Skip to product information
1 of 1

S. Narasimha Rao

ಪಂಚಾಂಗದ ಮೂಲಭೂತ ಅಂಶಗಳು

ಪಂಚಾಂಗದ ಮೂಲಭೂತ ಅಂಶಗಳು

Publisher -

Regular price Rs. 40.00
Regular price Rs. 40.00 Sale price Rs. 40.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ನರಸಿಂಹರಾವ್, 1948 ರಲ್ಲಿ ಹೊಳೇನರಸೀಪುರದಲ್ಲಿ ಜನಿಸಿದವರು. 1968 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದರು. ಅವರು ಉತ್ಪಾದನಾ ಕ್ಷೇತ್ರ (ಕಾರ್ಖಾನೆ) ದಲ್ಲಿಯೂ, ವಿದ್ಯಾ ಕ್ಷೇತ್ರದಲ್ಲಿಯೂ ವಹಿವಾಟು ವ್ಯವಸ್ಥಾಪನಾ ಕುಶಲತೆ ಪಡೆದಿದ್ದಾರೆ. ಈಗ ಮಹಾವಿದ್ಯಾಲಯ (ಕಾಲೇಜು)ಗಳು, ಗುಣಮಟ್ಟದ ಗರಿಷ್ಠ ಸ್ಥಾನವನ್ನು ಮುಟ್ಟಿ, ಅದನ್ನು ಉಳಿಸಿಕೊಂಡುಬರಲು ಬೇಕಾಗುವ ವ್ಯವಸ್ಥೆಯನ್ನು ಮಾಡಲು ಸಹಾಯ ಮಾಡುತ್ತಿದ್ದಾರೆ.

ಅವರು ಆಕಸ್ಮಿಕವಾಗಿ ಪಂಚಾಂಗಕರ್ತರಾದರು. 1997ರ ಮಧ್ಯದಲ್ಲಿ, ಅವರು ಪಂಚಾಂಗದಲ್ಲಿ ತಮಗೆ ಕಂಡ ವೈಚಿತ್ರಗಳ ಬಗ್ಗೆ ಮದ್ರಾಸಿನಲ್ಲಿರುವ ತಮ್ಮ ಕುಟುಂಬ ಪುರೋಹಿತರಾದ ಭಷ್ಠ ಪದ್ಮನಾಭಾಚಾರ್ಯರಲ್ಲಿ ವಿಚಾರಿಸಿದರು. ಅವರೋ ತಾವೇ 1968 ರಿಂದ ಪಂಚಾಂಗಕರ್ತರು. ಅವರ ಪಂಚಾಂಗವು ತಮಿಳಿನಲ್ಲಿ “ತಂಜಾವೂರ್ ಪಂಚಾಂಗಂ” ಎಂಬ ಹೆಸರಿನಲ್ಲಿ 1867-68 ನಿಂದ ಪ್ರಕಟವಾಗುತ್ತಿವೆ. ಆಚಾರ್ಯರು, ನರಸಿಂಹರಾವಿಗೆ ಉತ್ತರವಾಗಿ ಪಂಚಾಂಗ ಗುಣಿಸುವುದನ್ನೇ ಹೇಳಿಕೊಟ್ಟು, 1998-99 ಬಹುಧಾನ್ಯ ಸಂವತ್ಸರದಿಂದ, ಪಂಚಾಂಗವನ್ನು ತಯಾರಿಸಲು ಬಿಟ್ಟುಕೊಟ್ಟಿದ್ದಾರೆ.

2004-05 ತಾರಣ ಸಂವತ್ಸರದಿಂದ ಇಂಗ್ಲಿಷಿನಲ್ಲಿ “ಪಂಚಾಂಗಂ ಇನ್ ಇಂಗ್ಲಿಷ್" ಮತ್ತು 2007-08 ಸರ್ವಜಿತ್ ಸಂವತ್ತರದಿಂದ ಕನ್ನಡದಲ್ಲಿ “ಮಾಧ್ಯ ಪಂಚಾಂಗ” ಎಂಬ ಶೀರ್ಷಿಕೆಗಳಲ್ಲಿ ಕ್ಯಾಲೆಂಡರ್ ರೂಪದಲ್ಲಿಯೂ ಪಂಚಾಂಗವನ್ನು ಪ್ರಕಟಿಸುತ್ತಿದ್ದಾರೆ. ಉಪಯೋಗಿಸುವವರು ಸುಲಭವಾಗಿ ವಿಷಯವನ್ನು ನೋಡಿ ಗ್ರಹಿಸಲಿಕ್ಕಾಗುವುದೇ ಅವರ ಪಂಚಾಂಗಗಳ ವಿಶೇಷ.

ಈ ಪುಸ್ತಕವನ್ನು ಸಾಮಾನ್ಯ ಜನರಿಗೆ ಪಂಚಾಂಗದಲ್ಲಿನ ಅಂಶಗಳ ಪರಿಚಯಕ್ಕಾಗಿ ಬರೆಯಲಾಗಿದೆ. ಪಂಚಾಂಗದಲ್ಲಿ ಕಂಡುಬರುವ ಕುತೂಹಲಕಾರಿ ವೈಚಿತ್ರಗಳ (ಉದಾಹರಣೆಗೆ: ಒಂದು ದಿನದಲ್ಲಿ ಎರಡು ತಿಥಿ ಬರುವುದು, ಎರಡು ದಿನಗಳಲ್ಲಿ ಒಂದೇ ತಿಥಿ ಇರುವುದು, ಇತ್ಯಾದಿ) ಕಾರಣಗಳನ್ನು ವಿಶದವಾಗಿ ತಿಳಿಸಿದ್ದಾರೆ.
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
H
Hanumanthu
ಆತುತ್ತಮ

ವಿವರಣೆ ಚೆನ್ನಾಗಿದೆ