Beechi
Publisher - ಅಂಕಿತ ಪುಸ್ತಕ
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಬೀಚಿಯವರು ಬರೆದಿರುವ ಅದ್ಭುತವಾದ ಕಾದಂಬರಿ. ನಮ್ಮ ನಿತ್ಯ ಜೀವನದಲ್ಲಿ ಕಂಡುಬರುತ್ತಿರುವ ಅನೇಕ ದಾರುಣ ಚಿತ್ರಗಳಲ್ಲಿ ಇದೂ ಒಂದು. ನೋಡಿದೊಡನೆ ಒಬ್ಬಳನ್ನು 'ಅಂಥವಳು' ಅನ್ನುತ್ತೇವೆ. ಇನ್ನೊಬ್ಬಳನ್ನು 'ಛೇ! ಪಾಪ' ಅನ್ನುತ್ತೇವೆ. ಅದೂ ತಪ್ಪು , ಇದೂ ತಪ್ಪು ಎಂಬುದು ತಿಳಿದಾಗ ತಬ್ಬಿಬ್ಬಾಗುತ್ತೇವೆ. ಆಗಿನ ಮುಖಕ್ಕೆ ಇದು ಕನ್ನಡಿ.
ಮನೆಯಲ್ಲಿ ಕಮಲಮ್ಮನಂತಹ ಒಬ್ಬ ಸಾಧ್ವಿ ಇರುವಳೆಂದೇ, ಆ ಮನೆ ಮಸಣವಾಗದೆ ಉಳಿದಿರುತ್ತದೆ. ಒಳ್ಳೆಯ ಹೆಣ್ಣು ಮನೆಗೊಂದು ನಂದಾದೀಪ.
ಶಕುನಿಯಂತಹ ಪಾಟೀಲ, ಹೆಸರಿಗೆ ತಕ್ಕಂತೆ ಇರುವ ಹುಚ್ಚಪ್ಪ, ಅಧಿಕಾರ ಮದದಿಂದ ಅವಿವೇಕಿಯಾಗುವ ಹೊನ್ನಯ್ಯ, ಗೀತೆಯ ಮಾತನ್ನು ಆತ್ಮಕ್ಕೆ ಕಲಿಸಿಕೊಟ್ಟ ಋಷಿಯಂತಹ ಕಸ್ತೂರಿರಂಗನ್ ಇದ್ದಾರೆ ನಮ್ಮ ಸುತ್ತಲೂ, ಇನ್ನು ಮುಂದೆಯೂ ಇರುತ್ತಾರೆ, ಒಬ್ಬೊಬ್ಬರು ಒಂದೊಂದು ತೆರನಾಗಿ ಪಾಠ ಕಲಿಸುತ್ತಾರೆ, ಕಲಿಯಬೇಕೆಂಬ ಬಯಕೆ ಇದ್ದವರಿಗೆ ಇಷ್ಟು ಸಾಕು.
