Skip to product information
1 of 1

Sudhindra Haldodderi

ನೆಟ್ ನೋಟ

ನೆಟ್ ನೋಟ

Publisher - ಸಾವಣ್ಣ ಪ್ರಕಾಶನ

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ವಿಜ್ಞಾನಲೋಕವನ್ನು ಬಗೆಗಣ್ಣಿನಲ್ಲಿ ನೋಡಿ ಓದುಗರಲ್ಲಿ ಬೆರಗು ಹುಟ್ಟಿಸಿದ ಮೋಡಿಗಾರ ಸುಧೀಂದ್ರ ಪಾಲ್ಗೊಡೇರಿ, ಜನಸಾಮಾನ್ಯರ ಎದೆಯೊಳಕ್ಕೆ ಹನಿಹನಿಯಾಗಿ ನೇರವಾಗಿ ಜಿನುಗುವ ಭಾಷೆ, ಪುಟಪುಟಗಳಲ್ಲೂ ಪುಟಿಯುವ ಶಬ್ದಲಾಲಿತ್ಯ, ಸಮಕಾಲೀನ ವಿಜ್ಞಾನ ತಂತ್ರಜ್ಞಾನಗಳತ್ತ ನೆಟ್ಟ ನೋಟ, ಸಂಶೋಧನೆಗಳಿಗೆ ಕಥೆಯ ಹಂದರ ತೊಡಿಸಿ ಓದನ್ನು ಸುಭಗಗೊಳಿಸಿದ ಲೇಖಕ. ಎಲ್ಲ ಮಾಧ್ಯಮಗಳೂ ಅವರ ಇರುವನ್ನು, ಬರುವನ್ನು, ಬರಹವನ್ನು ನಿರೀಕ್ಷಿಸುತ್ತಿದ್ದವು. ಅವರ ಯೋಚನಾಲಹರಿಯ ಬೀಸು, ವಿಸ್ತಾರ ಎರಡೂ ಹೈಜಂಪ್, ಲಾಂಗ್‌ಜಂಪ್‌ಗೆ ಹಾತೊರೆಯುತ್ತಿದ್ದವು.

ಕನ್ನಡ ಸಾಹಿತ್ಯದ ಬಹುರೂಪಿ ಗುಣವನ್ನು ವಿಜ್ಞಾನ ಸಾಹಿತ್ಯಕ್ಕೆ ಯುಕ್ತವಾಗಿ ಬಳಸಿಕೊಂಡ ಜಾಣೆ ಅವರದು. ಬರಹದಲ್ಲಿ ವಚನಗಳ ಸಾಲು ಇಣುಕಿದವು-ದಾಸರ ಕೀರ್ತನೆಗಳು ಕುಣಿದವು. ಕನ್ನಡ ಕವಿಗಳ ಪ್ರಸಿದ್ಧ ಸಾಲುಗಳು ಮಿಂಚಿದವು, ಸಿನಿಮಾ ಹಾಡುಗಳಿಗೂ ಪ್ರವೇಶ ಕಲ್ಪಿಸಿದರು. ಆದರೆ ಎಲ್ಲೂ ಅದು ವಿಜ್ಞಾನಕ್ಕೆ ಕೃತಕ ಎನ್ನಿಸಲಿಲ್ಲ, ಅಲಂಕಾರದ ಮಾತಾಗಲಿಲ್ಲ, ಬದಲು ಲೇಖನದ ಸೊಗಡನ್ನು ಹೆಚ್ಚಿಸಿದವು. ಅವರ ಲೇಖನಗಳ ರೇಂಜ್ ನ್ಯಾನೋ ತಂತ್ರಜ್ಞಾನದಿಂದ ಹಿಡಿದು ಜೇನ್ ಎಡಿಟಿಂಗ್‌ವರೆಗೆ, ಸೊಳ್ಳೆಯಿಂದ ಹಿಡಿದು ಯುದ್ಧ ವಿಮಾನಗಳವರೆಗೆ-ಅವರು ಸ್ಪರ್ಶಿಸದ ವಿಜ್ಞಾನ ವಿಷಯಗಳೇ ಅಲ್ಲ, ವಿಜ್ಞಾನವನ್ನು ವಜ್ರದೇಹಿ ಎಂಬ ಆರೋಪದಿಂದ ಮುಕ್ತಗೊಳಿಸಿ, ಅದರ ವಿಶ್ವಯದ ಬಾಗಿಲನ್ನು ತೆರೆದರು.

ಡಿ.ಆರ್.ಡಿ.ಓ. ಸಂಸ್ಥೆಯಲ್ಲಿ ಸುಧೀಂದ್ರ ಮಾಡಿದ್ದು ಸಂಶೋಧನೆ, ವಿಜ್ಞಾನ ಸಾಹಿತ್ಯದಲ್ಲಿ ಬರವಣಿಗೆಯ ನಿಗೂಢ ಆಯಾಮಗಳ ಶೋಧನೆ. ಇದರಿಂದ ಲಾಭವಾದದ್ದು ಕನ್ನಡ ಓದುಗರಿಗೆ ಕಳೆದ ನಾಲ್ಕು ದಶಕಗಳಿಂದ ಅವರು ಬರೆದ ವಿಜ್ಞಾನ ಲೇಖನಗಳನ್ನೆಲ್ಲ ಸಂಗ್ರಹಿಸಿ ಪ್ರಕಟಿಸಿದರೆ ಅದೇ ವಿಜ್ಞಾನದ ವಿಶ್ವಕೋಶ ಸಂಪುಟಗಳಾಗಬಹುದು, ಹೊಸ ತಲೆಮಾರಿನ ಲೇಖಕರಿಗೆ ಸ್ಫೂರ್ತಿಯ ಸೆಲೆಯಾಗಬಹುದು. ಈ ಪ್ರಕಟಣೆ ಆ ನಿಟ್ಟಿನ ಮೊದಲ ಹೆಜ್ಜೆ,

-ಟಿ.ಆರ್. ಅನಂತರಾಮು
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)