Bhuvaneshwari Hegde
Publisher -
- Free Shipping
- Cash on Delivery (COD) Available
Couldn't load pickup availability
ಚಿಳ್ಳೆಪಿಳ್ಳೆಗಳೊಂದಿಗೆ ತಮ್ಮನ ಮನೆಗೆ ಹೊರಟಿದ್ದರು ಲೇಖಕಿ. ಬೇಟೆಗಾರರು ಗಾಯಗೊಳಿಸಿದ್ದ ಕಾಡುಹಂದಿಯೊಂದು ಎದುರಾಯಿತು. ಗಾಯಗೊಂಡು ರೋಷದಿಂದ ಕುದಿಯುವ ಹಂದಿ ಭಾರಿ ಅಪಾಯದ ಸನ್ನಿವೇಶ. ಲೇಖನಿಯನ್ನೇ ಖಡ್ಗ ಮಾಡಿಕೊಂಡು ಸ್ಟೋರ್ಡ್ ಫೈಟ್ ಮಾಡಿ ಹಂದಿಯನ್ನು ಹಿಮ್ಮೆಟ್ಟಿಸಬೇಕು. ಆದರೆ ಇವರ ಕೈಗೆ ಸಿಕ್ಕಿದ್ದು ಒಂದು ಒಣ ರೆಂಬೆ, ಅದನ್ನೇ ನೆಲಕ್ಕೆ ಅಪ್ಪಳಿಸುತ್ತ ಹಾಹಾ ಹೂಹೂ ಎಂದು ಜೋರಾಗಿ ಬೊಬ್ಬೆ ಹಾಕಿದರು. ಪ್ರಾಣ ರಕ್ಷಣೆಗಿದ್ದ ಏಕೈಕ ಮಾರ್ಗವೆಂದರೆ ಅದೊಂದೇ, ಬೊಬ್ಬೆಗೆ ಹೆದರಿದ ಹಂದಿ ಒಂದು ಕ್ಷಣ ನಿಂತು ಕೆಕ್ಕರಿಸಿ ನೋಡಿತು. ಅದಕ್ಕೇನೆನ್ನಿಸಿತೋ, ಕೊನೆಗೆ ಹಾಳಾಗಲಿ ನಿಮ್ಮ ಬೊಬ್ಬೆ ಎನ್ನುವಂತೆ ಗುಟುರುಗುಡುತ್ತ ದಾರಿಬಿಟ್ಟು ಕಾಡಿ.ಗಿಳಿಯಿತು |
'ಮೃಗಯಾ-ವಿನೋದ' ಶ್ರೀಮತಿ ಭುವನೇಶ್ವರಿ ಹೆಗಡೆ ಅವರ ನಗೆ ಲೇಖನಗಳ ಸಂಗ್ರಹ, ಇದರಲ್ಲಿರುವ ಪ್ರತಿಯೊಂದು ಲೇಖನ ಎದೆಯಲ್ಲಿ ಬತ್ತಿಹೋಗಿರಬಹುದಾದ ನಗೆಯ ಚಿಲುಮೆಯನ್ನು ಉಕ್ಕಿಸಬಲ್ಲದು. ಎಂಥ ಬಿಕ್ಕಟ್ಟಿನ ಸಂದರ್ಭದಲ್ಲೂ ಇವರು ಹೇಗೆ ಮನಸ್ಸು ತೆರೆದು ನಗುತ್ತಾರೆ ಎಂದು ಅಸೂಯೆಯಿಂದ ನೀವೂ ನಗಬಹುದು | ಶ್ರೀ ಪ್ರಕಾಶ್ ಶೆಟ್ಟಿ ಅವರ ಚಿತ್ರಗಳಿವೆ.
ಪ್ರಕಾಶಕರು - ನವಕರ್ನಾಟಕ ಪ್ರಕಾಶನ
