ಮಿಸಳ್ ಭಾಜಿ

ಮಿಸಳ್ ಭಾಜಿ

ಮಾರಾಟಗಾರ
ಭಾರತಿ ಬಿ ವಿ
ಬೆಲೆ
Rs. 120.00
ಕೊಡುಗೆಯ ಬೆಲೆ
Rs. 120.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಈ ಪುಸ್ತಕವಂತು ಒಳ್ಳೆ ಪ್ರಬಂಧಗಳ ಗುಚ್ಛವಾಗಿದೆ. ಗರಿಬಿಚ್ಚಿದ ನವಿಲಿನಂತ ಸಂತೋಷದಿಂದ ತಮ್ಮ ಬದುಕಿನ ಹಲವು ನಗೆಯ ಸಂಗತಿಗಳನ್ನು ಹೇಳಿಕೊಂಡಿದ್ದಾರೆ ಲೇಖಕರು. ಹಾಗಂತ ಹಾಸ್ಯದ ರಭಸದಲ್ಲಿ, ಬದುಕಿನ ಗಂಭೀರತೆ ಇಲ್ಲಿ ಲೇವಡಿಗೊಳಗಾಗಿಲ್ಲ. ಉಡಾಫೆಯಲ್ಲೂ ನಲುಗಿಲ್ಲ. ಸಾವಿನ ಆತಂಕ, ಬಡತನದ ಕಾರ್ಪಣ್ಯ, ಗಂಡನ ಮನೆಯ ಹೊಸತನಕ್ಕೆ ಹೊಂದಿಕೊಳ್ಳುವ ಸಂಕಷ್ಟ, ವಾಸ್ತುಶಾಸ್ತ್ರದ ಡೋಂಗಿಯಂತಹ ಗಂಭೀರ ಸಂಗತಿಗಳು ಕೂಡ ಇಲ್ಲಿ ಸಕ್ಕರೆ ಲೇಪಿತ ಹೋಮಿಯೋಪತಿ ಮಾತ್ರೆಗಳಂತೆ ನಮಗೆ ದಕ್ಕುತ್ತವೆ.

ತಮ್ಮನ್ನೇ ಗೇಲಿ ಮಾಡಿಕೊಂಡು ನಗಬಲ್ಲವರಿಗೆ, ಇನ್ನೊಬ್ಬರ ಪರಿಸ್ಥಿತಿಯನ್ನು ಕಂಡು ತಮಾಷೆ ಮಾಡುವ ಅಧಿಕಾರ ಸಹಜವಾಗಿಯೇ ದಕ್ಕುತ್ತದೆ. ಹಾಗಂತ ಲೇಖಕರ ತಮಾಷೆ ಮತ್ತೊಬ್ಬರ ಮನಸ್ಸನ್ನು ನೋಯಿಸುವಂತಹದ್ದೂ ಅಲ್ಲ.

ಬದುಕನ್ನು ವಿಪರೀತ ಗಂಭೀರ ಮಾಡಿಕೊಂಡು ತಲೆ ಕೆಡಿಸಿಕೊಂಡು ಕೂತಾಗ, ಇಂತಹ ಬರಹಗಳು ನಮ್ಮನ್ನು ಮತ್ತೆ ರೂಢಿಯ ಲಯಕ್ಕೆ ಹಚ್ಚುವುದಕ್ಕೆ ನೆರವಾಗುತ್ತವೆ. ಸದ್ಯದ ಕನ್ನಡ ಸಾಹಿತ್ಯಲೋಕದ ಪರಿಸ್ಥಿತಿಗಂತೂ, ಈ ಪುಸ್ತಕ ಸಂಜೀವಿನಿ. ಎಲ್ಲರೂ ಸೇರಿ ಒಂಚೂರು ನಗುವುದು ಈ ಹೊತ್ತಿನ ಅವಶ್ಯಕತೆ.