Skip to product information
1 of 2

ybh jayadev

ನಾಡಪ್ರಭು ಕೆಂಪೇಗೌಡ

ನಾಡಪ್ರಭು ಕೆಂಪೇಗೌಡ

Publisher - ಸಪ್ನ ಬುಕ್ ಹೌಸ್

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 96

Type - Paperback

Gift Wrap
Gift Wrap Rs. 15.00

ಕೆಂಪೇಗೌಡರ ವಂಶಸ್ಥರನ್ನು ಯಲಹಂಕ ಪ್ರಭುಗಳೆಂದೇ ಕರೆಯಲಾಗುತ್ತದೆ. ಯಲಹಂಕ ನಾಡು ವಿಜಯನಗರದ ವಿಕೇಂದ್ರಿಕೃತ ಆಡಳಿತ ವ್ಯವಸ್ಥೆಯ ಫಲವಾಗಿ ಉದಯಿಸಿತು. ಕರ್ನಾಟಕದ ದಕ್ಷಿಣ ಭಾಗದಲ್ಲಿ ಕ್ರಿ.ಶ. 1420 ರಿಂದ 1728 ರವರೆಗೂ ಆವತಿ, ಯಲಹಂಕ, ಬೆಂಗಳೂರು, ಮಾಗಡಿ ಮತ್ತು ಸಾವನದುರ್ಗಗಳನ್ನು ಪ್ರಮುಖ ಆಡಳಿತ ಕೇಂದ್ರಗಳನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಯಲಹಂಕ ನಾಡಪ್ರಭುಗಳಲ್ಲಿ ರಾಜ್ಯದ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ.


ಬೆಂಗಳೂರು ನಿರ್ಮಾತೃ ನಾಡಪ್ರಭು ಪ್ರಜಾವತ್ಸಲನೂ, ಸರ್ವ ಜನಾಂಗದ ಪ್ರೀತಿಯ ಪ್ರಭುವೂ, ಕೋಟೆ-ಕೊತ್ತಲ, ದೇವಾಲಯ, ಕೆರೆ, ಕಾಲುವೆ, ಕಟ್ಟೆ, ರಸ್ತೆ, ಅಗ್ರಹಾರ, ನವನಗರಗಳ ನಿರ್ಮಾಪಕರೂ ಆದ ಧೀಮಂತ ಪ್ರಭುಗಳು. ಕ್ರಿ.ಶ. 1513ರಲ್ಲಿ ಜನಿಸಿದ ಕೆಂಪೇಗೌಡರು - ಮೊದಲನೇ ಕೆಂಪೇಗೌಡ, ಹಿರಿಯ ಕೆಂಪೇಗೌಡರು ಎಂದೇ ಹೆಸರಾಗಿ ಸುದೀರ್ಘ 64 ವರ್ಷಗಳ ಕಾಲ ಆಡಳಿತವನ್ನು ನಡೆಸಿ, ಬೆಂಗಳೂರನ್ನು ಕಟ್ಟಿದ ನಾಡಪ್ರಭು ಎಂದೇ ಜನಜನಿತರಾದವರು. ಕ್ರಿ.ಶ.1959ರಲ್ಲಿ ಶಿವೈಕ್ಯರಾಗುವ ಮೂಲಕ ಭವ್ಯ ಇತಿಹಾಸವನ್ನು ನಿರ್ಮಿಸಿ ಅಮರರಾದವರು. ಏಕಾಮ್ರ ದೀಕ್ಷಿತನೆಂಬ ಕವಿಯು ತನ್ನ 'ವೀರಭದ್ರ ವಿಜಯ' ಕಾವ್ಯದಲ್ಲಿ ಹಿರಿಯ ಕೆಂಪೇಗೌಡರನ್ನು ಕೆಂಪ ದೇವೇಂದ್ರನೆಂದು ಸಂಬೋಧಿಸಿ ಹಾಡಿ ಹೊಗಳಿದ್ದಾರೆ.

View full details