Dr. Tamil Selvi
ನಯಸೇನ ಮತ್ತು ಅವನ ಧರ್ಮಾಮೃತ
ನಯಸೇನ ಮತ್ತು ಅವನ ಧರ್ಮಾಮೃತ
Publisher - ಕನ್ನಡ ವಿಶ್ವವಿದ್ಯಾಲಯ
- Free Shipping Above ₹400
- Cash on Delivery (COD) Available*
Pages - 142
Type - Paperback
Couldn't load pickup availability
ಕನ್ನಡ ವಿಶ್ವವಿದ್ಯಾಲಯ ತನ್ನ ಸೃಜನಶೀಲ ಸಂಶೋಧನೆಯ ಹಾದಿಗಳನ್ನು ಶೋಧಿಸಲು ಹೊರಟಿದೆ. ಆ ಶೋಧನೆಯ ಹಿನ್ನೆಲೆಯಾಗಿ ನಮಗೆ ಅಲ್ಲಮನ ಮಾತಿನ 'ಆರದ ಬೆಳಕಿದೆ': ರಾಘವಾಂಕನ 'ಜನ ಬದುಕಬೇಕೆಂದು ಕಾವ್ಯಮಂ ಪೇಳೆ' ಎಂಬ ನೆನಕೆ ಇದೆ. ಕಾವ್ಯದಿಂದ ಜನ ಬದುಕುವುದು ಹೇಗೆ? ಬದುಕಿದ್ದು ಹೇಗೆ? ಎನ್ನುವುದನ್ನು ಕನ್ನಡ ಸಾಹಿತ್ಯ, ಪರಂಪರೆ, ಜನಪದ ಮೌಖಿಕ ಪರಂಪರೆ ನಮಗೆ ವಿವರಿಸಿದೆ. ಲೋಕಾಂತ ಏಕಾಂತಗಳನ್ನು ಒಂದು ಸ್ಮೃತಿಗಳನ್ನಾಗಿಸಿಕೊಂಡು ಜ್ಞಾನಶಿಸ್ತುಗಳನ್ನು ರೂಪಿಸಿಕೊಳ್ಳುವ ತುರ್ತು ಇಂದು ನಮ್ಮೆದುರಿಗಿದೆ. ಅಂತಹ ಸಂಕಟಗಳನ್ನು, ಬಿಕ್ಕಟ್ಟುಗಳನ್ನು ಎದುರಿಸುತ್ತಲೇ ಕನ್ನಡ ವಿಶ್ವವಿದ್ಯಾಲಯ ಬೆಳೆಯುತ್ತಿದೆ. ಅದಕ್ಕೆ ಸಾಕ್ಷಿಯಾಗಿ ನಮ್ಮ ಅಕ್ಷರದ ಹಣತೆಗಳಿವೆ. ಅದರಲ್ಲಿ ಭೂತವರ್ತಮಾನದ ತೈಲವಿದೆ. ಭವಿಷ್ಯತ್ತಿಗೆ ಬೆಳಕು ನೀಡುವ ಇರಾದೆ ಕನ್ನಡ ವಿಶ್ವವಿದ್ಯಾಲಯಕ್ಕಿದೆ.
ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ.
"ನಯಸೇನ ಮತ್ತು ಅವನ ಧರ್ಮಾಮೃತ' ಒಂದು ಉತ್ತಮವಾದ ಪರಿಚಯ ಕೃತಿ. ಹಳಗನ್ನಡ ಕವಿಗಳ ಪೈಕಿ ನಯಸೇನ ತನ್ನ ನೆಲಮೂಲ ಸಂಸ್ಕೃತಿಯ ಬೇರುಗಳನ್ನು ಬಲು ಗಟ್ಟಿಯಾಗಿ ಹಿಡಿದಿಟ್ಟವನು. ಅವನ ಜೈನಧರ್ಮಾಭಿಮಾನ ಅವನ ದೇಸೀ ಪ್ರೀತಿಯನ್ನು ಎಲ್ಲಿಯೂ ಪ್ರತಿರೋಧಿಸಿಲ್ಲ. ಬದಲಾಗಿ ಅದನ್ನು ಪ್ರೀತಿಯಿಂದ ಅಪ್ಪಿಕೊಂಡಿದೆ. ನಯಸೇನನ ಕಾವ್ಯದ ಎಲ್ಲ ಮಗ್ಗುಲುಗಳನ್ನು ಈ ಕೃತಿ ಚೆನ್ನಾಗಿ ಪರಿಚಯಿಸಿದೆ.
-ಡಾ. ಮಲ್ಲಿಕಾ. ಎಸ್. ಘಂಟಿ
Share

Subscribe to our emails
Subscribe to our mailing list for insider news, product launches, and more.