Dharini Maya
ಮೌನದ ಚಿಪ್ಪಿನೊಳಗೆ
ಮೌನದ ಚಿಪ್ಪಿನೊಳಗೆ
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 146
Type - Paperback
Couldn't load pickup availability
ಧಾರಿಣಿ ಮಾಯಾ ಅವರ 'ಮೌನದ ಚಿಪ್ಪಿನೊಳಗೆ' ಅಡಗಿ ಕೂತ ಮಾತಿನ ಸ್ಪೋಟವಿದೆ. ಹಾಗೆಂದೆ ಈ ಇಲ್ಲಿನ ಲೇಖನಗಳಲ್ಲಿ ಮೌನ ಮಾತನ್ನು ಅವಲಂಬಿಸಿದರೆ, ಮಾತು ಮೌನಕ್ಕೆ ಶರಣಾಗುತ್ತದೆ. ಇಲ್ಲಿನ ಲೇಖನಗಳ ಇನ್ನೊಂದು ವಿಶೇಷತೆ ಎಂದರೆ ಕನಲಿ ಕೆಂಡವಾಗಬಹುದಾಗಿದ್ದ ಮನಸ್ಥಿತಿಯನ್ನು ಸಂಯಮಕ್ಕೆ ಕಟ್ಟಿಹಾಕುತ್ತಾರೆ. ಹುಡುಕಿದರೂ ಸಿಗದ ಪ್ರತಿಭಟನಾತ್ಮಕ ಮನೋಭಾವ ಮತ್ತು ವಾಸ್ತವವನ್ನು ಅದರ ಕಹಿ ಸತ್ಯಗಳೊಂದಿಗೆ ನವಿರಾಗಿ ಮನವೊಲಿಸುವ ಲೇಖನ ಶೈಲಿಯೊಳಗೆ ಸಾತ್ವಿಕ ವಾದ, ಸಿಟ್ಟು ಮತ್ತು ವ್ಯಂಗ್ಯವಿದೆ.
ಬದಲಾದ ಕಾಲ ಮತ್ತು ಬದಲಾದ ಮನಸ್ಥಿತಿಗಳ ನಡುವೆ ಬದಲಾಗದ ಸ್ತ್ರೀತ್ವದ ಇರುವಿಕೆ ಕುರಿತ ಪ್ರಶ್ನೆಗಳು ಈ ಬರಹಗಳ ಮೂಲ ಧಾತುವಾಗಿದೆ. ಇಲ್ಲಿನ ಲೇಖನಗಳ ಮತ್ತೊಂದು ಗುಣ ಎಂದರೆ ಸಂವಾದೀ ರೂಪದ, ರಂಪ ರಚ್ಚೆ ರಗಳೆ ಎನಿಸದ ಪಿಸುಮಾತು. ಇಡಿ ಬರಹ ಮಾಲೆಯ ಹಿಂದಿನ ಟ್ಯಾಗ್ ಲೈನ್ ಎಂದರೆ 'ಮೌನ ಕೊಲ್ಲುತ್ತದೆ.' ಯಾರನ್ನು ಕೊಲ್ಲುತ್ತದೆ ಎಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ಅದು ಇಡೀ ವ್ಯವಸ್ಥೆಯತ್ತ ಬೆರಳು ಮಾಡಿ ತೋರಿಸುತ್ತದೆ. ಇಲ್ಲಿನ ಮೌನ ಅದು ಶಾಬ್ಲಿಕವಾದ ಅರ್ಥದಿಂದ ಹೊರಬಂದು ಮಾತಿಗೆ ಇಳಿವ ಪರಿ ಯಾವತ್ತೂ ಸಮಾಜದ ಪರವೇ.
ಇಡೀ ಕೃತಿಯಲ್ಲಿ ಹಿಡಿದು ನಿಲ್ಲಿಸಬಲ್ಲ ಒಂದು ವಾಕ್ಯ-'ಅವಳ ಮೌನದ ಕಾರಣ ಕಡೆಗಣಿಸಲ್ಪಟ್ಟಿರುತ್ತದೆ.' ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ಗಾಢ ಮಮತೆಯ ಜೀವದ ಮೌನವು ಕಡೆಗಣಿಸಲ್ಪಟ್ಟಾಗಿನ ಸನ್ನಿವೇಶಗಳನ್ನು ಲೇಖಕಿ ಇಲ್ಲಿ ಮಾತಿಗೆ ಕೂಡಿಸುತ್ತಾರೆ. ಇಲ್ಲಿನ ಲೇಖನಗಳು ಮೆಚ್ಚುಗೆ ಆಗಲು ಕಾರಣ ಕಟು ಸತ್ಯವನ್ನು ಕೂಡಾ ತಣ್ಣಗೆ ತಲುಪಿಸುವ ವೈಖರಿ ಇಂದ.
ಧಾರಿಣಿ ಮಾಯಾ ಅವರ ಈ ಕೃತಿ ಮಹಿಳೆಯ ಇರುವಿಕೆಯನ್ನು ಕೇಂದ್ರ ಮಾಡಿಕೊಂಡೂ ಅದರ ಪರಿಧಿಯ ವಿಸ್ತತತೆಯಲ್ಲಿ ಒಳಗೊಳ್ಳುವ ವಿಷಯ ವಸ್ತು ತನಗೆ ಅರಿವಿಲ್ಲದೇ ಸಾಮಾಜಿಕಿಕರಣ ಮತ್ತು ಸಮಾಜದ ಮೂಲ ಎಲಿಮೆಂಟ್ಗಳನ್ನು ತರಾಟೆಗೆ ತೆಗೆದುಕೊಂಡು ಸಾಮಾಜಿಕ ಆಯಾಮದ ಗಟ್ಟಿಯಾದ ನಿದರ್ಶನವಾಗಿ ನಿಲ್ಲುತ್ತದೆ. ಈ ಕೃತಿಯ ಶಕ್ತಿಯೇ ಇದು.
-ವಾಸುದೇವ ನಾಡಿಗ್
Share

Subscribe to our emails
Subscribe to our mailing list for insider news, product launches, and more.