ಎಂ. ಕೆ. ಇಂದಿರಾ
Publisher:
Regular price
Rs. 80.00
Regular price
Sale price
Rs. 80.00
Unit price
per
Shipping calculated at checkout.
Couldn't load pickup availability
ವಿಧವೆಯೊಬ್ಬಳ ಬದುಕು ಹಾಗೂ ಸಮಾಜ ಆಕೆಯನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದನ್ನು ಎಂ.ಕೆ. ಇಂದಿರಾ ಅವರು ಈ ಕಾದಂಬರಿಯಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.
ಕತೆಯ ನಾಯಕಿ ಫಣಿಯಮ್ಮ ಮಲೆನಾಡಿನ ಒಂದು ಹಳ್ಳಿಗೆ ಸೇರಿದವಳು. ಆಕೆಗೆ ಎಂಟರ ಹರೆಯದಲ್ಲೇ ಮದುವೆಯಾಗುತ್ತದೆ. ಹಾವು ಕಚ್ಚಿ ಗಂಡ ತೀರಿಕೊಂಡು, ಆಕೆಗೆ ವಿಧವೆ ಪಟ್ಟ ಸಿಗುವಾಗ ಬರೀ ಒಂಬತ್ತರ ಹರೆಯ. ಈಕೆ ಬದುಕಿದ್ದು 108 ವರ್ಷ. ಅಕ್ಕ, ತಂಗಿ, ಅಣ್ಣ ಹೀಗೆ ಅವರಿವರ ಮಕ್ಕಳನ್ನು, ಮೊಮ್ಮಕ್ಕಳನ್ನು ಸಲಹಿ, ಇನ್ನೊಬ್ಬರ ಕಷ್ಟಗಳನ್ನು ಪರಿಹರಿಸುತ್ತಾ, ಕಡೆಯ ಉಸಿರಿನವರೆಗೂ ಬಿಳಿ ಸೀರೆ ತೊಟ್ಟು ಬದುಕಿದ ಜೀವ. ಸಮಾಜದ ಕಟ್ಟಲೆಗಳಿಗೆ ತಲೆಬಾಗಿ, ತನ್ನದಲ್ಲದ ತಪ್ಪಿಗೆ ಒಂಟಿ ಬದುಕಿನ ಶಿಕ್ಷೆ ಅನುಭವಿಸಿದ ಹೆಂಗಸಿನ ಒಳಮನಸ್ಸಿನ ತಳಮಳ ಹೇಗಿದ್ದೀತು?
