Dr. D. N. Shankara Batt
ನುಡಿಯ ಬಗೆಗೆ ನೀವೇನು ಬಲ್ಲಿರಿ?
ನುಡಿಯ ಬಗೆಗೆ ನೀವೇನು ಬಲ್ಲಿರಿ?
Publisher - ಡಿ. ಎನ್. ಶಂಕರ ಬಟ್
- Free Shipping Above ₹300
- Cash on Delivery (COD) Available
Pages - 257
Type - Paperback
Couldn't load pickup availability
ಕಣ್ಣುಗಳೆರಡು ನಮ್ಮ ಮೂಗಿನ ತುದಿಯಲ್ಲೇ ಇವೆಯಾದರೂ ಅವು ನೋಯತೊಡಗಿದುವೆಂದರೆ ನಾವು ಸೀದಾ ಡಾಕ್ಟರಲ್ಲಿಗೆ ಓಡುತ್ತೇವೆ. ನಮ್ಮ ವಶದಲ್ಲೇ ಇವೆಯಾದರೂ ಅವುಗಳ ಒಳಗುಟ್ಟು ನಮಗೆ ತಿಳಿದಿಲ್ಲ. ನಮ್ಮ ನಾಲಗೆಯ ತುದಿಯಲ್ಲೇ ಕುಣಿಯುವ ನುಡಿಯೂ ಇಂತಹದೇ. ಬೇಕಾದಂತೆ ಅದನ್ನು ನಾವು ಬಳಸಬಲ್ಲೆವು. ಆದರೆ ಅದರ ಒಳಗುಟ್ಟು ಮಾತ್ರ ನಮಗೆ ತಿಳಿಯದು.
ಆದರೆ, ಕಣ್ಣಿನ ನೋವಿನ ಹಾಗೆ ನುಡಿಯ ನೋವು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ಹಿಂಸಿಸುವುದಿಲ್ಲ. ಅದರ ತೊಂದರೆಯನ್ನು ಇಡೀ ಸಮಾಜವೇ ಒಟ್ಟಾಗಿ ಅನುಭವಿಸುತ್ತದೆ. ಇದಕ್ಕಾಗಿಯೋ ಏನೋ, ನುಡಿಯ ಸಮಸ್ಯೆಯನ್ನು ಪರಿಹರಿಸಲು ಯಾರೂ ನುಡಿಯ ಪಂಡಿತರಲ್ಲಿಗೆ ಓಡುವುದಿಲ್ಲ. ಆದರೆ, ಇದರಿಂದಾಗುವ ಅನಾಹುತಗಳು ಮಾತ್ರ ಹಲವು.
ಲಿಪಿಯ ವಿಷಯದಲ್ಲಿ ನುಡಿಮಾಧ್ಯಮದ ವಿಷಯದಲ್ಲಿ, ವ್ಯಾಕರಣವನ್ನು ಕಲಿಸುವ ವಿಷಯದಲ್ಲಿ ಮತ್ತು ಇನ್ನು ಹಲವಾರು ನುಡಿಗೆ ಸಂಬಂಧಿಸಿದ ವಿಷಯಗಳಲ್ಲಿ ನಾವು ತಿಳಿದುಕೊಳ್ಳಬೇಕಾಗಿರುವ ಅಂಶಗಳು ಹಲವಿವೆ ಎಂಬುದನ್ನು ಈ ಪುಸ್ತಕ ತೋರಿಸಿ ಕೊಡುತ್ತದೆ. ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ಸಮಾಜದಲ್ಲಿ ಬೇರೆ ಬೇರೆ ನಿರ್ಧಾರಗಳನ್ನು ಮಾಡುವವರು ಅವಶ್ಯವಾಗಿಯೂ ತಿಳಿದಿರಬೇಕಾದ ವಿಷಯಗಳಿವು.
ಈ ಪುಸ್ತಕದ ಬರಹಗಾರರು ಕಳೆದ ಐವತ್ತು ವರ್ಷಗಳಿಂದ ನುಡಿಯ ಕುರಿತಾಗಿ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ, ಮತ್ತು ಕನ್ನಡಕ್ಕೆ ಅದರದೇ ಆದ ವ್ಯಾಕರಣವೊಂದನ್ನು ಸಿದ್ಧಪಡಿಸಿದ್ದಾರೆ. ಇದಲ್ಲದೆ, ಕನ್ನಡ ಬರಹಗಳು ಎಲ್ಲರ ಕೈಸೇರುವಂತೆ ಮಾಡಲು ಅದರಲ್ಲಿ ಬಳಕೆಯಾಗುವ ಸಂಸ್ಕೃತ ಎರವಲುಗಳನ್ನು ಕಡಿಮೆ ಮಾಡಬೇಕು, ಮತ್ತು ಅದರಲ್ಲಿ ಆನವಶ್ಯಕವಾಗಿ ಬಳಕೆಯಾಗುತ್ತಿರುವ ಸುಮಾರು ಹದಿನೇಳು ಅಕ್ಷರಗಳನ್ನು ಬಿಟ್ಟುಕೊಡಬೇಕು ಎಂದು ವಾದಿಸಿ, ఆ ರೀತಿ ಬಿಟ್ಟುಕೊಟ್ಟಿರುವ 'ಹೊಸಬರಹ'ವೊಂದನ್ನು ಬರಹಗಾರರ ಮುಂದಿಟ್ಟು, ಅದನ್ನು ಈಗ ತಾವೇ ಬಳಸತೊಡಗಿದ್ದಾರೆ.
Share


ನುಡಿಗಳ ಕುರಿತು ನಮ್ಮಲ್ಲಿ ಹಲವು ಅನಿಸಿಕೆಗಳಿವೆ ಮತ್ತು ಅವುಗಳಲ್ಲಿ ಹಲವು ತಪ್ಪು ತಿಳಿವಳಿಕೆಗಳಿವೆ. ನುಡಿ ಕುರಿತು ಆಳವಾಗಿ ತಿಳಿದುಕೊಳ್ಳಬೇಕಾದರೆ ನುಡಿಯರಿಮೆ ತಿಳಿವಳಿಕೆ ಬೇಕಾಗುತ್ತದೆ. ನುಡಿಯರಿಮೆ ಕಲಿಯುವುದರಲ್ಲಿ ಈ ಹೊತ್ತಗೆ ಮೊದಲ ಹೆಜ್ಜೆ ಎಂದು ಎಣಿಸಬಹುದು. ಹಾಗಾಗಿ ಈ ಹೊತ್ತಗೆಯನ್ನು ಎಲ್ಲರೂ ಓದಬಹುದು. ನುಡಿ, ಮಕ್ಕಳ ಕಲಿಕೆ, ವ್ಯಾಕರಣ, ಜಗತ್ತಿನ ನುಡಿಗಳು, ಮಾತು, ಬರಹ ಸುತ್ತಲೂ ಹಲವು ಅಂಕಣಗಳಿವೆ.
ಓದಲೇಬೇಕಾದ ಪುಸ್ತಕ. ಭಾಷೆಯ ಬಗೆಗೆ ಹೊಸ ತಿಳುವಳಿಕೆಯನ್ನು ನೀಡುವ ಪುಸ್ತಕ
Subscribe to our emails
Subscribe to our mailing list for insider news, product launches, and more.