Skip to product information
1 of 1

Dr. H. B. Chandrashekar

ನೆಲೆ ನಿಂತ ನೆಲವ ನೀ ಬೆಳಗು

ನೆಲೆ ನಿಂತ ನೆಲವ ನೀ ಬೆಳಗು

Publisher -

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ನೆಲೆ ನಿಂತ ನೆಲವ ನೀ ಬೆಳಗು ಗ್ರಂಥ, ಶಿಕ್ಷಣ ಕಾರ್ಯದಲ್ಲಿರುವ ಎಲ್ಲರಿಗೂ, ಶಿಕ್ಷಣ ಮಂತ್ರಿಗಳು, ಶಿಕ್ಷಣ ಅಧಿಕಾರಿಗಳು, ಶಿಕ್ಷಕರು, ಡಿ.ಎಡ್. ಬಿ.ಎಡ್. ವಿದ್ಯಾರ್ಥಿಗಳು, ಪಾಲಕರು ಮತ್ತು ಆಸಕ್ತಿ ಇರುವ ಎಲ್ಲ ಸಾರ್ವಜನಿಕರಿಗೆ ಅತ್ಯಂತ ಉಪಯೋಗೀ ಕೈಪಿಡಿಯಾಗಿದೆ. ಇದರಲ್ಲಿ ಬಂದಿರುವ ಎಲ್ಲ ಲೇಖನಗಳು ಆಗಲೇ ಬಿಡಿಬಿಡಿಯಾಗಿ ನಾಡಿನ ಖ್ಯಾತ ಪತಿಣಿಗಳಲ್ಲಿ ಪ್ರಕಟವಾಗಿವೆ. ಜನಮೆಚ್ಚುಗೆ ಪಡೆದಿವೆ. ಅವೆಲ್ಲವುಗಳನ್ನು ಒಂದೆಡೆಗೆ ತಂದು ಓದುಗರಿಗೆ ಉಪಕಾರ ಮಾಡಿದ್ದಾರೆ. ಒಟ್ಟಿನಲ್ಲಿ, ಇದೊಂದು ಸಂಪೂರ್ಣ ಶಿಕ್ಷಣದ ಕೈಪಿಡಿ, ಈ ಕ್ಷೇತ್ರದಲ್ಲಿ ಆಸಕ್ತಿ ಇರುವ ಎಲ್ಲರಿಗೂ ಪ್ರಯೋಜನವಾಗುವ, ಪ್ರಚೋದನೆ ನೀಡುವ ಈ ಗ್ರಂಥ ಅತ್ಯಂತ ಜನಪ್ರಿಯವಾಗುವುದರಲ್ಲಿ ಯಾವ ಸಂದೇಹವೂ ದ್ರಶೇಖರ್ ಮನೆ-ಮನೆಗಳನ್ನು, ಮನ-ಮನಗಳನ್ನು, ಶಾಲೆ, ಕಾಲೇಜುಗಳನ್ನು, ಮುಖ್ಯವಾಗಿ ಮಕ್ಕಳನ್ನು ತಲುಪಬೇಕು. ಇಂಥ ಸುಂದರ ಕೃತಿಯನ್ನು ನೀಡಿದ್ದಕ್ಕಾಗಿ ನಾನು ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವ ಎಲ್ಲರ ಪರವಾಗಿ ಡಾ. ಚಂದ್ರಶೇಖರ್ ಅಭಿನಂದನೆಗಳನ್ನು, ಅಭಿನಂದನೆಗಳನ್ನು ತಿಳಿಸುತ್ತೇನೆ. ಈ ಪ್ರಯತ್ನ ಸಾರ್ಥಕವಾಗಲಿ ಸರ್ವವೂ ಶುಭವಾಗಲಿ.

-ಡಾ. ಗುರುರಾಜ ಕರಜಗಿ ಅಧ್ಯಕ್ಷರು, ಸೃಜನಶೀಲ ಅಧ್ಯಾಪನ ಕೇಂದ್ರ (ACT) ಬೆಂಗಳೂರು-32 (ಮುನ್ನುಡಿಯಿಂದ)

ಇಲಾಖೆಯ ಕುರಿತು ಹಾಗೆಯೇ ಶಿಕ್ಷಣದ ಕುರಿತು ಅಪಾರವಾದ ಆಸ್ತಿ ಹೊಂದಿರುವ ಚಂದ್ರಶೇಖರ್ ಅವರ 'ನೆಲೆ ನಿಂತ ನೆಲವ ನೀ ಬೆಳಗು' - ಲೇಖನಗಳ ಸಂಕಲನವು ಶಾಲೆ, ತರಗತಿ, ಬೋಧನೆ, ಆಡಳಿತ, ಪಾಸು-ನಪಾಸು ಹಾಗೆಯೇ ಎಲ್ಲ ಶೈಕ್ಷಣಿಕ ಪಾಲುದಾರರು... ಹೀಗೆ ಶಿಕ್ಷಣದ ವಿವಿಧ ಸ್ತರದ ವಿಷಯಗಳ ರೂಪದಲ್ಲಿ ಬೆಳಕು ಚೆಲ್ಲಿ ಎಲ್ಲ ಆಯಾಮಗ ಳೊಂದಿಗೆ ಗಟ್ಟಿಯಾದ ಚಿಂತನೆಗೆ ಎಡೆಮಾಡಿಕೊಟ್ಟಿದೆ. ಈ ಪುಸ್ತಕ ಶಿಕ್ಷಕ ತರಬೇತುದಾರರು, ಪ್ರಶಿಕ್ಷಾರ್ಥಿಗಳು, ಪೋಷಕರು, ಇಲಾಖೆಯ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳಿಗೆ ಒಟ್ಟಾರೆಯಾಗಿ ಇಡೀ ಶಿಕ್ಷಣ ಸುಧಾರಣೆಯ ಆಲೋಚನೆಗೆ ಅತ್ಯುಪಯುಕ್ತವಾಗಿದೆ. ವಿಶಿಷ್ಟ ದಾಖಲೆಯಾಗಿದೆ.

-ಎಸ್. ಸುರೇಶ್ ಕುಮಾರ್ (ಮಾಜಿ ಶಿಕ್ಷಣ ಮಂತ್ರಿಗಳು)

ಶಿಕ್ಷಣ ಕ್ಷೇತ್ರದ ಬೆಳವಣಿಗೆಗಳು, ಪ್ರತಿನಿತ್ಯ ಸಮಾಜದಲ್ಲಿ ನಡೆಯುವ ಘಟನೆಗಳನ್ನು ಒಳಗೊಂಡ ಡಾ.ಎಚ್.ಬಿ. ಚಂದ್ರಶೇಖರ್ ಅವರ ಲೇಖನಗಳ ಕೃತಿ 'ನೆಲೆ ನಿಂತ ನೆಲವ ನೀ ಬೆಳಗು' ಸಮಾಜದ ಕನ್ನಡಿಯೆನ್ನಬಹುದು.

ಶೈಕ್ಷಣಿಕ ವಿಚಾರಗಳು, ಮಕ್ಕಳ ಸೂಕ್ಷ್ಮಗಳನ್ನು ಕಾಲ ಕಾಲಕ್ಕೆ ಪತ್ರಿಕೆಗಳಲ್ಲಿ ಲೇಖನಗಳ ರೂಪದಲ್ಲಿ ಬರೆದಿರುವ ಈ ಪುಸ್ತಕವು ಸಮಸ್ತ ಶಿಕ್ಷಣ ಸಮುದಾಯಕ್ಕೆ, ಅದರಲ್ಲೂ ಪಾಲಕರು, ವಿದ್ಯಾರ್ಥಿಗಳು, ಶಿಕ್ಷಣ ಇಲಾಖೆಗೆ ಬಹು ಉಪಯುಕ್ತವಾಗಿದೆ. ಈ ಪುಸ್ತಕದ ಉಪಯೋಗವನ್ನು ಸಂಬಂಧಿಸಿದ ಎಲ್ಲರೂ ಪಡೆಯಲಿ ಎಂದು ಹಾರೈಸುವೆ.

-ಬಿ.ಸಿ. ನಾಗೇಶ್ ಮಾನ್ಯ ಶಿಕ್ಷಣ ಮಂತ್ರಿಗಳು.

ಪ್ರಕಾಶಕರು - ಸಾಹಿತ್ಯ ಲೋಕ ಪ್ರಕಾಶನ

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)