ಸೇತ್ ಎಂ.ಸಿಗೆಲ್ | ಕನ್ನಡಕ್ಕೆ: ರಾಘವೇಂದ್ರ ಹೆಗಡೆ
Publisher: ಅಂಕಿತ ಪುಸ್ತಕ
Couldn't load pickup availability
ಇಸ್ರೇಲಿನ ಭೇಟಿಗಳು ಅಗಾಧ ಅಚ್ಚರಿಯನ್ನೆ ಉಂಟು ಮಾಡಿವೆ ಲೇಖಕರಲ್ಲಿ. ಶೇ. 60ರಷ್ಟು ಮರುಭೂಮಿ. ನದಿ, ಜಲಾಶಯ, ಕೆರೆ, ಜಲಪಾತ, ನೀರಿನ ಪಸೆಯೇ ಇಲ್ಲದ ದೇಶ ಕೃಷಿಯಲ್ಲಿ ವಿಶ್ವಕ್ಕೆ ಆಗ್ರಗಣ್ಯ. ಬೆಂಗಳೂರಿನಲ್ಲಿ ಒಂದು ಗಂಟೆ ಬೀಳುವ ಮಳೆ, ಇಸ್ರೇಲಿನಲ್ಲಿ ಇಡೀ ವರ್ಷದಲ್ಲಿ ಬೀಳುವುದಿಲ್ಲ. ಕೃಷಿ ನೀರಾವರಿ ಹಾಗೂ ಕುಡಿಯುವ ನೀರಿನಲ್ಲಿ ಇಸ್ರೇಲ್ ತಂತ್ರಜ್ಞಾನ ಜಗತ್ತಿಗೆ ಮಾದರಿ. ಹನಿ ನೀರಿಗೆ ತತ್ವಾರವಾಗಿರುವ ದೇಶ, ಇಂದು ಕುಡಿಯುವ ನೀರನ್ನು ಪಕ್ಕದ ದೇಶಗಳಿಗೆ ರಫ್ತು ಮಾಡುತ್ತಿದೆ. ಸಾಕ್ಷಾತ್ ಭಗೀರಥನೇನಾದರೂ ಇಸ್ರೇಲಿನ ನೀರಿನ ಮಾದರಿಯನ್ನು ನೋಡಿದ್ದರೆ ಮೂರ್ಛೆ ಬೀಳುತ್ತಿದ್ದನೇನೋ? ಜಗತ್ತೇ ಮೂಗಿನ ಮೇಲೆ ಬೆರಳಿಡುವಂಥ ಸಾಧನೆಯದು. ಅಂಥ ಪವಾಡವನ್ನು ಆ ದೇಶ ಸಾಧಿಸಿದ್ದಾದರೂ ಹೇಗೆ? ಮರುಭೂಮಿಯಲ್ಲಿ ನೀರಿನ ಮರುಪೂರಣವಾದುದಾದರೂ ಹೇಗೆ? ಮನುಕುಲದ ಭವಿಷ್ಯ, ಜೀವಿ, ಜೀವಸೆಲೆಯಲ್ಲಿ ಪ್ರೀತಿ, ಆಸ್ಥೆಯಿರುವವರೆಲ್ಲ ಓದಲೇಬೇಕಾದ ಕೃತಿಯಿದು. ನೀರಿನ ಬಗ್ಗೆ ಮತ್ತಷ್ಟು ಜಾಗೃತಿ ಕಳಕಳಿ ಮೂಡಿಸುವ ಈ ಪುಸ್ತಕ, ನೀರಿನ ಕೊರತೆಗೆ ಒರತೆಯಾಗಿ ಸಾರ್ಥಕವೆನಿಸುತ್ತದೆ.
