Skip to product information
1 of 1

Dr. Aralumallige Parthasarathy

ನಿತ್ಯನೂತನ ಪುರಂದರದಾಸರ ಜನಪ್ರಿಯ ಕೀರ್ತನೆಗಳು

ನಿತ್ಯನೂತನ ಪುರಂದರದಾಸರ ಜನಪ್ರಿಯ ಕೀರ್ತನೆಗಳು

Publisher - ರವೀಂದ್ರ ಪುಸ್ತಕಾಲಯ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಗೋಪಾಲಬುಟ್ಟಿ, ಜೋಳಿಗೆ, ತಾಳ, ತಂಬೂರಿ ಹಿಡಿದು ಬೀದಿಯಲ್ಲಿ ಹಾಡುತ್ತಾ ಹೊರಟ ಪುರಂದರದಾಸರಂತಹ ಹರಿದಾಸರುಗಳ ಸಾಹಿತ್ಯವನ್ನು, ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಅರ್ಥಪೂರ್ಣವಾಗಿ, ಪ್ರಭಾವಪೂರ್ಣವಾಗಿ ಪ್ರಸ್ತುಪಡಿಸುತ್ತಿರುವ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಯಾವ ಕಾಲಕ್ಕೂ ಉಳಿಯಬಲ್ಲಂತಹ ನಲವತ್ತೈದು ಮೌಲಿಕ ಗ್ರಂಥಗಳನ್ನು ಕೊಟ್ಟಿದ್ದಾರೆ. ಮೂವತ್ತಕ್ಕೂ ಹೆಚ್ಚು ಧ್ವನಿಮುದ್ರಿಕೆಗಳನ್ನು ನೀಡಿದ್ದಾರೆ. ದೇಶವಿದೇಶಗಳಲ್ಲಿ ಸಹಸ್ರಸಹಸ್ರ ಪ್ರವಚನಗಳನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಶಸ್ತಿ ಗಳಿಸಿರುವ ಸಾಹಿತಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂದಿನ ಪ್ರಚಲಿತ ಸಂದರ್ಭದಲ್ಲಿ ಒಬ್ಬ ಸುಸಂಸ್ಕೃತ ಸಾಧಕ ಶ್ರೇಷ್ಠ ವಿಚಾರಗಳನ್ನು ನೀಡಿದರೆ ಸಮಾಜ ಹೃತ್ಪೂರ್ವಕವಾಗಿ ಸ್ವೀಕರಿಸುತ್ತದೆ ಎನ್ನುವುದಕ್ಕೆ ಅರಳುಮಲ್ಲಿಗೆ ನಿದರ್ಶನರಾಗಿದ್ದಾರೆ. ಶ್ರೀಪಾದರಾಜರ, ವ್ಯಾಸರಾಜರ, ಜಗನ್ನಾಥದಾಸರ ಜೀವನಚರಿತ್ರೆ ಹಾಗೂ ಹಾಡುಗಳನ್ನು ಹೊರತಂದಿರುವ ಅರಳುಮಲ್ಲಿಗೆಯವರ ಪುರಂದರ ಸಂಪುಟದ ಎರಡು ಭಾಗಗಳು ಈಗಾಗಲೇ ಸುಪ್ರಸಿದ್ಧವಾಗಿವೆ. ಪುರಂದರದಾಸರ ಸಾವಿರಾರು ಹಾಡುಗಳು, ಹರಿದಾಸರ 4500 ಹಾಡುಗಳು, ಹರಿದಾಸರ ಹತ್ತುಸಾವಿರ ಹಾಡುಗಳು ಮುಂತಾದ ಅದ್ಭುತ ಗ್ರಂಥಗಳನ್ನು ಅವರು ಸಮಾಜಕ್ಕೆ ನೀಡಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನಿರ್ಮಿತವಾಗಿರುವ ನಾಲ್ಕು ಕೋಟಿ ರೂಪಾಯಿಗಳ ವೆಚ್ಚದ ಭವ್ಯ ಪುರಂದರ ಮಂಟಪದ ಸ್ಥಾಪನೆಗೆ ಅರಳುಮಲ್ಲಿಗೆ ಪ್ರೇರಕಶಕ್ತಿಯಾಗಿದ್ದಾರೆ. ಕನ್ನಡ ಸಾಹಿತ್ಯಲೋಕಕ್ಕೆ ಈಗಾಗಲೇ ಮಹತ್ವದ ಕೊಡುಗೆ ನೀಡಿರುವ ಶಿವಮೊಗ್ಗ ಜಿಲ್ಲೆಯ ಸಾಗರದ ರವೀಂದ್ರ ಪುಸ್ತಕಾಲಯದ ದಂತಿಯವರ ಸಾಂಸ್ಕೃತಿಕ ಸಾಧನೆಗಳ ಅಪಾರ ಹೆಮ್ಮೆ ಹಾಗೂ ಅಭಿಮಾನದಿಂದ ಅರಳುಮಲ್ಲಿಗೆಯವರ ಈ ಕೃತಿಯನ್ನು ರವೀಂದ್ರ ಪುಸ್ತಕಾಲಯ ಪ್ರಕಟಿಸುತ್ತಿದೆ. ಪುರಂದರದಾಸದ ಅತ್ಯಂತ ಸುಪ್ರಸಿದ್ಧ ಹಾಗೂ ಜನಪ್ರಿಯ ಹಾಡುಗಳು ಶತಶತಮಾನಗಳ ಕಾಲ ಕನ್ನಡ ಜನಮಾನಸದಲ್ಲಿ ಉಳಿದುಬಂದಿದ್ದು, ನಾಲಿಗೆಯ ಮೇಲೆ ಉಲಿದು ಬಂದಿದ್ದು, ಈಗ ಈ ಕೃತಿಯ
ರೂಪದಲ್ಲಿ ಪಟವಾಗುತ್ತಿವೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)