Girimane Shyamarao
Publisher - ಗಿರಿಮನೆ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ನಮಸ್ಕಾರ,
ಇವರು ದುಷ್ಟರು, ಇವರು ಶಿಷ್ಟರು ಎಂದೇನೂ ನೋಡದೆ ಪ್ರಕೃತಿ ಎಲ್ಲರಿಗೂ ಆಶ್ರಯ ಕೊಡುತ್ತದೆ, ಆದರೆ ದುಷ್ಟರು ಕೂಡಾ ಮಾಡಿದ್ದನ್ನು ಅನುಭವಿಸಲೇಬೇಕು ಎನ್ನುವುದು ಪ್ರಕೃತಿಯನ್ನೂ ದುಷ್ಟರನ್ನೂ ನಿರ್ಮಾಣ ಮಾಡಿದ ಭಗವಂತನ ನಿಯಮ. ಇದು ವೀರಪ್ಪನ್‌ನ ಕತೆಯಲ್ಲ; ಆದರೆ ಅದನ್ನೇ ಹೋಲುವ, ಕಾಡಿನ ಬದುಕನ್ನು ಹೊರಜಗತ್ತಿಗೆ ತೋರಿಸುವ ಪರೋಕ್ಷ ಪ್ರಯತ್ನ ಅಷ್ಟೆ. ಜ್ಞಾನದ ಕೊರತೆ ಇರುವ ಮನುಷ್ಯ ಹೇಗೆ ಮೃಗದಂತೆ ವರ್ತಿಸುತ್ತಾನೆ; ಅನಿವಾರ್ಯತೆ ಎಂತಹಾ ವಾತಾವರಣ ಸೃಷ್ಟಿಸುತ್ತದೆ; ಹುಟ್ಟುಗುಣದಂತೆ ಪರಿಸರ ಕೂಡಾ ಯಾವ ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ ಎನ್ನುವ ಸೂಕ್ಷ್ಮವೂ ಇದರಲ್ಲಿ ಸಿಗಬಹುದು. ಇನ್ನೊಬ್ಬರ ಕಷ್ಟ ಅರ್ಥಮಾಡಿಕೊಳ್ಳದವರ ಬದುಕಿನ ಕತೆ-ವ್ಯಥೆಯೂ ಇದರಲ್ಲಿದೆ. ಒಬ್ಬ ವ್ಯಕ್ತಿ ದುಷ್ಟನಾಗಲು ಸಮಾಜದ ಕೊಡುಗೆಯೂ ಕಾರಣವಾಗುತ್ತದೆ ಎನ್ನುವುದನ್ನು ಕೂಡಾ ಮರೆಯುವಂತಿಲ್ಲ.
ಕತೆಯ ಜೊತೆಗೇ ಪಶ್ಚಿಮ ಘಟ್ಟದ ಚಳಿ, ಮಳೆ, ಬಿಸಿಲು, ಮಂಜು, ಕಷ್ಟ-ನಷ್ಟ, ಗುಡ್ಡ-ಬೆಟ್ಟ, ಪ್ರಾಣಿ-ಪಕ್ಷಿ, ಪರಿಸರಗಳ ಬಗ್ಗೆಯೂ ಒಂದಿಷ್ಟು ರೋಚಕ ಚಿತ್ರಣ ನೀಡುವ ಉದ್ದೇಶವೂ ಇದರಲ್ಲಿದೆ. ಮಲೆನಾಡಿನಲ್ಲೇ ಹುಟ್ಟಿ ಕಾಡಿನಲ್ಲಿ ಕಳೆದ ಅನುಭವಗಳು ಬೆನ್ನಿಗಿವೆ. 'ಮಲೆನಾಡಿನ ರೋಚಕ ಕತೆ'ಗಳ ಸರಣಿಯಲ್ಲಿ ಎಲ್ಲವನ್ನೂ ಒಂದೊಂದಾಗಿ ಓದುಗರ ಮುಂದಿಡಲು ಯತ್ನಿಸುತ್ತಿದ್ದೇನೆ. ಇದು ಅದರ ಹದಿಮೂರನೆಯ ಕಂತು ಓದುಗರಿಂದ ಬಂದ, ಬರುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆ ಮೂಕವಿಸ್ಮಿತನನ್ನಾಗಿಸಿ ಮತ್ತೂ ಮತ್ತೂ ಅದರ ಬಗ್ಗೆಯೇ ಬರೆಯುವಂತೆ ಮಾಡುತ್ತಿದೆ.
ತಮ್ಮವ
ಗಿರಿಮನೆ ಶ್ಯಾಮರಾವ್
