Asha Jagdish
Publisher -
- Free Shipping
- Cash on Delivery (COD) Available
Couldn't load pickup availability
ಕೆಂಡಸಂಪಿಗೆಯಲ್ಲಿ ನೀವು ಕಾಲಂ ಬರೆಯುತ್ತಿದ್ದರೂ ಬೇರೆ ಬೇರೆ ಕಾರಣಗಳಿಂದ ಅವುಗಳನ್ನು ಬಂದ ಕಾಲಕ್ಕೆ ಓದಲು ಆಗುತ್ತಿರಲಿಲ್ಲ. ನೀವು ಇಲ್ಲಿ ಕಳುಹಿಸಿದ ಲಿಂಕ್ ಜೊತೆಗೆ, ಕೆಲವೊಂದನ್ನು ಅಲ್ಲಿಯೂ ಓದಿದ್ದೇನೆ ಎನ್ನುವುದು ಈಗ ಓದುತ್ತಾ ಹೋದ ಹಾಗೆ ನೆನಪಾಯಿತು.
ನಾಗಶ್ರೀ ಶ್ರೀರಕ್ಷಾ ಮತ್ತು ವಿಭಾ ಅವರನ್ನು ಕುರಿತು ನೀವು ಬರೆದದ್ದು ಮನ ಮುಟ್ಟುವಂತಿದೆ. ನಾನೂ ಕೂಡಾ ಇವರಿಬ್ಬರನ್ನು ಎಂದೂ ಭೇಟಿಯಾಗಲಿಲ್ಲ. ಅತ್ಯಲ್ಪ ಕಾಲದಲ್ಲೇ ಬದುಕನ್ನು ಅರ್ಥೈಸಿಕೊಂಡು ಬರೆದಂತಹ ಕೆಲವೊಂದು ಕವನಗಳನ್ನು ಓದುವಾಗ, ಆ ಭಾವತೀವ್ರತೆಗಳು ಸಟ್ಟನೆ ನಮ್ಮನ್ನು ಆವರಿಸಿಕೊಳ್ಳುವ ಪರಿಗೆ ನಾನೂ ದಂಗಾಗಿದ್ದೇನೆ, ಮತ್ತೆ ಕೆಲವೊಮ್ಮೆ ಅವನ್ನು ಓದುವಾಗ ಸುಮ್ಮನೆ ಸಂಕಟವಾಗುತ್ತಿರುತ್ತದೆ. ನಿಮ್ಮ ಲೇಖನಗಳನ್ನು ಓದುವಾಗೆಲ್ಲಾ ಅಂತಃಕರಣದಿಂದ ನೇರ ಬಂದ ಬರವಣಿಗೆಯಂತೆ ನನಗೆ ಅನ್ನಿಸುವುದಿದೆ ಪ್ರತಿ ಲೇಖನದಲ್ಲೂ ಹುದುಗಿರುವ ಒಂದು ಸಣ್ಣ ನಿಟ್ಟುಸಿರು ಮತ್ತು ಮಡುವುಗಟ್ಟಿದ ವಿಷಾದ ಪ್ರತಿ ಓದುಗರಿಗೂ ತಟ್ಟದೇ ಬಿಡುವುದಿಲ್ಲ. ಜೊತೆಗೆ ಸಾಹಿತ್ಯದ ಆಳವಾದ ಅರಿವು ಇವೆಲ್ಲಾ ಲೇಖನಗಳನ್ನೂ
ಸಂಗ್ರಹಯೋಗ್ಯವಾಗಿಸಿದೆ. ಹೀಗೇ ಬರೆಯುತ್ತಿರಿ. ಅಭಿನಂದನೆಗಳು,
-ಪ್ರೀತಿಯಿಂದ ಜಯಶ್ರೀ ಕಾಸರವಳ್ಳಿ
ಆಶಾ ಜಗದೀಶ್ ಅವರ ಪರಮ ಅಭಿಮಾನಿಗಳಲ್ಲಿ ನಾನೂ ಒಬ್ಬಳು, ಅವರೆಂದರೆ ನನಗೆ ಪ್ರೀತಿ ಅಭಿಮಾನ ಅಕ್ಕರೆ ಮತ್ತು ಅಪಾರ ಅಚ್ಚರಿ, ಯಾವ ವಿಷಯದ ಕುರಿತಾಗಿ ಬರೆದರೂ ಅಷ್ಟೊಂದು ಆಳವಾಗಿ, ಆಪ್ತವಾಗಿ ಬರೆಯಬಲ್ಲ, ಒಂದು ಓದಿಗೇ ಹಿಡಿದು ನಿಲ್ಲಿಸಬಲ್ಲ ನೈಋಣ್ಯತೆ ಅವರಿಗೆ ಕರಗತವಾಗಿದೆ. ಅದು ನಮ್ಮ ಪಾಲಿನ ಅದೃಷ್ಟವೆಂದೇ ಹೇಳಬೇಕು, ಆಶಾ ಅವರ ಅಂಕಣ ಬರಹಗಳು, ನಮ್ಮನ್ನು ಮೇಲೆಲೆ ತೇಲಿಸಿದಂತೆ ಕರೆದೊಯ್ಯುವುದಿಲ್ಲ... ಆಳಕ್ಕಿಳಿಸುತ್ತವೆ. ಚಿಂತನೆಗೆ ಹಚ್ಚುತ್ತವೆ. ಒಂದು ವಿಷಯದ ಕುರಿತಾಗಿ ಬೇರೊಂದು ಕೋನದಿಂದ ನೋಡುವಂತೆ ಪ್ರೇರೇಪಿಸುತ್ತವೆ. ತುಂಬ ಹೊಗಳಿದರೆ, ಸಂಕೋಚದ ಮುದ್ದೆಯಾಗುವ, ಅತ್ಯಾಪ್ತವಾಗಿ ಪ್ರೀತಿಸುವ ಅಕ್ಕರೆಯ ಗೆಳತಿ ಆಶಾ, ಒಂದು ವೇಳೆ ಆಶಾ ನನ್ನ ಗೆಳತಿಯಲ್ಲದೇ ಹೋಗಿದ್ದರೂ ಇಷ್ಟೇ ಬರೆಯುತ್ತಿದ್ದೆ.
-ಶಾಂತಿ ಕೆ. ಅಪ್ಪಣ್ಣ
ಪ್ರಕಾಶಕರು - ಸಾಹಿತ್ಯ ಲೋಕ ಪಬ್ಲಿಕೇಷನ್ಸ್
