Sudha Adukala
Publisher - ಮೈತ್ರಿ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಒಂದು ಇಡಿಯ ಬಳಪ – ಮೈತ್ರಿ ಪ್ರಕಾಶನದ 2021ರ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥಾ ಸಂಕಲನ. ಇದು ಶ್ರೀಮತಿ ಸುಧಾ ಆಡುಕಳ ಅವರ ಕೃತಿ. “ಒಂದು ಇಡಿಯ ಬಳಪʼ ಪುಸ್ತಕದಲ್ಲಿರುವ ಹನ್ನೊಂದು ಕಥೆಗಳಲ್ಲಿ ಎಲ್ಲಿಯೂ ಕಥೆಗಾರರ ನಿರೂಪಣಾ ಶೈಲಿಯಾಗಲಿ, ಪಾತ್ರಧಾರರ ಭಾವನೆಗಳಾಗಲಿ, ಕಥೆಯ ಮುಖ್ಯ ವಸ್ತುವಾಗಲಿ ಪುನರಾವರ್ತನೆಯಾಗಿಲ್ಲ. ೧೧ ಜನ ಉತ್ತಮ ಕಥೆಗಾರರನ್ನು ಕರೆದು ಅವರಿಂದ ಕಥೆಗಳನ್ನು ಬರೆಸಿದ್ದಾರೇನೋ ಎಂದು ಅನಿಸುತ್ತದೆ. ಹಾಗಾಗಿ ಈ ಕಥಾ ಸಂಕಲನದ ಹೆಸರು ಎಲ್ಲಾ ಕಥೆಗಳಿಗೆ ಅನ್ವಯವಾಗುತ್ತಿಲ್ಲ. ಹಾಗೆ ಆಗಿದಿರುವುದೇ ಅದರ ವೈಶಿಷ್ಟ್ಯತೆ.
ಈ ” ಒಂದು ಇಡಿಯ ಬಳಪ” ಕಥಾ ಸಂಕಲನದಲ್ಲಿ ಏನಿಲ್ಲ ಹೇಳಿ. ಹೆಣ್ಣಿಗೆ ಆಗುವ ಮೋಸ, ಶೋಷಣೆ, ದ್ವಾಪರಯುಗದ ಭಾನುಮತಿಯ ಕಥೆಯನ್ನು ಕಲಿಯುಗದ ಒಂದು ಗೆಳತಿಯ ಕಥೆಗೆ ಹೆಣೆಯುವುದು, ಶಿಖಂಡಿಯ ಸ್ವಗತ, ಹೊಳೆಯನ್ನು ಹೆಣ್ಣಂತೆ ಬಿಂಬಿಸಿ ಅದಕ್ಕೊಂದು ಜೀವನ ಕೊಟ್ಟದ್ದು, ಪರಿಸರ ಕಾಳಜಿ ಹೀಗೆ ಇನ್ನೂ ಹಲವು ವಿಷಯಗಳು ಇಲ್ಲಿ ಬಂದಿವೆ. ಕಥೆಗಳು ಪ್ರಾರಂಭವಾಗುತ್ತಾ ಎಲ್ಲೋ ಒಂದು ಕಡೆ ಕಥೆಗಾರ್ತಿ ಅಲ್ಲೇ ಒಂದೇ ವಿಷಯದ ಬಗ್ಗೆಯೇ ಸುತ್ತಲು ಪ್ರಾರಂಭಿಸಿದರೆ ಎಂದು ಅಂದುಕೊಳ್ಳುವಷ್ಟರಲ್ಲಿ ಆ ಕಥೆಗೆ ಪಾತ್ರಧಾರಿಗಳ ಒಂದು ಪ್ರಶ್ನೆಯಿಂದಲೋ ಅಥವಾ ಒಂದು ಉತ್ತರದಿಂದಲೋ ಊಹೆ ಮಾಡಲು ಸಾಧ್ಯವಾಗದ ತಿರುವು. ಕಥೆಗಳಲ್ಲಿನ ಭಾಷೆಯೂ ಅಷ್ಟೇ, ಆ ಪಾತ್ರಗಳಿಗೆ ಬೇಕಾದ ಭಾಷೆಯ ಶೈಲಿಯನ್ನೇ ಬಳಸಿದ್ದಾರೆ.
