Gangavathi Pranesh
Publisher - ಸಾವಣ್ಣ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ನಗಿಸುವ ನೂರಾರು ಕಾರ್ಯಕ್ರಮಗಳನ್ನು ನೋಡಿದ್ದೇನೆ. ಅದರ ಪ್ರಭಾವ ಕಾರ್ಯಕ್ರಮ ಮುಗಿಯುವವರೆಗೆ ಮಾತ್ರ ಮನೆಗೆ ಬಂದ ಮೇಲೂ ಮಧ್ಯರಾತ್ರೀಲಿ ನಂಗೆ ದೆವ್ವ ಹಿಡಿದಿದೆಯೇನೋ ಅಂತ ನನ್ನ ಮನೆಯವರೆಲ್ಲಾ ಗಾಬರಿಯಾಗೋವರೆಗೂ ನನ್ನ ಮೇಲೆ ಪ್ರಭಾವ ಬೀರಿದವರು ಗಂಗಾವತಿ ಪ್ರಾಣೇಶ್, ಮನಸ್ಸಿಗೆ ಬಹಳ ಸಂತೋಷವಾದಾಗ, ದುಃಖವಾದಾಗ, ಕೀಳರಿಮೆ ಕಾಡಿದಾಗ, ಅವಮಾನವಾದಾಗ, ಯಶಸ್ಸು ಸಿಕ್ಕಾಗ ನಾನು ಮೊರೆ ಹೋಗೋದು ಪುಸ್ತಕಗಳಿಗೆ ಅಥವಾ ಸಿನಿಮಾಗೆ ಇವೆರಡು ಬಿಟ್ರೆ ನಿದ್ರೆಗೆ.
ಇದನ್ನೆಲ್ಲಾ ಬಿಟ್ಟು ಮತ್ತೊಂದರ ಮೊರೆ ಹೋಗೋದಂದ್ರೆ ಪ್ರಾಣೇಶ್ ಅವರ ಹಾಸ್ಯ ಕಾರ್ಯಕ್ರಮಗಳನ್ನ ನೋಡಲು YouTubeಗೆ. ಮಧ್ಯರಾತ್ರಿಲಿ ಎದ್ದು ಕಿವಿಗೆ earphone ಹಾಕ್ಕೊಂಡು ಇಡೀ ರಾತ್ರಿ ಹುಚ್ಚನ ಥರ ನಗ್ತಾ ಇರ್ತೀನಿ. ನನ್ನ ಹೆಂಡ್ತಿ, "ಏ ಮೆಂಟ್ಲು ಸ್ವಲ್ಪ ಮೆತ್ತಗೆ ನಗು. ಮಕ್ಳು ಎದ್ದೇಳ್ತಾರೆ ಭಯ ಬಿದ್ದು" ಅಂತ ತುಂಬ ಸರಿ ಜಗಳ ಮಾಡಿದಾಳೆ,
ನಾನು ಇವರ ಕಾರ್ಯಕ್ರಮಗಳನ್ನ ಇಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳಲು ಕಾರಣ ಕೇವಲ ಇವರ ಹಾಸ್ಯವಷ್ಟೇ ಅಲ್ಲ, ಅವರಲ್ಲಿರುವ ನನಗಿಷ್ಟವಾದ ಉತ್ತರಕರ್ನಾಟಕದ ಭಾಷೆ ಸೊಗಡು, ಜೊತೆಗೆ ಅದ್ಭುತವಾದ ಸಂದೇಶಗಳು. ನಮ್ಮ ಜವಾಬ್ದಾರಿ ಏನು ಅನ್ನುವುದನ್ನು ಅವರು ಹಾಸ್ಯದ ಮುಖಾಂತರ ಈಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಬರವಣಿಗೆಯ ಮುಖಾಂತರ ಕನ್ನಡದ ಮನಸುಗಳಿಗೆ ದಾಟಿಸಿ ಮತ್ತಷ್ಟು ಹತ್ತಿರವಾಗಿದ್ದಾರೆ.
ಈ ಪುಸ್ತಕದಲ್ಲಿ ಅವರು ತಮ್ಮ ಅನೇಕ ಜೀವನಾನುಭವಗಳನ್ನು ತಾಯಿ ತನ್ನ ಮಕ್ಕಳಿಗೆ ಕತೆ ಹೇಳಿದ ಹಾಗೆ ಮಮತೆಯಿಂದ ಬರೆದಿದ್ದಾರೆ. ಈ ಪುಸ್ತಕದಲ್ಲಿ ಇರುವುದು ಅವರ ಬರಹಗಳು ಮಾತ್ರವೇ ಅಲ್ಲ, ನಮ್ಮನ್ನು ನಾವು ನೋಡಿಕೊಳ್ಳುವ ಕನ್ನಡಿಗಳು ಎಷ್ಟು ನೋಡಿಕೊಂಡರೂ ಆಸೆ ತೀರುವುದಿಲ್ಲ. ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತದೆ.
ಪ್ರಾಣೇಶ್ ಪ್ರಪಂಚದ ಪ್ರಾಣೇಶ್ ಪಯಣದಲ್ಲಿ ಈ ಪುಸ್ತಕ ಓದಿ ಮನ ಸೋತವರೆಲ್ಲ ನಕ್ಕು ಗೆಲ್ಲುವಂತಾಗಲಿ.
ಜೀವನದಲ್ಲಿ ರೋಸಿ ಹೋಗಿರುವ Roseನಂತಹ ಮನಸುಗಳಿಗೆ ನಗುವಿನ ಚಿರಾಪುಂಜಿಯಾಗಿರುವ ಹಾಸ್ಯ ಗಾರುಡಿ, ಇದೇ ನಿಮ್ಮ ಪುಸ್ತಕಕ್ಕೆ ನನ್ನ ಬೆನ್ನುಡಿ.
ನಿಮ್ಮ ಅಭಿಮಾನಿ *ನೆನಪಿರಲಿ' ಪ್ರೇಮ್
ಸಾವಣ್ಣ ಪ್ರಕಾಶನ
