Dr.A Madhava Udupa
ನಮ್ಮ ಆಚಾರ - ವಿಚಾರಗಳು
ನಮ್ಮ ಆಚಾರ - ವಿಚಾರಗಳು
Publisher -
- Free Shipping Above ₹400
- Cash on Delivery (COD) Available*
Pages - 280
Type - Paperback
Couldn't load pickup availability
ನಮ್ಮ ಆಚಾರ-ವಿಚಾರಗಳಿಗೆ, ಸಂಪ್ರದಾಯ-ಅನುಷ್ಠಾನಗಳಿಗೆ ಅರ್ಥತುಂಬುವ ಸಾರ್ಥಕ ಪ್ರಯತ್ನ ಇಲ್ಲಿ ನಡೆದಿದೆ. ಸಾರ್ಥಕ ಬದುಕಿಗೊಂದು ದಾರಿದೀಪವಾಗಿ ಈ ಕೃತಿ ಮೂಡಿಬಂದಿದೆ. ಎಲ್ಲರೂ ನಮ್ಮ ಸಾಂಸ್ಕೃತಿಕ ಪರಂಪರೆಯ ಬಗೆಗೆ ಇಂಥ ಚಿಂತನಕ್ರಮವನ್ನು ರೂಢಿಸಿಕೊಂಡರೆ ಎಲ್ಲರ ಬದುಕೂ ಅರ್ಥಪೂರ್ಣವಾಗುತ್ತದೆ; ಆನಂದಮಯವಾಗುತ್ತದೆ. ಅದರಿಂದ ಡಾ॥ ಉಡುಪರ ಪ್ರಯತ್ನವೂ ಸಾರ್ಥಕವಾಗುತ್ತದೆ; 'ಯದೇವ ವಿದ್ವಯಾ ಕರೋತಿ...' ಎಂಬ ಶ್ರುತಿಯ ಸಂದೇಶಕ್ಕೂ ಗೌರವ ಸಂದಂತಾಗುತ್ತದೆ. ಹಾಗಾಗಲಿ ಎಂದು ಹಾರಯಿಸುತ್ತ, ಡಾ| ಉಡುಪರನ್ನು ಮನಃಪೂರ್ವಕವಾಗಿ ಹರಸುತ್ತೇನೆ."
ಡಾ|| ಬನ್ನಂಜೆ ಗೋವಿಂದಾಚಾರ್ಯ
'ಮುನ್ನುಡಿ'ಯಲ್ಲಿ
'ಈ ಸುಂದರ ಗ್ರಂಥದಲ್ಲಿ ಉಡುಪರು ಅನುದಿನದ ನಮ್ಮ ಬದುಕಿನಲ್ಲಿ ಪೂಜೆ, ಹಬ್ಬ, ಸಂಸ್ಕಾರಗಳಿಗೆ ಸಂಬಂಧಿಸಿದ ಆಚರಣೆಗಳ ಹಿಂದೆ ಇರುವ ತತ್ತ್ವದ ಕುರಿತು ಚಿಂತನ-ಮಂಥನ ನಡೆಸಿ ಜ್ಞಾನನವನೀತವನ್ನು ನಮಗೆ ಕೊಟ್ಟು ಮಹದುಪಕಾರ ಮಾಡಿದ್ದಾರೆ. ಅರ್ಥ ಅರಿತು ಆಚರಿಸುವ ಮೂಲಕ ಆಚರಣೆಗಳೆಲ್ಲ ಸಾರ್ಥಕವಾಗುವಂತಾಗಬೇಕೆಂಬ ಅನನ್ಯ ಕಾಳಜಿಯಿಂದ ಅವರು ರಚಿಸಿರುವ ಈ ಪುಸ್ತಕವು ಇದನ್ನೋದುವವರಿಗೂ ಅರ್ಥ ಆರಿತು ಆಚರಿಸಲು ಪ್ರೇರಕಶಕ್ತಿ ಆಗದಿರದು. ಕನ್ನಡದ ಜನತೆ ಈ ಕೃತಿಯನ್ನು ತುಂಬ ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ನಂಬಿಕೆ ನನ್ನದು.'
ಡಾ|| ಗುರುರಾಜ ಕರಜಗಿ
'ನುಡಿ'ಯಲ್ಲಿ
'ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿ ನಮ್ಮಲ್ಲಿ ಆನೇಕ ವಿಕೃತಕಲ್ಪನೆಗಳೂ, ತಪ್ಪುಭಾವನೆಗಳೂ ಬೇರೂರಿಕೊಂಡಿವೆ. ಅದೂ ಸಾಲದು ಎಂಬಂತೆ ವಿಕೃತಿಯನ್ನೇ ಹರಿಯಬಿಡುವವರೂ ಇತ್ತೀಚೆಗೆ ಹೆಚ್ಚಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸದ್ಭಾವನೆ, ಸದ್ವಿಚಾರಗಳ ಸರ್ಚ್ ಲೈಟ್ ಅನ್ನು ಹರಿಸಿ ವಿವೇಕದ ದಾರಿ ತೋರುವವರ ಅಗತ್ಯ ತುಂಬ ಹೆಚ್ಚು ಉಡುಪರು ಅಂಥವರ ಸಾಲಿಗೆ ಸೇರುವವರು. ಅವರ ಈ ಕೃತಿಯುದ್ದಕ್ಕೂ ಉಕ್ಕುತ್ತಿರುವ ಅರ್ಥ ಅರಿತು ಆಚರಿಸುವಂತಾಗಬೇಕೆಂಬ ಅನುಪಮ ಕಾಳಜಿಯು ಓದುಗರೆಲ್ಲರ ಮನವನ್ನು ಮುಟ್ಟಿತಟ್ಟಲಿ! ಇಂಥವೇ ಹತ್ತುಹಲವು ಕೃತಿರತ್ನಗಳು ಅವರಿಂದ ಬರಲಿ!'
ವಿಶ್ವೇಶ್ವರ ಭಟ್
Share

Subscribe to our emails
Subscribe to our mailing list for insider news, product launches, and more.