Skip to product information
1 of 1

ಡಾ. ಪಿ. ಶಿವರಾಮ ರೈ

ನಮ್ಮ ಪರಿಸರ

ನಮ್ಮ ಪರಿಸರ

Publisher:

Regular price Rs. 80.00
Regular price Sale price Rs. 80.00
Sale Sold out
Shipping calculated at checkout.
ಮನುಷ್ಯರಲ್ಲದೆ ಇನ್ನಿತರ ಸಾವಿರಾರು ಪ್ರಾಣಿ ಪಕ್ಷಿಗಳು, ಕ್ರಿಮಿ ಕೀಟಗಳು ಜೀವಿಸುತ್ತಿರುವ ನಮ್ಮ ಪರಿಸರ ತ್ವರಿತ ಗತಿಯಲ್ಲಿ ಬದಲಾವಣೆಗೆ ಒಳಪಡುತ್ತಿದೆ. ಇದಕ್ಕೆ ಮುಖ್ಯ ಕಾರಣ, ಹೆಚ್ಚುತ್ತಿರುವ ಜನಸಂಖ್ಯೆಯೇ ಅಲ್ಲದೆ, ತಿಳಿದೋ ಅಥವಾ ತಿಳಿಯದೆಯೋ, ಅಭಿವೃದ್ಧಿಯ ಹೆಸರಿನಲ್ಲಿ, ಹೆಚ್ಚಿನ ಸಂದರ್ಭ ಗಳಲ್ಲಿ ಲಾಭದಾಶೆಯಿಂದ, ಪರಿಸರಕ್ಕೆ ಭಾರಿ ಹಾನಿ ಉಂಟು ಮಾಡುತ್ತಿರುವುದೇ ಆಗಿದೆ. ಇದು ತಿಳಿಯದ ವಿಷಯವೇನಲ್ಲ.

ಪರಿಸರದ ಅವನತಿ ಪ್ರಗತಿಯ ಹೆಸರಿನಲ್ಲಿ ನಡೆಯುತ್ತಿರುವ ಒಂದು ಅಚಾತುರ್ಯ. ಪ್ರತಿಯೊಂದು ಜೀವಿಯೂ ಸಾವಿರಾರು ವರ್ಷಗಳ ವಿಕಸನದಿಂದ ಬೆಳೆದುಬಂದಿರುವ ಪರಿಸರ ಪದ್ಧತಿಯ ಅವಿಭಾಜ್ಯ ಅಂಗ. ಪ್ರತಿಯೊಂದು ಜೀವಿಗೂ ನಮ್ಮ ಜೊತೆಗೂಡಿ ಬಾಳುವ ಹಕ್ಕಿದೆ. ಅವುಗಳ ಅಸ್ತಿತ್ವ ನಮ್ಮ ಬದುಕಿಗೂ ಅವಶ್ಯವಿದೆ.

ಡಾ|| ಪಿ. ಶಿವರಾಮ ರೈ ಅವರು ಇಲ್ಲಿ ಪರಿಸರದ ಬಗ್ಗೆ ತಿಳಿದುಕೊಳ್ಳಬೇಕಾದ ಹಲವು ವಿಷಯಗಳ ಕುರಿತು ವಿವರಿಸಿದ್ದಾರೆ. ಇವರ ಜೀವಾಧಾರ ಮಣ್ಣು, ಕೃಷಿಕರ ಸಂಗಾತಿ, ಮನೆಯ ಅಂದ ಕೈತೋಟ, ಕೀಟಗಳು, ಅಜ್ಜನ ಮೀಸೆ ಮತ್ತು ಇಲಿಗಳ ಪರಿಚಯ ನಿಮಗುಂಟೇ? ನವಕರ್ನಾಟಕದಿಂದ ಪ್ರಕಟವಾಗಿವೆ. ಮುಂತಾದ ಪುಸ್ತಕಗಳು

ಅಕ್ಷರ ಕಿರಣ ಮಾಲೆಯಲ್ಲಿ ಸಹ ಇವರ ಪುಸ್ತಕಗಳು ಪ್ರಕಟವಾಗಿವೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)