Skip to product information
1 of 1

ಡಾ. ನಾ. ಸೋಮೇಶ್ವರ

ನಮ್ಮ ಆಹಾರ ಹೇಗಿರಬೇಕು?

ನಮ್ಮ ಆಹಾರ ಹೇಗಿರಬೇಕು?

Publisher:

Regular price Rs. 55.00
Regular price Sale price Rs. 55.00
Sale Sold out
Shipping calculated at checkout.
ಇಂದಿನ ಗಡಿಬಿಡಿ, ಆತಂಕ ವ್ಯಾಯಾಮವಿಲ್ಲದ ಜೀವನ ವಿಧಾನ ಮನುಷ್ಯನನ್ನು ಹಲವು ರೋಗಗಳಿಂದ ಬಳಲುವಂತೆ ಮಾಡಿವೆ. ಕೃಷಿಯಲ್ಲಿ ರಾಸಾಯನಿಕಗಳ ಬಳಕೆ, ಕಲಬೆರಕೆ ಆಹಾರ ಪದಾರ್ಥ ಇತ್ಯಾದಿಗಳಿಂದ ಆಹಾರ ವಿಷವಾಗುತ್ತಿದೆ. ಈ ದಿಸೆಯಲ್ಲಿ ಯಾವುದನ್ನು ತಿನ್ನಬೇಕು, ಯಾವುದನ್ನು ಬಿಡಬೇಕು, ಎಷ್ಟು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಸಾಮಾನ್ಯ ಪರಿಜ್ಞಾನ ಪ್ರತಿಯೊಬ್ಬನಿಗೂ ಅವಶ್ಯಕ. ಸಿಕ್ಕಿದ್ದನ್ನು ಮುಕ್ಕಿ, ಸಿಕ್ಕಿದ್ದನ್ನು ಕುಡಿದರೆ ಆರೋಗ್ಯವೂ ಹಾಳು, ನೆಮ್ಮದಿಯೂ ಹಾಳು. ಹಿತಮಿತವಾದ ಆಹಾರ ಸೇವನೆ, ಉಪ್ಪು - ಹುಳಿ - ಸಿಹಿ - ಖಾರಗಳ ಸರಿಯಾದ ಬಳಕೆ, ಪ್ರತಿ ಸೇವನೆಯ ನಡುವೆ ಇರಬೇಕಾದ ವಿರಾಮ, ಮಾಂಸಾಹಾರ-ಸಸ್ಯಾಹಾರಗಳಲ್ಲಿ ಯಾವುದು ಉಚಿತ, ಯಾವ ವಯಸ್ಸಿಗರು ಎಂತಹ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು ಇತ್ಯಾದಿ ವಿಷಯಗಳನ್ನು ತಿಳಿದುಕೊಂಡು ನಿತ್ಯಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯ ವೃದ್ಧಿಸುತ್ತದೆ, ಜೀವನ ಉಲ್ಲಸಿತವಾಗುತ್ತದೆ. ಈ ದಿಸೆಯಲ್ಲಿ ಈ ಕೃತಿ ಮಾರ್ಗದರ್ಶಕವಾಗಿದೆ.

ವೃತ್ತಿಯಿಂದ ವೈದ್ಯರಾದ ಡಾ|| ನಾ. ಸೋಮೇಶ್ವರ ಅವರು ಜನಾರೋಗ್ಯದ ಬಗ್ಗೆ ತೀವ್ರ ಕಾಳಜಿಯುಳ್ಳವರು. ಉತ್ತಮ ಬರಹಗಾರರು. ಜನಪ್ರಿಯ ಕ್ವಿಜ್ ಮಾಸ್ಟರ್, ಇವರ ಹಲವು ಲೇಖನಗಳು, ಪುಸ್ತಕಗಳು ಪ್ರಕಟವಾಗಿವೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)