1
/
of
2
P Venkatesha Baagalavada
ನಿಮಗ ತಿಳಿಯೋದಿಲ್ಲ ಬಿಡ್ರಿ
ನಿಮಗ ತಿಳಿಯೋದಿಲ್ಲ ಬಿಡ್ರಿ
Publisher -
Regular price
Rs. 120.00
Regular price
Rs. 120.00
Sale price
Rs. 120.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 132
Type - Paperback
Gift Wrap
Rs. 15.00
Couldn't load pickup availability
ಗೆಳೆಯ ವೆಂಕಟೇಶ್ ಬಾಗಲವಾಡರ 'ನಿಮಗ ತಿಳಿಯೋದಿಲ್ಲ ಬಿಡ್ರಿ' ಸಂಕಲನದ ಹಾಸ್ಯ ಬರಹಗಳು ತೀರ ಸಹಜವಾಗಿ, ಮಾತನಾಡುವ ಶೈಲಿಯಲ್ಲಿ ಮೂಡಿಬಂದಿರುವುದಕ್ಕೆ ಅವರೊಳಗಿನ 'ಹಾಸ್ಯ ಪ್ರಜ್ಞೆ' ಕಾರಣ. ಅವರು ನನ್ನ ಬಾಲ್ಯದ ಸ್ನೇಹಿತರು. ಅವರೊಂದಿಗೆ ಅನೇಕ ಕಷ್ಟ-ಸುಖಗಳನ್ನು ಹಂಚಿಕೊಂಡಿದ್ದೇನೆ. ಅವರು ಸಹ ತಮ್ಮ ನೋವು-ನಲಿವುಗಳನ್ನು ನನ್ನೊಂದಿಗೆ ತೋಡಿಕೊಂಡಿದ್ದಾರೆ.
ಅಂಚೆ ಇಲಾಖೆಯ ಕೆಲಸದಲ್ಲಿದ್ದಾಗಲೇ ತಮ್ಮ ಅರ್ಧಾಂಗಿಯನ್ನು ಕಳೆದುಕೊಂಡ ಅವರು ಕೊಂಚಮಟ್ಟಿಗೆ ನೋವಿನಲ್ಲಿದ್ದರು. ಆಗಾಗ ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿದ್ದ ಅವರಿಗೆ ತಮ್ಮ ಶ್ರೀಮತಿಯವರ ಅಗಲುವಿಕೆಯ ನೋವನ್ನು ಮರೆಯಲು ನಿವೃತ್ತಿಯ ನಂತರ ಕನ್ನಡ ಸಾಹಿತ್ಯದ ಹಾಸ್ಯ ಬರಹಗಳಲ್ಲಿ ಒಂದಾದ ಲಲಿತ ಪ್ರಬಂಧಗಳನ್ನು ಆಯ್ಕೆ ಮಾಡಿಕೊಂಡಿರುವುದು ಖುಷಿಯ ಸಂಗತಿ.
ಮನುಷ್ಯನಿಗೆ ನೋವುಗಳು ಸಹಜ. ಅವುಗಳನ್ನು ಮೀರಿ ಸಮಾಜಮುಖಿಯಾಗಿ ಬದುಕಿದಾಗಲೇ ಜೀವನ ಸಾರ್ಥಕತೆ. ಅವರ ಅನೇಕ ಲಲಿತ ಪ್ರಬಂಧಗಳನ್ನು ಓದಿ ಖುಷಿ ಪಟ್ಟವರಲ್ಲಿ ಗೆಳೆಯ ಮಂಡಲಗಿರಿ ಪ್ರಸನ್ನ ಮೊದಲಿಗರು. ನಂತರ ನಾನು ಎರಡನೆಯವನಾಗಿ ಓದಿ ಮೆಚ್ಚಿಕೊಂಡಿದ್ದೇನೆ. ಕೆಲವು ಪ್ರಬಂಧಗಳು ವಿವಿಧ ದಿನಪತ್ರಿಕೆಯಲ್ಲಿ ಗಮನಿಸಿದ್ದೇನೆ.
ಕನ್ನಡ ಹಾಸ್ಯ ಸಾಹಿತ್ಯ ಲೋಕ ಎಂದರೆ ಪಕ್ಕನೆ ನೆನಪಾಗುವ ಮೊದಲು ಹೆಸರು ಬೀಚಿ. ಅವರಷ್ಟು ಹಾಸ್ಯದ ಹೊನಲು ಹರಿಸಿದವರು ಇನ್ನಾರು ಇಲ್ಲ. 'ಬೀಚಿ ತೋಚಿದ್ದನ್ನೆಲ್ಲಾ ಗೀಚಿದರು' ಎಂದು ನನ್ನ ತಾಯಿ ವಿಮಲಾಬಾಯಿ ಗುಡಿ ನಾನು ಚಿಕ್ಕವನಿದ್ದಾಗ ಹೇಳುತ್ತಿದ್ದರು. ಈ ಮಾತು ಅಕ್ಷರಶಃ ಸತ್ಯ. ಗೆಳೆಯ ವೆಂಕಟೇಶನಿಗೆ ಬೀಚಿ ಸಾಹಿತ್ಯ ಹೆಚ್ಚು ಪ್ರಭಾವ ಬೀರಿದೆ.
ಜಗತ್ತು ಎಷ್ಟೇ ತಂತ್ರಜ್ಞಾನ ಹೊಂದಿದ್ದರೂ ಅನ್ನವನ್ನು ಆನ್ಲೈನ್ನಲ್ಲಿ ಬೆಳೆಯಲಾಗುವುದಿಲ್ಲ. ಹಾಗೆಯೇ ಸಾಹಿತ್ಯವನ್ನು ಸಹ. ಇದು ಬರಹಗಾರನ ಕ್ರಿಯಾಶೀಲತೆ. ಜಗತ್ತನ್ನು ನೋಡುವ ಅವನ ಅನನ್ಯ ದೃಷ್ಟಿಕೋನದಿಂದ ಮಾತ್ರ ಸಾಧ್ಯ. ಇದನ್ನು ಗೆಳೆಯ ವೆಂಕಟೇಶ್ ಬಾಗಲವಾಡ ಮೈಗೂಡಿಸಿಕೊಂಡು ಹಾಸ್ಯ ಸಾಹಿತ್ಯ ಲೋಕಕ್ಕೆ ಚೊಚ್ಚಲ ಕೃತಿ ನೀಡುತ್ತಿದ್ದಾರೆ. ಅವರ ಮುಂದಿನ ಬರಹಗಳಿಗೆ ಇನ್ನಷ್ಟು ಸ್ಫೂರ್ತಿ ಸಿಗಲಿ, ಅವರಿಂದ ಮತ್ತಷ್ಟು ಕೃತಿಗಳು ಹೊರಬರಲಿ ಎಂದು ಶುಭಕೋರುತ್ತೇನೆ.
- ಪ್ರಹ್ಲಾದ ಗುಡಿ
ವಕೀಲರು ಹಾಗೂ ಪತ್ರಕರ್ತರು
ಸಿಂಧನೂರು
ವಕೀಲರು ಹಾಗೂ ಪತ್ರಕರ್ತರು
ಸಿಂಧನೂರು
Share

Subscribe to our emails
Subscribe to our mailing list for insider news, product launches, and more.