Dr. Anasuya S. Rajeev
ನೇಮಾಲಜಿ
ನೇಮಾಲಜಿ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 100
Type - Paperback
ಡಾ॥ ಅನಸೂಯಾ ಎಸ್. ರಾಜೀವ್
ಜೀವನದಲ್ಲಿ ಹೆಸರು ಮಾಡಬೇಕು ಎಂಬ ಮಾತಿದೆ... ಇಲ್ಲಿ ಹೆಸರೆಂದರೆ ಓರ್ವ ವ್ಯಕ್ತಿಯ ಐಡೆಂಟಿಟಿ. ಸಮಾಜ ನಮ್ಮನ್ನು ಆಸ್ವಾದಿಸುವ ಮಾಧ್ಯಮ. ಹುಟ್ಟಿದ ಮಗುವಿನ ಭವ್ಯ ಭವಿಷ್ಯಕ್ಕೆ ಕಾರಣವಾಗಬಲ್ಲ ಒಂದು ಲಕ್ಕಿಯಾದ ಹೆಸರು ಇಡಬೇಕೆಂಬುದು ಎಲ್ಲ ಹೆತ್ತವರ ಸಹಜ ಬಯಕೆ. ಅಲ್ಲದೆ ನಮ್ಮ ಹೆಸರು ನಮಗೆ ಭಾಗ್ಯತರಲೆಂದು ಬಯಸುವುದೂ ಉಂಟು.
ಪ್ರತಿ ಅಕ್ಷರವೂ ತನ್ನದೇ ಆದ ಕಂಪನವನ್ನು ಒಳಗೊಂಡಿರುತ್ತದೆ. ವ್ಯಕ್ತಿಗೆ ಇಡುವ ಹೆಸರು ಸೂಸುವ ಕಂಪನಗಳೇ ಆ ವ್ಯಕ್ತಿಯ ಒಳಿತು ಕೆಡುಕುಗಳಿಗೆ ಕಾರಣವಾಗುತ್ತೆ. ಇದು ಜ್ಯೋತಿಷ್ಯಾಧಾರಿತ ಮಾತ್ರವಲ್ಲ... ವೈಜ್ಞಾನಿಕವೂ ಹೌದು.
ಹಾಗಾದರೆ ನಾಮಶಾಸ್ತ್ರದ ಮಹತ್ವವೇನು? ಈ ಲಕ್ಕಿ ಹೆಸರಿನ ಲೆಕ್ಕಾಚಾರ ಹೇಗೆ? ಇಂಗ್ಲೀಷ್ ವರ್ಣಮಾಲೆಯ ಅಕ್ಷರಗಳ ರಹಸ್ಯವೇನು? ನಮ್ಮ ನಾಮಕರಣ ಸಂಸ್ಕಾರದಲ್ಲಿ ಮಗುವಿಗೆ ಎಷ್ಟು ಬಗೆಯ ಹೆಸರುಗಳನ್ನು ಇಡಬೇಕು? ನಾಮಾಂಕ ಎಂದರೇನು? ನಮಗೆ ಲಕ್ ಕೊಡಬಲ್ಲ ಹೆಸರನ್ನು ಆರಿಸುವುದು ಹೇಗೆ?
ಹೀಗೆ ಹೆಸರಿಗೆ ಸಂಬಂಧಿಸಿದ ಹಲವು ಹತ್ತು ವಿಚಾರಗಳ ಬಗ್ಗೆ ದೀರ್ಘ ಅಧ್ಯಯನ ನಡೆಸಿ, ಪ್ರಯೋಗಿಸಿ, ಯಶಸ್ವಿಯಾದ ಮಹತ್ವದ ತಿರುಳನ್ನು ಇಲ್ಲಿ ಎಳೆ ಎಳೆಯಾಗಿ ಬಿಡಿಸಿ ಹೇಳಲಾಗಿದೆ.
Share
Subscribe to our emails
Subscribe to our mailing list for insider news, product launches, and more.