Skip to product information
1 of 2

Shivananda Kalave

ಒಂದು ತುತ್ತಿನ ಕಥೆ

ಒಂದು ತುತ್ತಿನ ಕಥೆ

Publisher - Sahithya Prakashana

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 176

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಹೊಲದಲ್ಲಿ ಹಸಿರು ಚಿತ್ರ ಬರೆದವರ ಬದುಕು ಅರಿಯುತ್ತ ಕಳೆದು ಹೋಗುವಲ್ಲಿ ಎಂಥದೋ ಖುಷಿಯಿದೆ. ಕೃಷಿ ಸಾಧಕರ ದರ್ಶನಕ್ಕೆ ಹೋದ ಬರಹಗಾರ ಶಿವಾನಂದ ಕಳವೆ ಕಂಡ ನೋಟಗಳನ್ನು 'ಒಂದು ತುತ್ತಿನ ಕತೆ'ಯಲ್ಲಿ ದಾಖಲಿಸಿದ್ದಾರೆ. ಇದು ಈಗಾಗಲೇ ಪ್ರಕಟವಾದ 'ಮಣ್ಣಿನ ಓದು' ಕೃತಿಯ ಮುಂದಿನ ಭಾಗ, ಕಳವೆ ಕೃಷಿ ಪ್ರವಾಸ ಕಥನದ ಪಿರಡನೇ ಕೃತಿಯಾಗಿದೆ.

ಹೊಲ, ಹಳ್ಳಿಗಳಲ್ಲಿ ಕುಳಿತು ರೈತರ ಜೊತೆ ಮಾತಾಡುತ್ತ ಹೋದ ಕಳವೆ ನಾವು ಅರಿಯದ ವಿಶೇಷಗಳ ದರ್ಶನ ಮಾಡಿಸಿದ್ದಾರೆ. ಸರಣಿ ಆತ್ಮಹತ್ಯೆ, ಬರ, ಅಕಾಲಿಕ ಮಳೆ ಪರಿಣಾಮದಿಂದಾಗಿ ಕೃಷಿ ಬದುಕು ಸಂಕಟದಲ್ಲಿದೆ, ಸೋಲಿನ ಕತೆ ಹೇಳುವುದಷ್ಟೇ ನಮ್ಮ ಕೆಲಸವಲ್ಲ. ಬದುಕಿನ ದಾರಿ ತೋರಿಸುವದೂ ಅಗತ್ಯವಿದೆ. ಮನೆಮಂದಿಯೆಲ್ಲ ಕುಳಿತು ದಿನವೂ ಒಂದೊಂದೇ 'ತುತ್ತಿನ ಕತೆ' ಓದಿದರೆ ಅನ್ನದ ಅರಿವಾಗಬಹುದು. ಗ್ರಾಮದ ಹೊಲದೆಡೆಯಿಂದ ಎತ್ತಿ ತಂದ ಬರಹಗಳಿವು. ನಾಡಿನ ರೈತರು ಕಳವೆಯವರ ಮೂಲಕ ಒಂದಿಷ್ಟು ಕೃಷಿ ಬೆಳಕಿನ ಬೀಜಗಳನ್ನು ನಮಗೆಲ್ಲ ಕಳಿಸಿದ್ದಾರೆ. ಇವನ್ನು ನಮ್ಮ ಮಿದುಳಿನಲ್ಲಿ ಊರುವ ಪರಿಣಾಮಕಾರಿ ಕಾರ್ಯಕ್ಕೆ ಕಳವೆ ಕೈಹಾಕಿದ್ದಾರೆ. 'ಒಂದು ತುತ್ತಿನ ಕತೆ' ಕೃಷಿ ಜಾಗೃತಿ ಮೂಡಿಸುವ ಒಂದು ಪರಿಣಾಮಕಾರಿ ಪ್ರಯತ್ನವಾಗಿದೆ.

 

View full details