Skip to product information
1 of 1

Ta. Ra. Su.

ನೃಪತುಂಗ

ನೃಪತುಂಗ

Publisher - ಹೇಮಂತ ಸಾಹಿತ್ಯ

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ತ.ರಾ.ಸು. ಕಥೆ ಹೇಳುವುದರಲ್ಲಿ ನಿಸ್ಸೀಮರು, ಅವರ ಭಾಷೆಯ ಹರವು ವಿಶಾಲವಾದದ್ದು. ಚಿತ್ರಮಯವಾದ ವರ್ಣನೆ, ಅಂತಃಕರಣ ಉಕ್ಕಿ ಬರುವ ಸಂಭಾಷಣೆ, ರೋಮಾಂಚಕಾರಕ ಕಾರ್ಯಕಾರಣಪುರಸ್ಸರವಾದ ಘಟನೆಗಳ ನಿರೂಪಣೆ, ಸಿಡಿಲಿನಂತಹ ಭಾವಗಳು, ಪಾರಿಜಾತ ಸ್ಪರ್ಶದಂತಹ ಮಾರ್ದವತೆ, ವೀರ್ಯವತ್ತಾದ ಭಾಷೆ, ಪರಿಣಾಮಕಾರಿಯಾದ ದೃಶ್ಯಗಳ ನಿರೂಪಣೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಶೈಲಿ. ಇವರ ದೃಶ್ಯ ವರ್ಣನೆಗಳನ್ನು ಓದುತ್ತಿದ್ದರೆ ನಾಟಕ ಶಾಲೆಯಲ್ಲಿ ಕುಳಿತು ದೃಶ್ಯ ವೀಕ್ಷಿಸುತ್ತಿದ್ದೇವೆಯೋ ಎನ್ನಿಸುತ್ತದೆ. ಇನ್ನೊಬ್ಬರ ಮನದ ಮೆಲು ನಿಟ್ಟಸಿರು ಕೇಳಿಸುತ್ತದೆ. ಮಗದೊಬ್ಬರ ಕಣ್ಣಂಚಿನಲ್ಲಿ ಅಂತಃಕರಣದ ಆಳದಿಂದ ಹೊರತುಳುಕುವ ಕಂಬನಿ ಕಾಣುತ್ತದೆ.

ಓದುಗರ ಮನವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬಲ್ಲ, ಅಂತಃಕರಣವನ್ನು ತಾಕಬಲ್ಲ, ಮತ್ತೆ ಮತ್ತೆ ರೋಮಾಂಚನಗೊಳಿಸಬಲ್ಲ ಕಥೆಗಳನ್ನು ತ.ರಾ.ಸು. ತುಂಬ ಸಮರ್ಥವಾಗಿ ಹೇಳಿದ್ದಾರೆನ್ನುವುದಕ್ಕೆ ಇವರ ಅನೇಕ ಕಾದಂಬರಿಗಳು ಮತ್ತೆ ಮತ್ತೆ ಮುದ್ರಣಗೊಂಡು ಚಲನಚಿತ್ರವಾಗಿರುವುದೇ ಸಾಕ್ಷಿಯಾಗಿದೆ.

ಪ್ರಕಾಶಕರು

ಹೇಮಂತ ಸಾಹಿತ್ಯ
View full details