Koushik Koodurasthe
ಮಿಸ್ಟರಿ ಆಫ್ ಮಾರಿಕಟ್ಟೆ
ಮಿಸ್ಟರಿ ಆಫ್ ಮಾರಿಕಟ್ಟೆ
Publisher - ಸ್ನೇಹ ಬುಕ್ ಹೌಸ್
- Free Shipping Above ₹350
- Cash on Delivery (COD) Available*
Pages - 284
Type - Paperback
Couldn't load pickup availability
ಫೈಲಿನೊಳಗಿದ್ದ ಡಾಕ್ಯೂಮೆಂಟ್ಗಳ ಕಡೆಗೆ ಗಮನಹರಿಸುತ್ತಾ, ತನ್ನ ಕೈಯಲ್ಲಿದ್ದ ಉರಿವ ಸಿಗರೇಟನ್ನು ನೆಲಕ್ಕೆಸೆದ ನಂತರ ಅದನ್ನು ಕಾಲಿನಿಂದ ಹೊಸಕಿ ಹಾಕಿ, ಇನ್ನೇನು ಜೇಬಿನೊಳಗಿನಿಂದ ಹೊಸ ಸಿಗರೇಟನ್ನು ಕೈಗೆತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ಅವನೆದುರಿಗಿದ್ದ ದೇವಸ್ಥಾನದ ಗರ್ಭಗುಡಿಯಿಂದ ಸದ್ದೊಂದು ಹೊರಹೊಮ್ಮಿದಂತಾಯಿತು. ಯಾರೋ ಕೂಗಿಕೊಂಡಂತಹ ಸದ್ದು!!
ತಕ್ಷಣವೇ ಆ ಸದ್ದಿಗೆ ಪ್ರತಿಕ್ರಿಯಿಸುತ್ತಾ "ಇವ್ಳಿಗೆ ಹೇಳ್ದೆ, ಈ ಟೈಮಲ್ಲಿ ಪೂಜೆ ಗೀಜೆ ಬೇಡ ಅಂತ. ನನ್ನ ಮಾತೇ ಕೇಳಲ್ಲ" ಎಂದು ಕಿರಿಕಿರಿಗೊಂಡ ಹಿಮವಂತನು, ತನ್ನ ಕೈಯಲ್ಲಿದ್ದ ಫೈಲನ್ನು ಆತುರಾತುರವಾಗಿ ಕಾರಿನೊಳಗಿಟ್ಟು ನಂತರ ಅದೇ ಆತುರದಲ್ಲಿ ತನ್ನೆದುರಿಗಿದ್ದ ಗರ್ಭಗುಡಿಯತ್ತ ಹೆಜ್ಜೆ ಹಾಕಿದ. ಗಾಢ ಮೌನವನ್ನು ತುಂಬಿಕೊಂಡಿದ್ದ ದೇವಸ್ಥಾನದ ಒಳಗೆ ನಡೆದು ಬಂದು "ಮಯೂರಿ, ಮಯೂರಿ.. ಏನದು ಸದ್ದು?'' ಎಂದು ಕೇಳುತ್ತಾ ಗರ್ಭಗುಡಿಯ ಸನಿಹಕ್ಕೆ ಬಂದವನಿಗೆ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆಯಿರಲಿಲ್ಲ. ಇದು ಹಿಮವಂತನಲ್ಲಿ ಸಣ್ಣನೆಯ ಆತಂಕವನ್ನು ಹುಟ್ಟಿಸಿ "ಮಯೂರಿ.. ಮಯೂರಿ" ಎಂದು ಕೂಗುತ್ತಾ ತನ್ನೆದುರಿಗಿದ್ದ ಗರ್ಭಗುಡಿಯನ್ನು ಪ್ರವೇಶಿಸಿದವನಿಗೆ ಅಲ್ಲೊಂದು ಬಹುದೊಡ್ಡ ಅಚ್ಚರಿ ಕಾದಿತ್ತು. ಗರ್ಭಗುಡಿಯೊಳಗೆ ಮಯೂರಿಯಿರಲಿಲ್ಲ. ಹಾಗೆಯೇ ಶಕುನವೆಂಬಂತೆ ಗರ್ಭಗುಡಿಯೊಳಗಿದ್ದ ದೀಪವೂ ಆರಿತ್ತು!!
Share

Subscribe to our emails
Subscribe to our mailing list for insider news, product launches, and more.