Keshavareddy Handrala
Publisher - ಸಪ್ನ ಬುಕ್ ಹೌಸ್
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಗ್ರಾಮೀಣ ಭಾರತದ ಶ್ರೀಸಾಮಾನ್ಯರ ನೋವು, ನಲಿವು, ಸಂಕಟ, ಸುಮ್ಮಾನಗಳನ್ನು ಕಥೆಗಳ ಮೂಲಕ ಓದುಗರ ಮನಮುಟ್ಟುವಂತೆ ಚಿತ್ರಿಸಿಕೊಟ್ಟ ಕೇಶವರೆಡ್ಡಿ ಹಂದ್ರಾಳ ಅವರು ಈಗ ಕಾದಂಬರಿಯ ಮೂಲಕ ಸಿರಿವಂತ ಉದ್ಯಮಿ ರಾಜಕಾರಣಿಗಳ ಐಶಾರಾಮಿ ವಿಚಿತ್ರ ಬದುಕಿನ ಮಾಯಾಲೋಕವನ್ನು ಅನಾವರಣಗೊಳಿಸಿದ್ದಾರೆ. ಇಲ್ಲಿ ಪ್ರೀತಿ, ಪ್ರೇಮ, ವಾತ್ಸಲ್ಯ, ಮಾನವೀಯತೆ ಮುಂತಾದ ಭಾವನಾತ್ಮಕ ಸಂಬಂಧಗಳಿಗೆ ಜಾಗವಿಲ್ಲ. ಅಧಿಕಾರ, ಸಂಪತ್ತು, ದೈಹಿಕ ಸುಖ ಭೋಗಗಳೇ ಪ್ರಧಾನ ಗುರಿ. ಈ ಕೃತಿಯನ್ನು ಕಥೆಯ ಕುತೂಹಲಕ್ಕೆ ಓದಿದರೆ ಉಪಯೋಗವಿಲ್ಲ. ಈ ಕಾದಂಬರಿಯಲ್ಲಿ ಬರುವ ಪಾತ್ರಗಳು, ಪಾತ್ರಗಳ ಇತಿಹಾಸ, ಪಾತ್ರಗಳ ನಡವಳಿಕೆ ಮತ್ತು ಅವು ಚರ್ಚಿಸುವ ಸಿದ್ಧಾಂತಗಳು ಮತ್ತು ಜೀವನ ವಿಧಾನಗಳನ್ನು ಚರ್ಚಿಸುತ್ತಾ ಹೋದರೆ ಜೀವಜಗತ್ತಿನ ವ್ಯಾಪ್ತಿಯ ರಹಸ್ಯ ಅರಿವಾಗುತ್ತದೆ.
