Skip to product information
1 of 2

Gireesh Sripada Mevundi

ಓಯಸಿಸ್

ಓಯಸಿಸ್

Publisher - ಸಾವಣ್ಣ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 148

Type - Paperback

Gift Wrap
Gift Wrap Rs. 15.00

ಮಾನವನ ವಿಕಾಸದ ಹಾದಿಯಿಂದ ಹಿಡಿದು ಇತ್ತೀಚಿನ ಆಧುನಿಕತೆಯ ಪ್ರಗತಿಯ ಪಥವನ್ನು ಅವಲೋಕಿಸಿದಾಗ ಈ ಅಗಾಧವಾದ ಬೆಳವಣಿಗೆಯಿಂದ ಮೂಲತಃ ನಾವೆಲ್ಲರೂ ಬದುಕಲು ಅಗತ್ಯವಿರುವ ಮೂಲಭೂತ ಅವಶ್ಯಕತೆಗಳನ್ನು ಹೊಂದಿ ಈ ವಿಕಸಿತ ಬುದ್ಧಿಯ ಪ್ರಭಾವದಿಂದ ಈ ಮೂಲಭೂತ ಅಗತ್ಯತೆಗಳಾಚೆ ಚಿಂತಿಸಿ ಇದರ ಪರಿಣಾಮವು ನಮ್ಮ ಬದುಕನ್ನು ಇನ್ನಷ್ಟು ಸರಳ ಹಾಗೂ ಸಂತೃಪ್ತಗೊಳಿಸಿ ತನ್ಮೂಲಕ ಹೆಚ್ಚಿನ ನೆಮ್ಮದಿಯಿಂದ ಕೂಡಿದ ಬದುಕನ್ನು ಸಂಭ್ರಮಿಸುವಂತಾಗಬೇಕಿತ್ತು! ಆದರೆ ಇಂದು ನಮ್ಮೆಲ್ಲರ ಬದುಕು ಇದಕ್ಕೆ ವ್ಯತಿರಿಕ್ತವಾದ ಮಾರ್ಗದಲ್ಲಿ ಸಾಗುತ್ತಿದೆ. ಒಂದುಕಡೆ ನಾಗರಿಕತೆನೂತನ ತಂತ್ರಜ್ಞಾನ ಹಾಗೂ ಅನ್ವೇಷಣೆಗಳ ವಿಷಯದಲ್ಲಿ ಮಾನವ ಇತರೆ ಜೀವರಾಶಿಗಳ ಹೋಲಿಕೆಗೆ ಸಿಗದಷ್ಟು ಉಚ್ಛ್ರಾಯ ಸ್ಥಿತಿಯಲ್ಲಿದ್ದಾನೆ. ಇದಕ್ಕೆ ವ್ಯತಿರಿಕ್ತವಾಗಿ ಬಹುತೇಕರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹೋರಾಟದಲ್ಲಿ ನಿರಾಶೆ-ಹತಾಶೆಗಳಿಂದ ಬಳಲುತ್ತಾ ಬದುಕೇ ಇಲ್ಲವೇನೋ ಎಂಬಂತೆ ಸಾಯುತ್ತಿದ್ದಾರೆ! ಇದಕ್ಕೆಲ್ಲಾ ಮೂಲ ಕಾರಣ ಈ ಬದುಕನ್ನು ಅರ್ಥಮಾಡಿಕೊಳ್ಳದೆ ಬದುಕಿನ ಉದ್ದೇಶ ಹಾಗೂ ಲಯ ತಿಳಿಯದೆ ಬತ್ತದ ಬಯಕೆಗಳೆಂಬ ಬಿಸಿಲುಕುದುರೆ ಏರಿ ಫಲವೆಂಬ ನೀರು ಹುಡುಕುತ್ತಾ ಹೊರಟು ಮರೀಚಿಕೆಯನ್ನು ಕಂಡಂತಾಗಿದೆ ನಮ್ಮೆಲ್ಲರ ಸ್ಥಿತಿ! ಈ ಹಿನ್ನೆಲೆಯಲ್ಲಿ ಸುಖ-ಶಾಂತಿ ಹಾಗೂ ನೆಮ್ಮದಿ-ಸಂತೃಪ್ತಿಗಳ ಕೊರತೆಯಿಂದ ಮರುಭೂಮಿಯಂತೆ ಬರಡಾದ ಬದುಕನ್ನು ನಿಷ್ಕರ್ಶಿಸಿಬದುಕುವ ಬಗೆಯನ್ನು ಅರಿತುಬದುಕಿನ ನಿಯಮಗಳನ್ನು ಪಾಲಿಸುತ್ತಾ ಅದರ ಲಯದಂತೆ ನಮ್ಮ ಅರ್ಹತೆ ಹಾಗೂ ಯೋಗ್ಯತೆಯನ್ನು ವೃದ್ಧಿಸಿಕೊಂಡು ಬಯಸಿದ ಬದುಕನ್ನು ಪಡೆಯುವ ಹುಡುಕಾಟದಲ್ಲಿ ಸಿಗುವ ಸ್ಫೂರ್ತಿಯ ಚಿಲುಮೆಯೇ ಈ `ಓಯಸಿಸ್.'

-ಗಿರೀಶ ಶ್ರೀಪಾದ ಮೇವುಂಡಿ

View full details