Rangaswamy Mookanahalli
ನಾನೆಂದಿಗೂ ಸೋಲುವುದಿಲ್ಲ, ಸೋತರದು ನಾನಲ್ಲ !
ನಾನೆಂದಿಗೂ ಸೋಲುವುದಿಲ್ಲ, ಸೋತರದು ನಾನಲ್ಲ !
Publisher - ಸಾವಣ್ಣ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 140
Type - Paperback
Couldn't load pickup availability
ಸೋಲನ್ನು ಆಸ್ವಾದಿಸುವುದು ಕಲಿಯಬೇಕು ಏಕೆಂದರೆ ಬದುಕಿನ ನಿಜವಾದ ಅರ್ಥ ತಿಳಿಸುವುದು ಸೋಲು ಮಾತ್ರ. ಗೆಲುವು ಪಾಠ ಕಲಿಸುವುದಿಲ್ಲ. ಗೆದ್ದ ತಕ್ಷಣ ನಾವು ಅದನ್ನು ಆಸ್ವಾದಿಸಲು ಶುರು ಮಾಡುತ್ತೇವೆ. ಹೀಗಾಗಿ ಅದು ಮರುಕ್ಷಣದಿಂದ ಸೋಲಿಗೆ ತಯಾರು ಮಾಡುತ್ತದೆ. ಸೋಲು ಹಾಗಲ್ಲ ಅದು ಆತ್ಮವಿಮರ್ಶೆಗೆ ಜಾಗ ಮಾಡಿಕೊಡುತ್ತದೆ. ಹೀಗಾಗಿ ಅದು ಸದಾ ಗೆಲುವಿನ ಕಡೆಗೆ ನಮ್ಮನ್ನು ನೂಕುತ್ತದೆ. ಈಗ ಹೇಳಿ, ನಾವು ಗೆಲುವನ್ನು ಪ್ರೀತಿಸಬೇಕೋ ಅಥವಾ ಸೋಲನ್ನೋ? ಅಚ್ಚರಿ ಎನ್ನಿಸುತ್ತೆ ಅಲ್ವಾ? ನಾವು ಬದುಕನ್ನು ನೋಡುವ ರೀತಿಯನ್ನು ಬದಲಿಸಿಕೊಂಡು ಬಿಟ್ಟರೆ ಸಾಕು, ಅದು ನಮ್ಮ ಬದುಕನ್ನು ಬದಲಿಸಿ ಬಿಡುತ್ತದೆ. ಸೋಲು ಕೊಡುತ್ತಿರುವ ನೋವಿನ ಮಟ್ಟ ಅತ್ಯಂತ ಹೆಚ್ಚಾಗಿದೆ ಎಂದರೆ ಅಲ್ಲೇ ಎಲ್ಲೊ ಒಂದೆರಡು ಅಡಿ ದೂರದಲ್ಲಿ ಯಶಸ್ಸು ನಮ್ಮನ್ನು ಅಪ್ಪಿಕೊಳ್ಳಲು ಕಾಯುತ್ತಿದೆ ಎಂದರ್ಥ. ನಮಗೆ ಅದು ತಿಳಿಯುವುದಿಲ್ಲ, ಏಕೆಂದರೆ ಸೋಲು ಕೊಡುವ ಅಪಾರ ನೋವು ಕೆಲವೊಮ್ಮೆ ವರ್ಷಾನುಗಟ್ಟಲೆ ಇರುತ್ತದೆ!
ಮೇಲಿನ ಸಾಲುಗಳಲ್ಲಿ ಹೇಳಿದ ತತ್ವಜ್ಞಾನ ಹುಟ್ಟಿದ್ದು ಬದುಕು ನೀಡಿದ ಅನುಭವದಿಂದ! ಈ ಪುಸ್ತಕದ ಹೆಸರು `ನಾನೆಂದಿಗೂ ಸೋಲುವುದಿಲ್ಲ, ಸೋತರದು ನಾನಲ್ಲ!' ಎನ್ನುವುದು ಅಹಮಿಕೆಯಿಂದ ಹುಟ್ಟಿದ ಮಾತಲ್ಲ. ಅದು ಈ ಪುಸ್ತಕದಲ್ಲಿರುವ 18 ಮಹನೀಯರನ್ನು ಕಂಡು ಹುಟ್ಟಿದ ಶೀರ್ಷಿಕೆ! ಅದು ವ್ಯಕ್ತಿತ್ವದ ಹೆಸರು! ಛಲದ ಹೆಸರು! ಆತ್ಮವಿಶ್ವಾಸದ ಹೆಸರು!
Share


Subscribe to our emails
Subscribe to our mailing list for insider news, product launches, and more.