Skip to product information
1 of 1

ವೈದೇಹಿ

ಮುಂತಾದ ಕೆಲ ಪುಟಗಳು

ಮುಂತಾದ ಕೆಲ ಪುಟಗಳು

Publisher: ಅಕ್ಷರ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.
ಕೋ.ಲ. ಕಾರಂತ, ಸೇಡಿಯಾಪು ಕೃಷ್ಣಭಟ್ಟ, ಬಿ.ಎ. ಕಾರಂತ ಅವರಂಥ ಹಿರಿಯ ಚೇತನಗಳ ಮಾತುಗಳ ಲಿಪಿಕಾರ್ತಿಯಾಗಿ ಆಡುಮಾತಿನ ಜೀವನ ವೃತ್ತಾಂತಕ್ಕೆ ಬರಹದಲ್ಲಿ ಆಕಾರ ಮೂಡಿಸಿ ಮಹತ್ವದ ಸಾಂಸ್ಕೃತಿಕ ದಾಖಲೆಗಳನ್ನು ಕನ್ನಡ ವಾಜಯಕ್ಕೆ ಸೇರಿಸಿರುವ ವೈದೇಹಿ ಈಗ ಈ ಸರಣಿಗೆ ಮತ್ತೊಂದು ಅಮೂಲ್ಯವಾದ ಕೊಡುಗೆಯನ್ನು ಕೂಡಿಸಿದ್ದಾರೆ. ಪ್ರಸ್ತುತ ಸಂಪುಟವು ಇನ್ನೂ ಒಂದು ಕಾರಣಕ್ಕಾಗಿ ಮುಖ್ಯವಾಗುತ್ತದೆ. ಈ ಹೊತ್ತಿನ ಓದುಗರಿಗೆ ಅಪರಿಚಿತವೇ ಆಗಿದ್ದ ಹಳೆ ತಲೆಮಾರಿನ ಪ್ರತಿಭಾವಂತ ಬರಹಗಾರ್ತಿಯೊಬ್ಬರ ಜೀವನ ಸಾಧನೆಗಳನ್ನು ತೆರೆದು ತೋರಿಸುವ ಮೂಲಕ ಕನ್ನಡದ ಕಥನದಲ್ಲಿ ಕಣ್ಮರೆಯಾಗಿದ್ದ ಕೊಂಡಿಯೊಂದನ್ನು ಈ ಕೃತಿಯು ಸಮಕಾಲೀನ ಸಾಹಿತ್ಯ ಸಂಸ್ಕೃತಿಗೆ ಜೋಡಿಸುತ್ತದೆ.

ಮಾತ್ರವಲ್ಲ, ಈ ಪುಸ್ತಕದಲ್ಲಿ ವೈದೇಹಿಯವರು ಸರಸ್ವತಿಬಾಯಿ ರಾಜವಾಡೆಯವರ ಭೂತಕಾಲದ ವೃತ್ತಾಂತಗಳಿಗೆ ಕಿವಿಯಾಗಿ, ಮತ್ತು ಅವರ ಕೊನೆಗಾಲದ ವರ್ತಮಾನದ ಜೀವನಕ್ರಮಕ್ಕೆ ಪ್ರತ್ಯಕ್ಷ ಸಾಕ್ಷಿಯೂ ಆಗಿ, ಇವೆರಡರ ದ್ವಂದ್ವಾತ್ಮಕ ಗ್ರಹಿಕೆಯಲ್ಲಿ ಪ್ರಸ್ತುತ ಕಥನವನ್ನು ಕಟ್ಟಿದ್ದಾರೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)