Anand I. Kunchanur
ನಿರೂಪ
ನಿರೂಪ
Publisher -
- Free Shipping Above ₹350
- Cash on Delivery (COD) Available*
Pages - 128
Type - Paperback
Couldn't load pickup availability
ಗ್ರಾಮ ಜಗತ್ತಿನಿಂದ ನಗರದ ಕಾರ್ಪೋರೇಟ್ ಜಗತ್ತಿನ ಕಡೆಗೆ ವಲಸೆ ಹೋಗಿರುವ ಸಂವೇದನಾಶೀಲ ಲೇಖಕರಿಂದ ಸಾಹಿತ್ಯ ಕಣಜಕ್ಕೆ ಹೊಸ ಫಸಲು ಸೇರ್ಪಡೆಯಾಗುತ್ತಿರುವುದು ಸ್ವಾಗತಾರ್ಹ. ಕವಿ ಕತೆಗಾರರಾಗಿ ಈಗಾಗಲೇ ನಮಗೆಲ್ಲ ಪರಿಚಿತರಾಗಿರುವ ಆನಂದ ಕುಂಚನೂರ ಅವರು ತಮ್ಮ 'ನಿರೂಪ' ಎನ್ನುವ ಕಥಾ ಸಂಕಲನದ ಮೂಲಕ ಹೊಸ ಫಸಲನ್ನು ಒಕ್ಕಿ ತಂದಿದ್ದಾರೆ. ಇಲ್ಲಿನ ಫಸಲು ಈ ಹಿಂದೆ ನಮ್ಮ ಕಥಾಸಾಹಿತ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಗ್ರಾಮ ನಗರಗಳ ಮುಖಾಮುಖಿಯ ನಿರೂಪಣೆಗಿಂತ ಹೆಚ್ಚು ಆಳವೂ ಸಂಕೀರ್ಣವೂ ಆಗಿ ದಾಖಲಾಗುತ್ತಿದೆ. ಗ್ರಾಮದ ಸಹಜಕ್ಕೆ ನಗರದ ಕೃತಕತೆಯನ್ನು ಮುಖಾಮುಖಿಯಾಗಿಸುವ ಮಿತಿಯನ್ನು ದಾಟಿ ಎರಡೂ ಲೋಕಗಳ ವಾಸ್ತವದ ಚಹರೆಗಳನ್ನು ಅನಾವರಣಗೊಳಿಸುವ ಕೆಲಸವನ್ನು ಆನಂದ ಕುಂಚನೂರ ಅವರು ಇಲ್ಲಿ ಸಮರ್ಥವಾಗಿ ಮಾಡಿದ್ದಾರೆ. ಅವರು ಗ್ರಾಮ ಹಾಗೂ ನಗರಗಳನ್ನು binary opposition ಗಳನ್ನಾಗಿ ಮಾತ್ರ ಗ್ರಹಿಸದೆ ಎರಡರಲ್ಲೂ ನಿರಂತರವಾಗಿ ಚಲನಶೀಲವಾಗಿರುವ ಪಲ್ಲಟಗಳನ್ನು ಮತ್ತು ಅವು ಸೃಷ್ಟಿಸುವ ಬಿಕ್ಕಟ್ಟುಗಳನ್ನು ಪಾತಾಳಗರಡಿ ಹಾಕಿ ಅವರು ಹೆಕ್ಕಿ ತೆಗೆದಿದ್ದಾರೆ.
ಕರ್ನಾಟಕದ ಮೆಂಚೆಸ್ಟರ್ ಎಂದು ಹೆಸರಾಗಿರುವ ಮಗ್ಗಗಳ ಅರೆನಗರ ರಬಕವಿ-ಬನಹಳ್ಳಿಯಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಔಷಲ ಕಂಪನಿಯೊಂದರಲ್ಲಿ ಹಿರಿಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಆನಂದ ಅವರು ಎರಡೂ ಲೋಕಗಳನ್ನು ನಿಷ್ಪಕ್ಷಪಾತದ ಕಣ್ಣುಗಳಿಂದ ಗ್ರಹಿಸಿ ಈ ಸಂಕಲನದ ಅಷ್ಟೂ ಕತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಸಂಕಲನದಲ್ಲಿ ಆನಂದ ಕುಂಚನೂರ ಅವರು ರಬಕವಿ-ಬನಹಳ್ಳಿ ಪರಿಸರದ ದ್ರಾಕ್ಷಾಣಿ ಹಾಗೂ ಬೆಂಗಳೂರು ಪರಿಸರದ ಮಧುರಾ ಇಬ್ಬರ ಸಂಕಟಗಳನ್ನು ನಿರ್ಮಮಕಾರದಿಂದ ಚಿತ್ರಿಸಿರುವುದನ್ನು ಗಮನಿಸಿದರೆ ಹೊಸ ಕಥಾಯಾನದಲ್ಲಿ ಅವರು ಗಟ್ಟಿಯಾದ ಹೆಜ್ಜೆಗಳನ್ನಿಡುತ್ತಿರವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಇಲ್ಲಿನ ಕಥಾನಿರೂಪಣೆ ಆಕರ್ಷಕವಾಗಿದೆ. ಅತಿಯಾದ ತಂತ್ರಗಾರಿಕೆಯ ಭಾರದಿಂದ ಇಲ್ಲಿನ ಕತೆಗಳು ಬಳಲುವುದಿಲ್ಲ. ಗದ್ಯ ಹಾಗೂ ಕಾವ್ಯ ಎರಡರ ಶಕ್ತಿಯನ್ನು ಹದವರಿತು ಆಹ್ವಾನಿಸಿಕೊಂಡಿರುವ ಇಲ್ಲಿನ ಭಾಷೆ ಹೃದ್ಯವಾಗಿದೆ.
-ಚನ್ನಪ್ಪ ಕಟ್ಟಿ ಕತೆಗಾರರು, ಸಿಂದಗಿ
Share

Subscribe to our emails
Subscribe to our mailing list for insider news, product launches, and more.