Skip to product information
1 of 2

Nithin Pai

ನಿತೋಪದೇಶ

ನಿತೋಪದೇಶ

Publisher - ಹರಿವು ಬುಕ್ಸ್

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 225

Type -

ನಿತೋಪದೇಶ ಒಂದು ಸೊಗಸಾದ ಕತೆಯಾಗಿದ್ದು, ಇತಿಹಾಸಕಾರರು ಮತ್ತು ನುಡಿಯರಿಗರು ಇದರ ಬಗ್ಗೆ ಹೆಚ್ಚಿನ ಅರಕೆ/ಸಂಶೋಧನೆ ನಡೆಸಿ, ಅರಿವು ಹಂಚಿಕೊಳ್ಳುವ ಅರ್ಥಪೂರ್ಣ ಚರ್ಚೆಗೆ ಎಡೆಮಾಡಿಕೊಡಲಿ ಎಂದು ಹಾರೈಸುತ್ತೇನೆ. ಹಕ್ಕಿ ಪ್ರಾಣಿಗಳ ಮೂಲಕ ನಿತೋಪದೇಶದಲ್ಲಿ ಹೇಳಲಾಗಿರುವ ನೀತಿಕತೆಗಳು, ‘ಬದುಕುವ ಬಗೆ’ಯನ್ನು ತಿಳಿಸುವ ಸಂಸ್ಕೃತ ಮೂಲದ ಪಂಚತಂತ್ರ ಮತ್ತು ಹಿತೋಪದೇಶದ ಶೈಲಿ ಮತ್ತು ಹುರುಳನ್ನೇ ಹೋಲುತ್ತವೆ. ತನ್ನೊಳಿತು ಮತ್ತು ಒಟ್ಟಾರೆ ಎಲ್ಲರ ಒಳಿತು ಎರಡನ್ನೂ ಹೇಗೆ ಸರಿತೂಗಿಸಬೇಕು ಎಂದು ಹೇಳುವ, ಸರ್ವಕಾಲಕ್ಕೂ ಸಲ್ಲುವ ತಿಳುವಳಿಕೆಯನ್ನು ನೀಡುವ ಈ ಪುಸ್ತಕದ ಬರಹಗಾರನಿಗೆ ಮುಂದಿನ ತಲೆಮಾರುಗಳು ಎಷ್ಟು ನಮಿಸಿದರೂ ಸಾಲದು.

-ಕ್ಯಾಪ್ಟನ್ ಜಿ ಆರ್ ಗೋಪಿನಾತ್

ಸಮಾಜದಲ್ಲಿನ ಸ್ಥಾನಮಾನ ಮತ್ತು ಅದರಿಂದ ಸಿಗುವ ಅಧಿಕಾರಗಳ ಬಗೆಗಿನ ಸಾಮಾನ್ಯ ತಿಳುವಳಿಕೆಯಿಂದ, ಹೇಗೆ ತನ್ನನ್ನು ಅಂಕೆಯಲ್ಲಿಟ್ಟುಕೊಂಡು ಗೆಲುವು ಪಡೆಯಬಹುದು ಎಂಬುದನ್ನು ಈ ಕತೆಗಳು ತೋರಿಸಿಕೊಡುತ್ತವೆ. ನೀತಿಕತೆಗಳು ಎಂದಿಗೂ ಸಲ್ಲುತ್ತವೆ ಎಂಬುದನ್ನು ಇದು ಮೊತ್ತೊಮ್ಮೆ ಖಚಿತಪಡಿಸಿದೆ.

-ವಿವೇಕ್ ಶಾನಭಾಗ್


ನಾಗರಿಕ ಹೊಣೆಗಾರಿಕೆಯ ಬಗೆಗಿನ ಈ ನೀತಿಕತೆಗಳಲ್ಲಿ ಭಾರತದ ಅಡಿಗಲ್ಲಾದ ಸಂವಿಧಾನದ ಮೌಲ್ಯಗಳು ಎದ್ದುಕಾಣುತ್ತವೆ. ಕತೆಹೇಳುವ ಭಾರತದ ಶ್ರೀಮಂತ ಸಂಪ್ರದಾಯವನ್ನು ಬಳಸಿಕೊಂಡು ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದ ಪ್ರಮುಖ ಒಳನೋಟಗಳನ್ನು ಹೊರತರಲಾಗಿದೆ.

-ರೋಹಿಣಿ ನಿಲೇಕಣಿ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)