Vikrama. B. K.
Publisher -
- Free Shipping
- Cash on Delivery (COD) Available
Pages - 84
Type - Paperback
Couldn't load pickup availability
ಪದ್ಯಗಳಲ್ಲಿ ಬಗೆ ಬಗೆಯ ಮಂದಿಯ ಮನಸುಗಳು ಮಾತಾಡಿವೆ. ನೆನಪುಗಳು ಹಲವು ಹೆಪ್ಪುಗಟ್ಟಿವೆ. ಮತ್ತೆ ಮತ್ತೆ ಓದಿಸಿಕೊಳ್ಳುವ ಒಂದಷ್ಟು ಪದ್ಯಗಳು ಹೊಸ ಹೊಸ ಹೊಳಹು ನೀಡುತ್ತವೆ. ನಮ್ಮ ಸುತ್ತಲಿರುವ ಒಂದು ಜೀವವು ನಮಗೆ ಸದ್ದಿಲ್ಲದೇ ಬದುಕುವುದನ್ನು ತೋರಿಸುತ್ತಿರುತ್ತದೆ, ಕಲಿಸುತ್ತಿರುತ್ತದೆ. ಇಲ್ಲಿನ ಬೇರೆ ಬೇರೆ ಆಳುಗಳ ಕುರಿತ ಪದ್ಯಗಳು ನಮಗೆ ಅಂತಹವರ ಪರಿಚಯ ಮಾಡಿಕೊಡುತ್ತವೆ. ಪದ್ಯಗಳಲ್ಲಿನ ಡೊಂಕನ್ನು ನೋಡುವ ಮತ್ತು ರೊಚ್ಚಿನಿಂದ ಕೇಳಿ ಕೇಳುವ, ತಿದ್ದಲು ನೋಡುವ ಗುಣ ಹಿಡಿಸಿತು.
ನಮ್ಮ ಕೂಡಣದಲ್ಲಿರುವ ಜೊತೆಯಲ್ಲಿನ ಉಸಿರುಗಳನ್ನು ಕಂಡು, ಅವುಗಳ ಮನವರಿತು, ಇನ್ನೊಬ್ಬರಿಗೆ ಕಾಣಿಸಲು ಮಾಡುತ್ತಿರುವ ವಿಕ್ರಮನ ಕೆಲಸ ಇನ್ನಷ್ಟು ಚುರುಕಾಗಿ, ಯಾವಾಗಲೂ ನಡೆಯುತ್ತಿರಲಿ. ವಿಕ್ರಮನ ಕವನ ಲೋಕದ ಈ ಮೊದಲ ಹೆಜ್ಜೆಯು ಅವನ ಮುಂದಿನ ಹೆಜ್ಜೆಗಳತ್ತ ನನ್ನನ್ನು ಸೆಳೆದಿದೆ.
- ಪ್ರವೀಣ್ ಕುಮಾರ್ ಜಿ
ವಿಕ್ರಮ್ ಕಾವ್ಯಪ್ರಿಯ, ಕಾವ್ಯ ಪ್ರೀತಿ, ಜೀವನ ಪ್ರೀತಿ ಎರಡು ಪ್ರತಿಬಿಂಬ ಶಬ್ದಗಳೇ, ಅವರು ಓದಿರುವ ಕಾವ್ಯಗಳ ರಸವೂ, ಈ ಕವನ ಸಂಕಲನದಲ್ಲಿ ಇಳುವರಿಯಾಗಿ ಹೂ ಬಿಟ್ಟಿದೆ,
ಗದ್ಯ ಉತ್ಕೃಷ್ಟ ಸ್ಥಿತಿಯಲ್ಲಿ ಇರುವ ಈ ಕಾಲಮಾನಕ್ಕೆ ಒಳ್ಳೆಯ ಕಾವ್ಯ ಸ್ಪೂರಿಸುವುದು ವಿರಳ. ಹುಟ್ಟಿದರೂ ಪ್ರೇಮ, ಸೂರ್ಯ, ಚಂದ್ರ, ನಕ್ಷತ್ರ, ಹುಡುಗಿ ಇಂತವೇ ತುಂಬಿ ತುಳುಕುತ್ತಿರುವ ಕಾಲವಿದು, ಇಂತಹ ಬರಗಾಲದಲ್ಲಿ ಇಲ್ಲಿನ ಕವಿತೆಗಳು ಹೃದಯಕ್ಕೆ ಮುದ ನೀಡುವ ಹಿನ್ನೀರು,
ಇಲ್ಲಿನ ಕವನಗಳು ಒಂದೇ ಓದಿಗೆ ದಕ್ಕುವುದಿಲ್ಲ. ಇವುಗಳಲ್ಲಿ ಆಳಕ್ಕೆ ಇಳಿದಷ್ಟು ಹೊಸ ರೂಪ ಕಟ್ಟಿ ಕೊಡುತ್ತದೆ. ಬಿಳಿ ವರ್ಣ ಅಕ್ಷಿಗೆ ಕಂಡರೂ, ಬಿಳಿ ವರ್ಣವಾಗಲು ಏಳು ವರ್ಣಗಳು ಸೇರುತ್ತವೆ, ಹಾಗೆಯೇ ನೋಡಲು ಕವಿತೆ ಒಂದೇ ಎನಿಸಿದರೂ ಏಳೇಳು ವಿವಿಧ ಅರ್ಥಗಳೇ ಕೊಡಬಹುದು.
ಒಂದು ಸಂಕಲನದಲ್ಲಿ ಪ್ರೇಮದ ಕವನಗಳು ಇರಬಹುದು, ಪ್ರಕೃತಿಯ ಸೊಬಗನ್ನು ವಿವರಿಸುವ ಕವನಗಳು ಇರಬಹುದು, ತತ್ವಗಳು ಹೇಳುವ ಕವನಗಳಿರಬಹುದು, ಕ್ರಾಂತಿಕಾರಿ ಕವನಗಳಿರಬಹುದು, ಕಥನ ಕವನಗಳೇ ಇರಬಹುದು. ಆದರೆ ಇಲ್ಲಿ ಅವೆಲ್ಲವೂ ಇದೆ, ಬದುಕನ್ನು ಯಾವುದೇ ಕಟ್ಟುಪಾಡುಗಳಿಗೆ ಮನಸ್ಸನ್ನು ಸೀಮಿತಗೊಳಿಸದೇ ಇರುವವರು ಮಾತ್ರ ಹೀಗೆ ಬರೆಯಲು ಸಾಧ್ಯ
ಕಾವ್ಯ ರುಚಿಸಲು ಪದಗಳ ಮತ್ತು ವಸ್ತುವಿನ ಹದ ಪಾಕವಿದ್ದರಷ್ಟೇ ಸಾಲದು, ಅದಕ್ಕೆ ಕಾವ್ಯದ ಮೇಲು ಓದುಗನ ಮೇಲು ಚಿಟಿಕೆಯಷ್ಟು ಪ್ರೀತಿಯು ಬೇಕು. ಇವೆರಡರ ಮೇಲು ವಿಕ್ರಮ್ ಗಮನಕೊಟ್ಟು ಈ ಬುತ್ತಿ ಅರ್ಪಿಸಿದ್ದಾರೆ. ತುಂಬು ಮನಸ್ಸಿಂದ ಅಪ್ಪಿಒಪ್ಪಿ ಹಾರೈಸೋಣ.
-ನಯಾಜ್. ಆರ್

