Dr. Na. Mogasale
ನೆಲ ಮುಗಿಲುಗಳ ಮಧ್ಯೆ
ನೆಲ ಮುಗಿಲುಗಳ ಮಧ್ಯೆ
Publisher - ಸಾಹಿತ್ಯ ಭಂಡಾರ
- Free Shipping Above ₹350
- Cash on Delivery (COD) Available*
Pages - 80
Type - Paperback
Couldn't load pickup availability
ಬದುಕೆಂಬುದೇ ಇಲ್ಲದ ಶೀಲಾಳ ಪಶುಸದೃಶ ಬಾಳಿಗೊಂದು ಕೊನೆ ತರಬೇಕೆಂಬ ನಿರ್ಧಾರ ತುಂಬ ಮಾನವೀಯ. ಆಕೆಗೆ ಆಕೆಯ ಬಾಳ್ವೆ ಹಿಂಸೆಯಾಗಬಾರದೆನ್ನುವ ಕಲ್ಪನೆ ತುಂಬ ಸುಂದರ. ಅಷ್ಟೇ ಅಲ್ಲ, ನಿಜವಾದ ಅರ್ಥದಲ್ಲಿ ಮಾನವೀಯ ಕೂಡ. ಆದರೆ ಆಕೆಯ ಬಾಳ್ವೆ ಹಿಂಸೆಯಾಗಿದೆಯೇ ಇಲ್ಲವೇ ಎಂಬುದನ್ನು ನಾವಿಬ್ಬರು ಬಿಡಿ, ಯಾವ ವೈದ್ಯಶಾಸ್ತ್ರ ಪ್ರವೀಣನೂ ಹೇಳಲಾರ! ಜಗತ್ತಿನ ನಿಜವಾದ ಅಚ್ಚರಿ ಇದು. ಬುದ್ಧಿಜೀವಿಗಳಾದ ನಾವು ಪ್ರಪಂಚದ ಇತರ ಪ್ರಾಣಿಗಳಿಗಿಂತ ಶ್ರೇಷ್ಠರೆಂದು ಉಬ್ಬುತ್ತೇವೆ. ಪ್ರಾಣಿಗಳು ನಮ್ಮ ಬಗ್ಗೆ ಯಾವ ಎಂಥ ಕಲ್ಪನೆ ಇಟ್ಟುಕೊಂಡಿವೆ? ಅವುಗಳ ದೃಷ್ಟಿಯಲ್ಲಿ ನಾವು ವಿವೇಕಶೂನ್ಯರೇ ಇರಬಹುದು! ಈ ಮಾತು ನನ್ನದಲ್ಲ. ನನ್ನ ಹಿರಿಯರಾದ ತತ್ವಶಾಸ್ತ್ರಜ್ಞರೊಬ್ಬರ ಮತ. ಅವರೇ ಹೇಳುವ ಹಾಗೆ ನಾವು ಪ್ರಾಣಿಗಳನ್ನೂ, ಪ್ರಾಣಿಗಳು ನಮ್ಮನ್ನೂ ಎಂದಿಗೂ ಸರಿಯಾಗಿ ಅರ್ಥಮಾಡಿಕೊಳ್ಳಲು ಅಸಾಧ್ಯ. ಸತ್ಯ ಅಥವಾ ನಿಜವಾದ ಅರಿವು, ನಾವು ಪ್ರಾಣಿಗಳ ಬಗೆಗೂ ಪ್ರಾಣಿಗಳು ನಮ್ಮ ಬಗೆಗೂ ಯೋಚಿಸುವ(?) ವಿಧಾನದಲ್ಲಿ ಇರಬಹುದು, ಅಲ್ಲವೇ?
ದಯಾಮರಣದ ಕುರಿತಾದ ಈ ಮನೋಜ್ಞ ಕಾದಂಬರಿಯು ಗಾತ್ರದಲ್ಲಿ ಪುಟ್ಟದಾದರೂ, ವೈದ್ಯಕೀಯ-ಕಾನೂನು-ಮಾನವೀಯತೆ ಮುಂತಾಗಿ ಎಲ್ಲ ದೃಷ್ಟಿಗಳಿಂದಲೂ ಚರ್ಚೆಗೆ ಒಳಪಡಿಸುತ್ತದೆ. ಎಲ್ಲ ಪಾತ್ರಗಳೂ-ಸನ್ನಿವೇಶಗಳೂ ನಮ್ಮ ನಡುವೆಯೇ ಹುಟ್ಟಿಬಂದಂತೆನಿಸಿ ನಮ್ಮ ಹೃದಯದಲ್ಲಿ ಬಹುಕಾಲ ಕಾಡುತ್ತವೆ.
ಕನ್ನಡದ ಪ್ರಮುಖ ಕಾದಂಬರಿಕಾರ ಡಾ॥ ನಾ. ಮೊಗಸಾಲೆ ಅವರ ನೆಲಮುಗಿಲುಗಳ ಮಧ್ಯೆ
ಒಂದು ಉತ್ಕೃಷ್ಟ ಕಾದಂಬರಿ!
Share

Subscribe to our emails
Subscribe to our mailing list for insider news, product launches, and more.