Skip to product information
1 of 1

Dr. Siddalingiah

ಊರು ಕೇರಿ ೩ - ಆತ್ಮಕಥನ

ಊರು ಕೇರಿ ೩ - ಆತ್ಮಕಥನ

Publisher - ಅಂಕಿತ ಪುಸ್ತಕ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕಳೆದ ಕೆಲವು ದಶಕಗಳಲ್ಲಿ ಕವಿ ಮತ್ತು ಸಾಮಾಜಿಕ ಹೋರಾಟಗಾರರಾಗಿ ಮೇಲೆದ್ದು ಬಂದಿರುವ ಡಾ|| ಸಿದ್ಧಲಿಂಗಯ್ಯನವರ ಆತ್ಮಕಥಾನಕ ಇದು.

ಈ ಆತ್ಮಕಥೆಯಲ್ಲಿ ದಲಿತ ಲೇಖಕರ ಕೃತಿಗಳಲ್ಲಿ ನಾವು ನಿರೀಕ್ಷಿಸಬಹುದಾದ ಅನೇಕ ಅಂಶಗಳಿವೆ. ಬಡತನ, ರೊಚ್ಚು, ಅವಮಾನ ಇತ್ಯಾದಿಗಳೆಲ್ಲ ಇವೆ. ಆದರೆ, ಇಡೀ ಕೃತಿಯಲ್ಲಿ ಹೊಸದಾದ, ಅನಿರೀಕ್ಷಿತವಾದ ಒಂದು ಮುಖ್ಯಾಂಗವೂ ಇದೆ. ಅದು ಬಡತನ ಮತ್ತು ಹಿಂಸೆಯ ಬಗ್ಗೆ ಭೀತಿಯ ಗೈರುಹಾಜರಿ. ಈ ಕೃತಿಯ ವಸ್ತು ದಲಿತ ಕೃತಿಗಳಿಗೆ ಸಾಮಾನ್ಯವಾದದ್ದು, ಸಹಜವಾದದ್ದು. ಆದರೆ, ಈ ವಸ್ತುವನ್ನು ನಿರ್ವಹಿಸುವ ಧ್ವನಿ ಭಿನ್ನವಾದದ್ದು, ಚೇತೋಹಾರಿಯಾದದ್ದು. ಬಡತನ, ಜಾತಿ ಅವಮಾನದ ಭೀತಿಗಳಿರದ ದಲಿತಕಥೆ ಸುಳ್ಳು. ಆದರೆ, ಅವನ್ನು ಪ್ರತಿಭೆಯಲ್ಲಿ ಲೇಖಕ ಗೆಲ್ಲುತ್ತಾನೆ ಎಂಬ ಮಾತು ನಿಜ. ತಮ್ಮ ಬದುಕಿನಲ್ಲಿನ ಹಸಿವು, ಅವಮಾನಗಳನ್ನು ಕೊಂಚ ವಕ್ರೀಕರಣ ಗೊಳಿಸುವ ಮೂಲಕ ಕವಿ ಸಿದ್ಧಲಿಂಗಯ್ಯ ಅವನ್ನು ದಾಟುವ ಮಾರ್ಗಗಳನ್ನು ತೋರಿಸುತ್ತಾರೆ.

ಬಡತನ-ಹೋರಾಟಗಳ ಬದುಕು ಈ ಕಥಾನಕದಲ್ಲಿ ತುಂಟತನ, ವ್ಯಂಗ್ಯದಲ್ಲಿ ನಿರೂಪಿತವಾಗಿದೆ; ಆ ಮೂಲಕ ಪ್ರತಿಭೆಯು ಬಡತನವನ್ನು ಗೆಲ್ಲುವ ಹೊಸ ಆತ್ಮವಿಶ್ವಾಸವೊಂದನ್ನು ಆವಿಷ್ಕರಿಸುವ ಅಪರೂಪದ ಬರವಣಿಗೆ ಇದು.

ದಾ| ಡಿ.ಆರ್. ನಾಗರಾಜ್ (ಬಡವರ ನಗುವಿನ ಶಕ್ತಿ' ಹಿನ್ನುಡಿಯಿಂದ).

ಪ್ರಕಾಶಕರು - ಅಂಕಿತ ಪುಸ್ತಕ

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)