು ಪ್ರಮುಖರು.
ಬೆನಗಲ್ ರಾಮರಾಯರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ 'ಸುವಾಸಿನಿ' (1900-1905) ಪತ್ರಿಕೆಯಲ್ಲಿ ಪಂಜೆಯವರ ಅನೇಕ ಚಾರಿತ್ರಿಕ ಮಹತ್ವ ಉಳ್ಳ ಕತೆಗಳು ಅಚ್ಚಾದುವು. 'ಭಾರತಶ್ರವಣ', 'ಕಮಲಪುರದ ಹೋಟ್ಟಿನಲ್ಲಿ, 'ನನ್ನ ಚಿಕ್ಕ ತಾಯಿ', 'ನನ್ನ ಹೆಂಡತಿ', 'ನನ್ನ ಚಿಕ್ಕ ತಂದೆ', 'ನನ್ನ ಚಿಕ್ಕ ತಂದೆಯವರ ಉಯಿಲ್' - ಇವಿಷ್ಟು ಒಂದು ಜಾತಿಯವು. ಈ ಕತೆಗಳಿಂದಲೇ ಮುಂದೆ ಕನ್ನಡದಲ್ಲಿ 'ಸಣ್ಣಕತೆ' ಎನ್ನುವ ಪ್ರಕಾರ ಟಿಸಿಲೊಡೆದಿರುವುದು. ಈ ಕಥೆಗಳೆಲ್ಲ ನಾವಿಂದು 'ಸಣ್ಣಕಥೆ' ಎಂದು ಯಾವುದನ್ನು ಗುರುತಿಸುತ್ತೇವೆಯೋ ಅದಕ್ಕಿಂತ ಕೊಂಚ ಭಿನ್ನ ಸ್ವರೂಪದವು. ಇವು ಒಂದು ಬಗೆಯ ಸ್ವಕೀಯ ವಿನ್ಯಾಸದ ಲಹರಿ ಮಾದರಿಯವು. ಈ ಬಗೆಯ ಕತೆಗಳನ್ನು ಬರೆದ ಪಂಜೆಯವರನ್ನು ಕುರಿತು ಗೋವಿಂದ ಪೈಯವರು ಒಂದೆಡೆ "1900 ವರೆಗೆ ಕನ್ನಡದಲ್ಲಿ ಸಾಹಿತ್ಯದ ಅಂಗವೆನಿಸತಕ್ಕ ಚಿಕ್ಕ ಕಡೆಗಳಿಲ್ಲದುದರಿಂದ, ಅದೊಂದು ನೂತನತೆಯನ್ನು ಸೃಜಿಸಿ ಅದನ್ನು ನಮ್ಮ ಸಾಹಿತ್ಯಕ್ಕೆ ಮೊತ್ತಮೊದಲು ದೊರಕಿಸಿಕೊಟ್ಟ ಪಂಜೆಯವರೇ ಕನ್ನಡ ಕಥೆಗಳ ವಿಧಾತರೆಂಬ ಸ್ವಯಂವ್ಯಕ್ತವಾದ ಸತ್ಯಕ್ಕೆ ಬೇರೊಂದು ಸತ್ಯಾಪನವು ಬೇಕೆಂದಿಲ್ಲ' ಎಂದಿದ್ದಾರೆ.