Srinidhi Publications
ನಾರಾಯಣ ಹೃದಯ ಲಕ್ಷ್ಮಿ ಹೃದಯ ಸ್ತೋತ್ರ
ನಾರಾಯಣ ಹೃದಯ ಲಕ್ಷ್ಮಿ ಹೃದಯ ಸ್ತೋತ್ರ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 32
Type - Paperback
Couldn't load pickup availability
* ಶ್ರೀಲಕ್ಷ್ಮೀ ನಾರಾಯಣರು ಆದಿ ದಂಪತಿಗಳಾಗಿ ಶ್ರೀಹರಿಯು ಮೂಲ ಪ್ರಕೃತಿ ಪುರುಷರಾಗಿ ಜಗದ ಪಾಲನಾಕ್ರಿಯೆಯನ್ನು, ಲೋಕ ಕಲ್ಯಾಣವನ್ನು ನಿರಂತರ ಮಾಡುತ್ತಾ ಅಗ್ರಪೂಜಿತರಾಗಿದ್ದಾರೆ.
* ಲಕ್ಷ್ಮೀನಾರಾಯಣರ ಸ್ಮರಣೆ ಮಾತ್ರದಿಂದ ಸಕಲ ಕಷ್ಟಗಳೂ ನಿವಾರಣೆಗೊಂಡು ಇಹಲೋಕದ ಸಕಲ ಕಾಮನೆಗಳೂ ನೆರವೇರುತ್ತದೆ. ಇದಕ್ಕೆ ಭಗವಂತನಲ್ಲಿ ನಂಬಿಕೆ – ಶ್ರದ್ದೆ ಅತಿಮುಖ್ಯವೆನಿಸುತ್ತದೆ.
* ದಾಸಸಾಹಿತ್ಯದಲ್ಲಿ ಶ್ರೀಹರಿಯ ಮಹಿಮೆಯನ್ನು ಮೆರೆದಿದ್ದು ಪ್ರಸ್ತುತ ಶ್ರೀಜಗನ್ನಾಥದಾಸರ ನಾರಾಯಣ ಹೃದಯ ಮತ್ತು ಲಕ್ಷ್ಮೀ ಹೃದಯ ಪದ್ಯರೂಪಿ - ಸ್ತೋತ್ರಗಳು ಶೀಘ್ರಫಲಪ್ರದ ಮತ್ತು ಜನಜನಿತ.
* ಮೂಲ ಸಂಸ್ಕೃತದಲ್ಲಿ ಉತ್ತವಾಗಿರುವಂತಹ ಅಥರ್ವಣ ರಹಸ್ಯದ ಶ್ರೀಲಕ್ಷ್ಮೀನಾರಾಯಣರ ಹೃದಯ ಸ್ತೋತ್ರಗಳ ಪಾರಾಯಣ - ಪಠಣದಿಂದ ಅಧಿಕ ಶುಭಫಲಗಳು ಬರುತ್ತವೆ. ಆದರೆ ಸಂಸ್ಕೃತದ ಪದ್ಯಗಳನ್ನು ಉಚ್ಚರಿಸಲು ಕಷ್ಟಪಡುವ ಇಂದಿನ ಕಾಲದಲ್ಲಿ ಓದಿದ ಮಾತ್ರಕ್ಕೆ ಅರ್ಥವಾಗುವುದೇ? ಸಧ್ಯಕ್ಕೆ ಅದು ಕಬ್ಬಿಣದ ಕಡಲೆ ಅಷ್ಟೇ!
* ಪ್ರಸ್ತುತ ಈ ಪುಸ್ತಕದಲ್ಲಿ ಶ್ರೀಜಗನ್ನಾಥದಾಸರಿಂದ ರಚಿಸಲ್ಪಟ್ಟ ನಾರಾಯಣ ಹೃದಯ, ಲಕ್ಷ್ಮೀಹೃದಯ ಪದ್ಯಗಳನ್ನು ದಪ್ಪಾಕ್ಷರದಲ್ಲಿ ಮುದ್ರಿಸಿ ನೀಡುತ್ತಿದ್ದೇವೆ. ಕನ್ನಡದಲ್ಲೇ ಈ ಪದ್ಯಗಳು ಇರುವುದರಿಂದ (ಸರಳವಾಗಿರುವುದರಿಂದ) ಇದನ್ನು ಹೇಳಿಕೊಂಡೇ ಅರ್ಥೈಸಬಹುದಾಗಿದೆ. ನಾವು ಏನನ್ನು ಹೇಳುತ್ತಿದ್ದೇವೆಂದು ಮೊದಲು ನಮಗೆ ತಿಳಿದಾಗಲೇ ಆ ಪ್ರಾರ್ಥನೆ ಸ್ತೋತ್ರಾದಿಗಳ ಫಲ ನಮ್ಮನ್ನು ಸೇರುತ್ತದೆ ಎಂಬುದು ಸತ್ಯಕ್ಕೆ ದೂರವಿಲ್ಲದ ವಿಚಾರ.
* ಈ ಪುಸ್ತಕದ ಪಾರಾಯಣವು ಅತ್ಯಂತ ಶ್ರೇಯಸ್ಕರ. ಶುಭಫಲದಾಯಕ ಮತ್ತು ಮಂಗಳಕರವೆನಿಸುವುದು.
* ಶ್ರದ್ದೆ - ಭಕ್ತಿಯಿಂದ ನಿತ್ಯಾಪ್ತಿಕಗಳ ನಂತರ ದೈವ ಸನ್ನಿಧಿಯಲ್ಲಿ ಏಕಚಿತ್ತದಿಂದ ಇದನ್ನು ಪಠಿಸಬೇಕು.
* ಆಸ್ತಿಕರೆಲ್ಲರಿಗೂ ಈ ಸಂಗ್ರಹ ಪ್ರಿಯವೆನಿಸುವುದೆಂಬ ನಂಬಿಕೆಯೊಂದಿಗೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.