Prasad Naik
ಮುಸ್ಸಂಜೆ ಮಾತು
ಮುಸ್ಸಂಜೆ ಮಾತು
Publisher - ವೀರಲೋಕ ಬುಕ್ಸ್
- Free Shipping Above ₹300
- Cash on Delivery (COD) Available
Pages - 172
Type - Paperback
Pickup available at 67, South Avenue Complex, DVG Road, Basavanagudi
Usually ready in 24 hours
ವಯಸ್ಸಾಗುವುದು ಎಂಬ ಅನುದಿನದ ಪ್ರಕ್ರಿಯೆಯೇ ಸೃಷ್ಟಿಯ ಒಂದು ಸೋಜಿಗ. ಸಾವಿಗೆ ಸನಿಹವಿದೆಯೆಂಬ ಕಾರಣಕ್ಕೋ ಏನೋ ವಯಸ್ಸಾಗುವುದೆಂದರೆ ನಿಡುಸುಯ್ಯುವವರೇ ಹೆಚ್ಚು. ಹಾಗಂತ ವಯಸ್ಸಾಗುವುದೇನು ನಿಲ್ಲುತ್ತದೆಯೇ? ಖಂಡಿತ ಇಲ್ಲ! ಮುಪ್ಪು, ವೃದ್ಧಾಪ್ಯ, ವಾನಪ್ರಸ್ಥಗಳೆಂದು ಹಲವು ಹೆಸರುಗಳಲ್ಲಿ ಕರೆಯಲಾಗುವ ಈ ಹಂತವು ಬರುವ ಸಮಯದಲ್ಲಿ ಬಂದೇ ಬರುತ್ತದೆ. ವರ್ಷಗಳಲ್ಲಿ ಆಯಸ್ಸನ್ನು ಅಳೆಯುವ ನಮಗೆ, ನಿಮಿಷಗಳಲ್ಲಿ ಸೋರಿಹೋಗುವ ಆಯಸ್ಸೇಕೆ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ? ವೃದ್ದಾಪ್ಯದಲ್ಲೂ ಚಂದದ ಬದುಕು ಸಾಧ್ಯವಿಲ್ಲವೇ? ವೃತ್ತಿಬದುಕಿನಿಂದ ನಿವೃತ್ತಿಗೆ ತಯಾರಾದಂತೆ, ಬದುಕಿನಲ್ಲಿ ವೃದ್ಧಾಪ್ಯಕ್ಕೆ ತಯಾರಾದರೆ ತಪ್ಪೇನಿದೆ? ಹೀಗೆ ಹಲವು ಪ್ರಶ್ನೆ-ತಲಾಶೆಗಳ ಚುಂಗು ಹಿಡಿಯುತ್ತಾ ಹೊರಟ ನನಗೆ ದಕ್ಕುತ್ತಾ ಹೋದ ಸಂಗತಿಗಳು ಸಾಕಷ್ಟು ಈ ವಿಷಯದ ಬಗ್ಗೆ ಪುಸ್ತಕವೊಂದನ್ನು ಬರೆಯಲು ನನಗೇನು ಮಹಾವಯಸ್ಸು ಎಂಬ ಪ್ರಶ್ನೆಯು ಕಾಡಿದ್ದೇನೋ ಹೌದು. ಆದರೆ ಬರಹಗಾರನೊಬ್ಬ ತನ್ನನ್ನು ಬಲವಾಗಿ ಕಾಡಿದ ಸಂಗತಿಗಳ, ಕತೆಗಳ ಬಗ್ಗೆ ತನ್ನ ಓದುಗರೊಂದಿಗೆ ಹೇಳಿಕೊಳ್ಳದೆ ಹೆಚ್ಚು ಕಾಲ ಇರಲಾರ. ಇವೆಲ್ಲದರ ಫಲವೇ ಈ ಪುಸ್ತಕ. "ಮುಸ್ಸಂಜೆ ಮಾತು" ಬದುಕಿನ ಮುಸ್ಸಂಜೆಯ ಕತೆಗಳನ್ನು ನಿಮಗಾಗಿ ತೆರೆದಿಟ್ಟಿರುವ ಒಂದು ಕಿರುಹೊತ್ತಗೆ. ಒಂದಲ್ಲ ಒಂದು ಹಂತದಲ್ಲಿ ಬದುಕಿನ ಮುಸ್ಸಂಜೆಯನ್ನು ನೋಡಲಿರುವ ಪ್ರತಿಯೊಬ್ಬರೂ ಒಮ್ಮೆ ಓದಬೇಕಾದ ಪುಸ್ತಕವಿದು ಎಂದು ವಿನಯದಿಂದ ಹೇಳಬಲ್ಲೆ!
- ಪ್ರಸಾದ್ ನಾಯ್ಕ
Share
Subscribe to our emails
Subscribe to our mailing list for insider news, product launches, and more.