Jogi
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ಕತೆಯಲ್ಲ, ಕಾದಂಬರಿಯಲ್ಲ, ಪ್ರಬಂಧವಲ್ಲ, ಕೇಂದ್ರ ಪಾತ್ರವಿಲ್ಲ. ಒಳಸುಳಿವುಗಳಿಲ್ಲ, ಸಂಕೇತಗಳಿಲ್ಲ. ಆಳವಿಲ್ಲ. ವಿಸ್ತಾರವಂತೂ ಮೊದಲೇ ಇಲ್ಲ. ಮಳೆಗಾಲದಲ್ಲಿ ತುಂಬಿ, ಬೇಸಗೆಯಲ್ಲಿ ಬಸವಳಿದು, ಕಡುಬೇಸಗೆಯಲ್ಲಿ ಬಾಯಾರಿ, ನಿಡುಬೇಸಗೆಯಲ್ಲಿ ಬತ್ತಿಹೋಗುವ ನಮ್ಮೂರ ನೇತ್ರಾವತಿ, ಅಲ್ಲಲ್ಲಿ ಕಂಡದ್ದು, ಕಂಡೂ ಕಾಣದ್ದು, ಕಂಡೂ ಸಿಗದ್ದು, ಸಿಕ್ಕರೂ ನನ್ನದಾಗದೆ ಇದ್ದದ್ದು, ನಾನು ಓದಿದ ತೇಜಸ್ವಿ, ಬೇಂದ್ರೆ, ಕುಮಾರವ್ಯಾಸ, ಅನಂತಮೂರ್ತಿ, ಕುವೆಂಪು, ಗರುಡಪುರಾಣ, ಮೈಸೂರು ಮಲ್ಲಿಗೆ, ಭೂಮಿಗೀತ, ಲಂಕೇಶ್, ವೈಯನ್ಕೆ, ಪಾಬ್ಲೊ ನೆರುಡಾ, ಅಮೃತಕ್ಕೆ ಹಾರುವ ಗರುಡ, ನನ್ನೂರು, ನನ್ನ ಜನ, ಗಾಂಧೀಪಾರ್ಕು, ಸತ್ತುಹೋದ ಪ್ರತ್ತೋಳಿ, ಸಾಯದೆ ಉಳಿದ ನಾನು, ಒಳಗಿರುವ ಜಾನಕಿ, ಹೊರಗಿರುವ ಮೇನಕೆ, ನಮ್ಮೂರ ಹಸಿರುಗುಡ್ಡ, ಬಯಲು, ಮುರಿದುಬಿದ್ದ ಅರಮನೆ, ಗೆದ್ದಲು ಹತ್ತಿರುವ ದೇವಸ್ಥಾನದ ಕಂಬ, ಸಹಸ್ರಲಿಂಗೇಶ್ವರ, ಸಂಗಮ, ಕುಮಾರಧಾರಾ, ಗುರುವಾಯನಕೆರೆ.
ಪ್ರಕಾಶಕರು - ಅಂಕಿತ ಪುಸ್ತಕ
