Skip to product information
1 of 2

To Kannada : Sunil Rao

ಮೈಕೆಲ್ ಕೆ ಕಾಲಮಾನ

ಮೈಕೆಲ್ ಕೆ ಕಾಲಮಾನ

Publisher - ಛಂದ ಪ್ರಕಾಶನ

Regular price Rs. 170.00
Regular price Rs. 170.00 Sale price Rs. 170.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 216

Type - Paperback

Gift Wrap
Gift Wrap Rs. 15.00

ದಕ್ಷಿಣ ಆಫ್ರಿಕಾ ಆಂತರಿಕ ಸಮರಗಳಲ್ಲಿ ನರಳುತ್ತಿದ್ದ ಸಂದರ್ಭ. ಮೈಕೆಲ್ ಕೆ ತನ್ನ ಅಮ್ಮನನ್ನು ಅವಳ ಹುಟ್ಟಿದೂರಿಗೆ ಮರಳಿ ಕರೆದೊಯ್ಯಲು ಸಿದ್ಧತೆ ಮಾಡುತ್ತಾನೆ. ದಾರಿಯಲ್ಲಿ ಆಕೆ ಸತ್ತುಹೋಗುತ್ತಾಳೆ. ದೇಶದಲ್ಲಿದ್ದ ಅರಾಜಕತೆಯ ವಾತಾವರಣದಲ್ಲಿ ಎಲ್ಲೆಡೆ ಗಸ್ತು ತಿರುಗುವ ಅಮಾನುಷ ಸೈನ್ಯದ ಸಂಚಾರಕ್ಕೆ ಮೈಕೆಲ್ ಒಂಟಿಯಾಗಿ ಸೆರೆ ಸಿಕ್ಕಿಬಿಡುತ್ತಾನೆ. ಬಂಧನವನ್ನು ಸಹಿಸಲಾಗದೆ ಆತ್ಮಗೌರವವನ್ನು ಕಾಪಿಟ್ಟುಕೊಂಡು ಬಾಳುವ ನಿರ್ಧಾರ ಮಾಡಿ ಮೈಕೆಲ್ ತಪ್ಪಿಸಿಕೊಳ್ಳುತ್ತಾನೆ. ಲೈಫ್ ಅಂಡ್ ಟೈಮ್ಸ್ ಆಫ್ ಮೈಕೆಲ್ ಕೆ ಮನುಷ್ಯಾನುಭವದ ಕೇಂದ್ರಕ್ಕೇ ಸಾಗುತ್ತದೆ. ಹಾಗೆ ಸಾಗುತ್ತ ಒಂದು ಆಧ್ಯಾತ್ಮಿಕ ಒಳಬದುಕಿನ ಅಗತ್ಯ, ನಾವು ಬದುಕುತ್ತಿರುವ ಜಗತ್ತಿನೊಂದಿಗೆ ನಮಗಿರಬೇಕಾದ ನಂಟು ಹಾಗೂ ನಮಗೆ ಅತ್ಯವಶ್ಯವಾದ ಶುದ್ಧ ಕಾಣೆಗಳನ್ನು ನಿದರ್ಶಿಸುತ್ತದೆ.

'ಶಕ್ತಿಶಾಲಿ ಹಾಗೂ ಸ್ಮರಣಾರ್ಹ ಕಾದಂಬರಿ'
-ಗಾರ್ಡಿಯನ್

'ಎದೆಯ ಆಳಕ್ಕೆ ತಟ್ಟುತ್ತದೆ... ಕಥೆ ಸ್ವಚ್ಛ, ಸ್ಪಷ್ಟ ಮತ್ತು ನೇರ. ವಿಪುಲ ಚೈತನ್ಯವಿರುವ ಒಂದು ಪ್ರಬುದ್ಧ ಕಲ್ಪನೆಯ ಕುಸುರಿ... ದೀರ್ಘ ಕಾಲ ಮನ್ನಣೆ ಉಳಿಸಿಕೊಳ್ಳುವ ಪುಸ್ತಕವಿದು.'

-ಮೇಲ್ ಆನ್ ಸಂಡೇ

'ಇದು ನಿಜಕ್ಕೂ ಬೆರಗುಗೊಳಿಸುವ ಕಾದಂಬರಿ... ಇಲ್ಲಿನ ಎಲ್ಲ ಸಂಕಟ ಮತ್ತು ಯಾತನೆಗಳ ನಡುವೆಯೂ ಲೈಫ್ ಅಂಡ್ ಟೈಮ್ಸ್ ಆಫ್ ಮೈಕೆಲ್ ಕೆ ಅನ್ನು ಓದಿ ಮುಗಿಸಿದಾಗ ಒಂದು ವಿಚಿತ್ರ ಹಿಗ್ಗು ಮೂಡುತ್ತದೆ. ಇದನ್ನು ಎಷ್ಟು ಶಿಫಾರಸು ಮಾಡಿದರೂ ಕಡಿಮೆಯೇ'

-ಈವನಿಂಗ್ ಸ್ಟಾಂಡರ್ಡ್

'ಶಕ್ತಿಶಾಲಿ, ಸರಳ ಮತ್ತು ಸೋಗಿಲ್ಲದ ಶೈಲಿಯ ಸುಂದರ ಬರವಣಿಗೆ... ಕರಾಳ ವಿನೋದ ಮತ್ತು ಮೆಲುದನಿಯ ನಿಚ್ಚಳ ನಿರೂಪಣೆ ಅದರ ಹೆಗ್ಗಳಿಕೆಗಳು.'

-ಸಂಡೇ ಎಕ್ಸ್ಪ್ರೆಸ್

'ಕುಟ್ಸೀಯವರ ಬರವಣಿಗೆಯ ಮೇಲೆ ಅಡಗಿರುವುದು ಅದರ ಆಂತರ್ಯದ ಕಾಣೆಯಲ್ಲಿ; ವಿಷಣ್ಣ ನಿರೂಪಣೆಯಿದ್ದೂ, ಓದುಗನಲ್ಲಿ ಅದು ಪ್ರೇರಿಸುವ ದಟ್ಟ ಅನುಕಂಪ. ಮನುಷ್ಯ ಸ್ವಭಾವದ ಬಗ್ಗೆ ಅದು ತೋರುವ ಸಹಜ ಕಾಳಜಿ'

-ಫೈನಾನ್ಸಿಯಲ್ ಟೈಮ್ಸ್

View full details