Skip to product information
1 of 2

Samyukta Puligal

ನಾನಿಲ್ಲೇ ಇರುವೆ

ನಾನಿಲ್ಲೇ ಇರುವೆ

Publisher - ಸಾವಣ್ಣ ಪ್ರಕಾಶನ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 184

Type - Paperback

Gift Wrap
Gift Wrap Rs. 15.00

ಈ ಪುಸ್ತಕವು ಏಕಕಾಲದಲ್ಲಿ ಮಾರಣಾಂತಿಕ ಖಾಯಿಲೆಯ ಎದುರಲ್ಲೂ ಮನೋಸ್ಥೈರ್ಯವನ್ನು ಉಳಿಸಿಕೊಳ್ಳಲು ಹೋರಾಡಿದ ಮಹಿಳೆಯ ಕಥೆಯಾಗುವುದರ ಜೊತೆಗೆಕ್ಯಾನ್ಸರ್ ಬಂದಾಗ ಸುತ್ತಲಿನವರು ಏನು ಮಾಡಬೇಕುಹೇಗೆ ಸಿದ್ಧವಾಗಿರಬೇಕುಯಾವ್ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕುನೆರವು ಸಹಾಯ ಒದಗಿಸುವ ಆಸ್ಪತ್ರೆಗಳುವಿಮಾ ಯೋಜನೆಗಳು ಎಲ್ಲದರ ಬಗ್ಗೆಯೂ ಮಾತನಾಡುತ್ತದೆ. ಈ ಮಾಹಿತಿ ಆನ್ಲೈನ್ನಲ್ಲಿ ಸಿಗಬಹುದುಆದರೆ ಅದು ಎಷ್ಟರಮಟ್ಟಿಗೆ ಜನಸ್ನೇಹಿ ಮತ್ತು ಕನ್ನಡಸ್ನೇಹಿಯಾಗಿರುತ್ತದೆ ಎನ್ನುವುದು ಪ್ರಶ್ನೆ. ಎಲ್ಲ ಮಾಹಿತಿಗಳನ್ನೂ ಸರಳ ಕನ್ನಡದಲ್ಲಿ ಒದಗಿಸುವ ಈ ಪುಸ್ತಕ ಏಕಕಾಲಕ್ಕೆ ಸೃಜನಶೀಲ ಕೃತಿಯೂ ಮತ್ತು ಮಾಹಿತಿಪೂರ್ಣ ಪುಸ್ತಕವೂ ಆಗಿದೆ. ಅದು ಈ ಪುಸ್ತಕದ ಹಿರಿಮೆ. ಇದನ್ನು ಬರೆದ ಸಂಯುಕ್ತಳಿಗೆ ಅಭಿನಂದನೆಗಳನ್ನು ಹೇಳುತ್ತಲೇ ಕಥಾನಾಯಕಿ ವಿಜಯಾ ಅವರ ಅದಮ್ಯ ಜೀವನಪ್ರೀತಿಗೆ ಶರಣು.

ಸಂಧ್ಯಾರಾಣಿ ಎನ್ । ಲೇಖಕಿ

ಕ್ಯಾನ್ಸರ್ ಯೋಧಯೋಧೆಯರ ಕುರಿತು ಬಂದಿರುವ ಹಲವಾರು ಬೆಸ್್ಟ ಸೆಲ್ಲರ್ಗಳ ಮಧ್ಯೆ ಈ ಪುಸ್ತಕ ಮಸ್ಟ್  ಬೈ ಆಗುತ್ತದೆ ಎನಿಸಿತು. ಕ್ಯಾನ್ಸರ್ ರೋಗದ ಕುರಿತು ಮತ್ತು ಕ್ಯಾನ್ಸರ್ ಬಂದಿರುವಾಗ ಅದನ್ನು ಅನುಭವಿಸುವುದರ ಕುರಿತು ಬಹಳ ವಸ್ತುನಿಷ್ಠ ನಿರೂಪಣೆ ಇಲ್ಲಿದೆ. ಇದು ಡಾಕ್ಯುಮೆಂಟರಿ ಅಲ್ಲಮನಸ್ಸನ್ನು ತಟ್ಟುವಆ ಮೂಲಕ ಬರಿದೆ ಸಂವೇದನೆಯಲ್ಲಿ ನಿಲ್ಲದೆ ನಮ್ಮನ್ನೂ ಯೋಚನೆಕಾರ್ಯಕ್ಕೆ ಹಚ್ಚುವ ಕಥನಾಂಶ ಈ ಪುಸ್ತಕದಲ್ಲಿದೆ. ಅನುಪಮಾ ನಿರಂಜನ ಬರೆದದ್ದಿರೆ ಹೇಗಿರುತ್ತಿತ್ತೋ ಹಾಗಿದೆ ಅನ್ನಿಸಿತು. ವಿಷಯವನ್ನು ಅರ್ಥಪೂರ್ಣವಾಗಿಆದರೂ ವರದಿಯಾಗಿಬಿಡದ ಹಾಗೆಮನಮುಟ್ಟುವ ಕಥೆಯಾಗಿ ಬರೆಯುವ ಸವಾಲಿನಲ್ಲಿ ಲೇಖಕಿ ಗೆದ್ದಿದ್ದಾರೆ. ಅಭಿನಂದನೆಗಳು.

ಸಿಂಧು ರಾವ್ ಟಿ । ಲೇಖಕಿ

View full details