Skip to product information
1 of 1

ಸದಾಶಿವ ಶಣೈ

ಮುಗಿಯದಿರಲಿ ಬಂಧನ

ಮುಗಿಯದಿರಲಿ ಬಂಧನ

Publisher: ಸಾವಣ್ಣ ಪ್ರಕಾಶನ

Regular price Rs. 170.00
Regular price Rs. 170.00 Sale price Rs. 170.00
Sale Sold out
Shipping calculated at checkout.

ಸಿನಿಮಾ ನಾನು ಬಾಲ್ಯದಿಂದಲೂ ಸದಾ ಸಂಬಂಧ ಬೆಳೆಸಿಕೊಂಡ ಮಾಧ್ಯಮ ಅಮ್ಮನ ಜೊತೆಯಲ್ಲಿ ಸಿನಿಮಾಗಳಿಗೆ ನಾನು ಸದಾ ಹೋಗುತ್ತಿದ್ದ ಹಾಗೂ ಇದೊಂದೇ ರೀತಿಯಲ್ಲಿ ನಾನು ಸಿನಿಮಾಗಳನ್ನು ನೋಡುತ್ತಿದ್ದದ್ದೂ ಸಹ. ಅಮ್ಮ ನನ್ನನ್ನು ಕರೆದುಕೊಂಡು ಹೋದ ಸಿನಿಮಾಗಳ ಪೈಕಿ ಒಬ್ಬ ನಟ ನನ್ನ ಗಮನವನ್ನು ಸೆಳೆದರು. ಸ್ಪುರದ್ರೂಪಿ ವ್ಯಕ್ತಿ, ಆತನ ಮಾಂತ್ರಿಕ ಕಣ್ಣುಗಳು ಹಾಗೂ ಅದ್ಭುತ ಹೊಡೆದಾಟದ ದೃಶ್ಯಗಳಲ್ಲಿ ಬೆರಗುಂಟು ಮಾಡುತ್ತಿದ್ದ ನಟ. ಆ ದಿನಗಳಲ್ಲಿ ಅಂತಹ ದೃಶ್ಯಗಳು ಎಲ್ಲ ಮಕ್ಕಳನ್ನು ಆಕರ್ಷಿಸುತ್ತಿದ್ದವು. ನಾನೂ ಕೂಡಾ ಅದಕ್ಕೆ ಹೊರತಾಗಿರಲಿಲ್ಲ.

ನಾನು ಬೆಳೆದಂತೆ ಈ ಸಭ್ಯ ನಟನ ಬಗ್ಗೆ ನನಗಿದ್ದ ಆಕರ್ಷಣೆಯು ಅಭಿಮಾನವಾಗಿ ಬದಲಾಗುತ್ತಾ ಹೋಯಿತು. ಅವರು ನನಗೆ ಒಂಥರಾ ಆರಾಧ್ಯ ದೈವವಾದರು. ನಾನು ಅವರ ಚಿತ್ರಗಳನ್ನು ಎಂದೂ ನೋಡದೆ ಬಿಡುತ್ತಿರಲಿಲ್ಲ. ಅವರನ್ನು ಭೇಟಿಯಾಗುವ ಯಾವ ಅವಕಾಶವನ್ನು ನಾನು ಕಳೆದುಕೊಳ್ಳಲಿಲ್ಲ. ನಾನೂ ಬೆಳೆದು ಒಬ್ಬ ನಟನಾದೆ. ಅವರ ಬಗ್ಗೆ ಇದ್ದ ಆರಾಧ್ಯ ಭಾವನೆ ಅಪಾರ ಗೌರವವಾಗಿ ಮಾರ್ಪಟ್ಟಿತು. ಅವರೊಂದಿಗೆ ಹೆಚ್ಚು ಸಮಯ ಕಳೆಯುವ ಮತ್ತು ಅವರನ್ನು ಇನ್ನಷ್ಟು ಚೆನ್ನಾಗಿ ಅರಿತುಕೊಳ್ಳುವ ಅವಕಾಶಗಳನ್ನು ಒದಗಿಸುವ ಸನ್ನಿವೇಶಗಳು ಸುದೈವದಿಂದ ಸೃಷ್ಟಿಯಾದವು. ಅವರು ನಮ್ರತೆ, ಶಾಂತಸ್ವಭಾವ ಮತ್ತು ಮಾನವೀಯತೆಯ ಸಾಕಾರಮೂರ್ತಿಯಾಗಿದ್ದರು. ನೀವೊಮ್ಮೆ ಅವರ ಸ್ನೇಹಲೋಕ ಪ್ರವೇಶಿಸಿದರೆ, ನೀವು ವಾಪಸ್ ಬರಲು ಸಾಧ್ಯವೇ ಇಲ್ಲ. ಇವತ್ತಿಗೂ ಅವರು ನನಗೆ ಒಂದು ವ್ಯಸನ, ನಾನು ತೀವ್ರವಾಗಿ ಮಿಸ್ ಮಾಡಿಕೊಳ್ಳುವ ವ್ಯಸನ ಅವರ ಹೆಸರಿನ ಹಚ್ಚೆ ನನ್ನ ಮೈಮೇಲೆ ಕಾಣಿಸಿಕೊಂಡಿಲ್ಲದಿರಬಹುದು. ಅವರಿಗೆ ನಾನು ಏನೂ ಕೊಡುಗೆ ನೀಡಿಲ್ಲದೆ ಇರಬಹುದು. ನಾನು ಯಃಕಶ್ಚಿತ್ ಮನುಷ್ಯನಾಗಿರಬಹುದು. ಆದರೂ ನಾನು ಸದಾ ಅವರನ್ನು ಪ್ರಶ೦ಸಿಸುವ, ಅನುಸರಿಸುವ, ಆರಾಧಿಸುವ ಅಭಿಮಾನಿಯಾಗಿದ್ದೇನೆ. ವಿಷ್ಣು ಸರ್, ನಾನು ನಿಮ್ಮನ್ನು ಆಧರಿಸುತ್ತೇನೆ. ನಿಮ್ಮ ಜೀವನದಲ್ಲಿ ನನಗೊಂದಿಷ್ಟು ಸ್ಥಳ ಕೊಟ್ಟಿದ್ದಕ್ಕಾಗಿ ಹಾಗೂ ನಾನು ನಿಮ್ಮನ್ನು ಪ್ರತಿ ಬಾರಿ ಭೇಟಿಯಾದಾಗಲೂ ನನ್ನ ಮೇಲೆ ಪ್ರೀತಿಯ ಮಳೆಗರೆದಿದ್ದಕ್ಕಾಗಿ ನಿಮಗೆ ಧನ್ಯವಾದಗಳು, ಮೈಕ್‌ನಲ್ಲಿ 'ಆಕ್ಷನ್' ಎಂದು ಕರೆಯುವ ಅವಕಾಶವನ್ನು ನನಗೆ ಕೊಟ್ಟಿದ್ದಕ್ಕಾಗಿ ನಾನು ನಿಮಗೆ ಋಣಿ. ಏಕೆಂದರೆ "ನಾನು, ಕಿಚ್ಚ ಒಬ್ಬ ದಿಗ್ಗಜನನ್ನು ನಿರ್ದೇಶನ ಮಾಡಿದ್ದೇನೆ" ಯಾವತ್ತಿಗೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಅವಕಾಶವದು.

ನೆನಪಿಡಿ : ಇತರರ ಹೃದಯಗಳಲ್ಲಿ ನೆಲೆಸುವ ವ್ಯಕ್ತಿ ಯಾವತ್ತಿಗೂ ಅಮರ, ದಿಗ್ಗಜ ಮತ್ತು ಅದಕ್ಕೂ ದೊಡ್ಡ ಪ್ರಭಾವಳಿ ಹೊಂದಿದ ವ್ಯಕ್ತಿತ್ವವನ್ನು ಕೃತಿ ರೂಪಕ್ಕೆ ಇಳಿಸುವುದೇ ಕಷ್ಟ, ಆ ದಿಗ್ಗಜ ಹೇಳಿದ್ದನ್ನೇ ಬರೆಯುವುದು ಇನ್ನೂ ಪ್ರಯಾಸದ ಕೆಲಸ. ಕೇವಲ ಮನಸ್ಸಿನಿಂದ ಮಾತನಾಡುವವರು ಮಾತ್ರ ಈ ದಿಗ್ಗಜನ ವ್ಯಕ್ತಿತ್ವವನ್ನು ವರ್ಣಿಸುವಂತಹ ಸಾಲುಗಳನ್ನು ಬರೆಯಲು ಸಾಧ್ಯ. ಸರಳವಾಗಿ ಹೇಳಬೇಕೆಂದರೆ, ಒಬ್ಬ ಒಳ್ಳೆಯ ವ್ಯಕ್ತಿ ಮಾತ್ರ ಒಬ್ಬ ಮಹಾನ್ ವ್ಯಕ್ತಿ ಬಗ್ಗೆ ಬರೆಯಬಲ್ಲ. ಶೆಣೈ ಸರ್, ನಿಮಗೆ ನನ್ನ ಗೌರವ ಮತ್ತು ಶುಭಾಶಯಗಳು

ಪ್ರೀತಿಯಿಂದ

ಕಿಚ್ಚ

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)