Dr. Bannanje Govindacharya
ನೆನಪಾದಳು ಶಕುಂತಲೆ
ನೆನಪಾದಳು ಶಕುಂತಲೆ
Publisher - ಅಂಕಿತ ಪುಸ್ತಕ
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಬನ್ನಂಜೆ ಗೋವಿಂದಾಚಾರ್ಯರು ಸದಾ ನಮಗೊಂದು ವಿಸ್ಮಯ. ಸಂಸ್ಕೃತ ಮತ್ತು ಕನ್ನಡ ಕ್ಷೇತ್ರದಲ್ಲಿ ಅವರು ನಡೆಸಿರುವ ಶಾಸ್ತ್ರ-ಸಾಹಿತ್ಯ ಸಾಧನೆ ನಮಗೆ ಬೆರಗನ್ನು ತರುತ್ತದೆ. ಇವರದು ಕಾರಯಿತ್ರೀಪ್ರತಿಭೆ. ಇವರ ತಂದೆ ಸಂಸ್ಕೃತದ ಮಹಾವಿದ್ವಾಂಸರಾಗಿದ್ದ ವಿದ್ವಾನ್ ಪಡುಮುನ್ನೂರು ನಾರಾಯಣಾಚಾರ್ಯರು.
ತಂದೆಯಿಂದ ಶಾಸ್ತ್ರ, ವೇದಾಂತಸಾಹಿತ್ಯದ ಬಳುವಳಿ, ಶ್ರೀಫಲಿಮಾರುಮಠದ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರಿಂದ ಶಾಸ್ತಾನುಗ್ರಹ. ಅನೇಕ ಅಲೌಕಿಕ ಶಾಸ್ತ್ರವಿಷಯಗಳಲ್ಲಿ ಸ್ವಯಮಾಚಾರ್ಯ. ವೇದ, ಉಪನಿಷತ್ತು, ದರ್ಶನ, ವ್ಯಾಕರಣ, ಪುರಾಣ, ತಂತ್ರ-ಮಂತ್ರ, ಗಣಿತ, ಸಂಗೀತ, ಛಂದಶ್ಯಾಸ್ತ್ರ, ಲಲಿತಕಲೆ, ಕಾವ್ಯ, ನಾಟಕ, ಅನುವಾದ, ಕಾವ್ಯಚಿಂತನೆ ಹೀಗೆ ಅನೇಕ ಶಾಸ್ತ್ರ-ಸಾಹಿತ್ಯ ಪ್ರಕಾರಗಳಲ್ಲಿ ಅನನ್ಯ ಸಿದ್ಧಿ-ಸಾಧನೆ ಮಾಡಿದ ವಿದ್ವತ್ತಲ್ಲದೆ, ಸಂಸ್ಕೃತ ಸಂಶೋಧನೆಯ ಜಗತ್ತಿನಲ್ಲಂತೂ ಅವರು ಒಂಟಿಸಲಗ. ಕನ್ನಡದ ಮಣ್ಣಿನಲ್ಲಿ ನಿಂತು, ಸಂಸ್ಕೃತವೆಂಬ ಆಕಾಶವನ್ನು ತಮ್ಮ ಕಣ್ಣಲ್ಲಿ ತುಂಬಿಕೊಂಡ ಕವಿ-ದಾರ್ಶನಿಕ. ತಮ್ಮ ವಾಗ್ದತೆಯಿಂದ, ಸಹಸ್ರಾರು ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡ ವಶ್ಯವಾಣೀ ಚಕ್ರವರ್ತಿ, ಬನ್ನಂಜೆ ಅವರದು ಋಷಿಸದೃಶ ವ್ಯಕ್ತಿತ್ವ.
-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ(ವಿಶ್ರಾಂತ ಕುಲಪತಿಗಳು).
Share

Subscribe to our emails
Subscribe to our mailing list for insider news, product launches, and more.